Israel Vs Iran: ಇರಾನ್ ಮೇಲೆ ದಾಳಿ ಆರಂಭಿಸಿದ ಇಸ್ರೇಲ್

ತಮ್ಮ ಮೇಲೆ ದಾಳಿ ಮಾಡಿದ್ದ ಇರಾನ್‌ ಮೇಲೆ ಇಸ್ರೇಲ್ ತಿರುಗಿಬಿದ್ದಿದೆ. ಇರಾನ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿ ಮಾಡುತ್ತಿದೆ ಎಂದು ವರದಿಯಾಗಿದೆ. ಇಸ್ರೇಲ್ ರಕ್ಷಣಾ ಪಡೆ ಈ ವಿಚಾರವನ್ನು ಖಚಿತಪಡಿಸಿದ್ದು, ಆತ್ಮರಕ್ಷಣೆಗಾಗಿ ಇರಾನ್ ಮೇಲೆ ದಾಳಿ ಮಾಡುತ್ತಿರುವುದಾಗಿ ಸಮರ್ಥನೆ ನೀಡಲಾಗಿದೆ. ಇರಾನ್ ಮೇಲೆ ದಾಳಿ ಮಾಡುತ್ತಿರುವ ಬೆನ್ನಲ್ಲೇ ಜಾಗರೂಕರಾಗಿರಿ ಎಂದು ಇಸ್ರೇಲ್ ನಾಗರಿಕರಿಗೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮುಖ್ಯಸ್ಥ ಡೇನಿಯಲ್ ಹಗರಿ ಸೂಚನೆ ಕೊಟ್ಟಿದ್ದಾರೆ.

ಈಗ ನಡೆಯುತ್ತಿರುವ ದಾಳಿಯಲ್ಲಿ ಯುಎಸ್‌ ರಕ್ಷಣಾ ಪಡೆಯ ಸಿಬ್ಬಂದಿಯಾಗಲಿ ಅಥವಾ ಯುದ್ಧೋಪಕರಣಗಳು ಭಾಗಿಯಾಗಿಲ್ಲವಾದರೂ, ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಇಸ್ರೇಲ್‌ ಜೊತೆ ನಿಲ್ಲುವುದಾಗಿ ಯುಎಸ್‌ ದೃಢಪಡಿಸಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಸೀನ್ ಸವೆಟ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಇರಾನ್ ಮೇಲೆ ಇಸ್ರೇಲ್ ದಾಳಿಯನ್ನು ಆತ್ಮ ರಕ್ಷಣೆಯ ಕ್ರಮವಾಗಿದ್ದು, ಇಸ್ರೇಲ್ ತನ್ನ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದೆ ಎಂದು ಸಮರ್ಥನೆ ನೀಡಿದ್ದಾರೆ.

Israel Strikes Military Targets in Iran in Response to Attacks

ಟೆಹ್ರಾನ್ ಸುತ್ತಲೂ ಹಲವು ಸ್ಫೋಟಗಳು ನಡೆದಿವೆ ಎಂದು ಇರಾನ್‌ ಸ್ಟೇಟ್‌ ಟಿವಿ ವರದಿ ಮಾಡಿದೆ. ಶನಿವಾರ ಮುಂಜಾನೆ ಈ ಸ್ಫೋಟಗಳು ನಡೆದಿದ್ದು, ಈ ಸಂದರ್ಭದಲ್ಲಿ ಆಕಾಶದಲ್ಲಿ ಯಾವುದೇ ರಾಕೆಟ್ ಅಥವಾ ವಿಮಾನಗಳು ಕಾಣಿಸಿಲ್ಲ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟೆಹ್ರಾನ್ ಸುತ್ತ ಕೇಳಿಬಂದ ಸ್ಫೋಟಗಳಿಗೆ ದೇಶದ ವಾಯು ರಕ್ಷಣಾ ವ್ಯವಸ್ಥೆಯ ಸಕ್ರಿಯಗೊಳಿಸುವಿಕೆ ಕಾರಣ ಎಂದು ಇರಾನ್ ಸ್ಟೇಟ್ ಟಿವಿ ಹೇಳಿದೆ. ಇರಾನ್‌ನ ವಾಯುದಾಳಿ ರಕ್ಷಣಾ ವ್ಯವಸ್ಥೆಗಳು ಸಕ್ರಿಯವಾಗಿರುವ ಸಾಧ್ಯತೆ ಬಗ್ಗೆ ಇರಾನ್ ಅಧಿಕಾರಿಗಳು ಸುಳಿವು ಕೊಟ್ಟಿದ್ದಾರೆ.

ಟೆಹ್ರಾನ್ ಮಾತ್ರವಲ್ಲದೆ ಕರಾಜ್ ನಗರದ ನಿವಾಸಿಗಳು ಕೂಡ ಸ್ಫೋಟದ ಸದ್ದುಗಳನ್ನು ಕೇಳಿದ್ದಾರೆ. ಮಾಮ್ ಖೊಮೇನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮೆಹ್ರಾಬಾದ್ ವಿಮಾನ ನಿಲ್ದಾಣ ಮತ್ತು ಟೆಹ್ರಾನ್‌ನ ದಕ್ಷಿಣದಲ್ಲಿರುವ ಪ್ರಮುಖ ತೈಲ ಸಂಸ್ಕರಣಾಗಾರದಂತಹ ನಿರ್ಣಾಯಕ ಸ್ಥಳಗಳ ಮೇಲೆ ಯಾವುದೇ ದಾಳಿ ಮಾಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೂ, ರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿ ಪ್ರಕಾರ, ಟೆಹ್ರಾನ್ ಬಳಿಯ ಹಲವಾರು ಸೇನಾ ನೆಲೆಗಳನ್ನು ಇಸ್ರೇಲಿ ಪಡೆಗಳು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ವರದಿ ಮಾಡಿದೆ.

2023ರ ಅಕ್ಟೋಬರ್7ರಂದು ದಕ್ಷಿಣ ಇಸ್ರೇಲ್ ಭಾಗದಲ್ಲಿ ಹಮಾಸ್ ನಡೆಸಿದ ದಾಳಿಯ ನಂತರ ಈ ಸಂಘರ್ಷ ಶುರುವಾಗಿದೆ. ಗಾಜಾದಲ್ಲಿ ಹಮಾಸ್ ಮತ್ತು ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಸಂಘಟನೆಗಳ ವಿರುದ್ಧ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದ್ದು ಈಗಾಗಲೇ ಪ್ರಮುಖ ನಾಯಕರನ್ನು ಹೊಡೆದು ಹಾಕಿದೆ.

ಕಳೆದ ವಾರ ಇಸ್ರೇಲ್ ಪ್ರಧಾನಿ ನಿವಾಸದ ಮೇಲೆ ಡ್ರೋನ್ ಮೂಲಕ ದಾಳಿಗೆ ಪ್ರಯತ್ನ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಇಸ್ರೇಲ್ ರಕ್ಷಣಾ ಸಚಿವ, ತಮ್ಮ ದೇಶಕ್ಕೆ ಹಾನಿ ಮಾಡುವ ಯಾವುದೇ ಪ್ರಯತ್ನಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+