ವಿಮಾನದ ಎಜೆಕ್ಷನ್ ಸೀಟು ಉತ್ಪಾದನೆ: ಮಾರ್ಟಿನ್ ಬೇಕರ್ 380 ಕೋಟಿ ಹೂಡಿಕೆ: ಎಂ ಬಿ ಪಾಟೀಲ

ಬೆಂಗಳೂರು: ಯುನೈಟೆಡ್ ಕಿಂಗಡಮ್ ಮೂಲದ ಮಾರ್ಟಿನ್-ಬೇಕರ್ 380 ಕೋಟಿ ಬಂಡವಾಳ ಹೂಡಿಕೆ ಮಾಡಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ಈ ಸಂಬಂಧ ತಮ್ಮನ್ನು ಭೇಟಿಯಾದ ಎರಡೂ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಅವರು ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎಂ ಬಿ ಪಾಟೀಲ್‌ ಅವರು, ಸೇನಾ ವಿಮಾನಗಳಲ್ಲಿ ಬಳಕೆಯಾಗುವ ಎಜೆಕ್ಷನ್ ಸೀಟುಗಳು ಮತ್ತು ವಿಮಾನ ಸಹ ಸಿಬ್ಬಂದಿಯ ಜೀವರಕ್ಷಣೆಗೆ ಬೇಕಾಗುವ ಸುರಕ್ಷಾ ಸಾಧನಗಳನ್ನು ತಯಾರಿಸುವ ಮಾರ್ಟಿನ್-ಬೇಕರ್ ಕಂಪನಿಯು ಜಾಗತಿಕ ಮಟ್ಟದ ಉದ್ಯಮವಾಗಿದೆ. ಅದು ಉನ್ನತ ಮಟ್ಟದ ಕೌಶಲ್ಯ ಬೇಡುವ 500ಕ್ಕೂ ಹೆಚ್ಚು ಉದ್ಯೋಗಸೃಷ್ಟಿ ಮಾಡಲಿರುವ ತನ್ನ ತಯಾರಿಕಾ ಸ್ಥಾವರ ನಿರ್ಮಾಣ ಯೋಜನೆಗೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 5ನೇ ಹಂತದಲ್ಲಿ 10 ಎಕರೆ ಕೇಳಿದೆ. ಇದನ್ನು ಶೀಘ್ರವೇ ಒದಗಿಸಲಾಗುವುದು ಎಂದಿದ್ದಾರೆ.

Investment Martin-Baker to Invest 380 Crore in Aircraft Ejection Seat Manufacturing Minister MB Patil

Investment: ಕಣ್ಗಾವಲು ವ್ಯವಸ್ಥೆಯಲ್ಲಿ ಮಹತ್ತ್ವದ ಪಾತ್ರ

ಮಾರ್ಟಿನ್ ಬೇಕರ್ ಕಂಪನಿ ತಯಾರಿಸಿರುವ 900ಕ್ಕೂ ಹೆಚ್ಚು ಎಜೆಕ್ಸನ್ ಸೀಟುಗಳು ನಮ್ಮ ದೇಶದ ವಾಯುಪಡೆ ಮತ್ತು ನೌಕಾಪಡೆಯ ವಿಮಾನಗಳಲ್ಲಿ ಬಳಕೆಯಲ್ಲಿವೆ. ಕಂಪನಿಯು ಹೊಂದಿರುವ ಆಧುನಿಕ ತಂತ್ರಜ್ಞಾನವು ಪೈಲಟ್ ಗಳ ಸುರಕ್ಷತೆ ಮತ್ತು ಸೇನಾ ವಿಮಾನ ಕಾರ್ಯಾಚರಣೆಗಳಲ್ಲಿ ಕಣ್ಗಾವಲು ವ್ಯವಸ್ಥೆಯಲ್ಲಿ ಮಹತ್ತ್ವದ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ. ರಾಜ್ಯದಲ್ಲಿ ಅದು ಮಾಡುತ್ತಿರುವ ಹೂಡಿಕೆಯಿಂದ ಸ್ವದೇಶಿ ತಯಾರಿಕೆ, ನಿರ್ವಹಣೆ ಮತ್ತು ದುರಸ್ತಿ, ಪೂರೈಕೆ ಸರಪಳಿಯ ಬಲವರ್ಧನೆ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ವಿಜಯಪುರದಲ್ಲಿ ಟಾನ್ಬೋ ಇಮೇಜಿಂಗ್ ಹೂಡಿಕೆ

ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಎಲೆಕ್ಟ್ರೋ-ಆಪ್ಟಿಕಲ್, ಇನ್ಫ್ರಾರೆಡ್ ವ್ಯವಸ್ಥೆ, ಥರ್ಮಲ್ ಇಮೇಜಿಂಗ್, ಆಧುನಿಕ ಸೆನ್ಸರ್ ತಂತ್ರಜ್ಞಾನ, ಸ್ವಯಂಚಾಲಿತ ರಕ್ಷಣಾ ಸಾಧನಗಳು ಮುಂತಾದವನ್ನು ತಯಾರಿಸುವ ಟಾನ್ಬೋ ಇಮೇಜಿಂಗ್ ಇಂಡಿಯಾ ಲಿಮಿಟೆಡ್ ಕೂಡ ರಾಜ್ಯದಲ್ಲಿ ಹೂಡಿಕೆ ಮಾಡಲಿದೆ. ಡೀಪ್-ಟೆಕ್ ಪರಿಣತಿ ಹೊಂದಿರುವ ಕಂಪನಿಯು ಹೈ-ಪವರ್ ಮೈಕ್ರೋವೇವ್ ತಯಾರಿಕೆ ಘಟಕದ ಅಭಿವೃದ್ಧಿಗೆ ಬೆಂಗಳೂರಿನ ಐಟಿಐಆರ್ ವ್ಯಾಪ್ತಿಯಲ್ಲಿ 5 ಎಕರೆ ಮತ್ತು ತನ್ನ ಪರೀಕ್ಷಾ ಸೌಲಭ್ಯಗಳ ಘಟಕ ನಿರ್ಮಾಣಕ್ಕೆ ವಿಜಯಪುರ ಜಿಲ್ಲೆಯ ಮುಳವಾಡದಲ್ಲಿ 130 ಎಕರೆ ಜಾಗ ಕೇಳಿದೆ ಎಂದು ಅವರು ವಿವರಿಸಿದ್ದಾರೆ.

ಮುಳವಾಡದಲ್ಲಿ ಕಂಪನಿಯು ತನ್ನ ಎಲ್ಲ ಪರೀಕ್ಷೆ, ಮೌಲ್ಯಮಾಪನ, ಪ್ರದರ್ಶನ ಮುಂತಾದವುಗಳನ್ನು ನಡೆಸಲಿದೆ. ಬೆಂಗಳೂರಿನ ಉದ್ದೇಶಿತ ಸ್ಥಾವರದಲ್ಲಿ ಹೈಪವರ್ ಮೈಕ್ರೋವೇಸ್ ಸಿಸ್ಟಂ ಮತ್ತು ಅದಕ್ಕೆ ಪೂರಕವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಕಾರ್ಯತಂತ್ರ ರೂಪಿಸಿದೆ ಎಂದು ಪಾಟೀಲ ನುಡಿದಿದ್ದಾರೆ.

ಸರಕಾರಿ ಶಾಲೆಗಳಿಗೆ CSR ನೆರವು ಕೂಡ ಒಂದು ಹೂಡಿಕೆ

ಕೈಗಾರಿಕೆಗಳು ಉಜ್ಜ್ವಲ ಬೆಳವಣಿಗೆಯ ದೂರದೃಷ್ಟಿಯಿಂದ ತಮ್ಮ ಸುತ್ತಮುತ್ತ ಇರುವ ಗ್ರಾಮೀಣ ಮತ್ತು ಸರಕಾರಿ ಶಾಲೆಗಳಿಗೆ ತಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಸಿಎಸ್ಆರ್ ನೆರವು ನೀಡಬೇಕು. ಇದೂ ಕೂಡ ಒಂದು ಹೂಡಿಕೆ ಎಂದೇ ತಿಳಿಯಬೇಕು. ಇದಕ್ಕಾಗಿ ಸರಕಾರವು ನನ್ನ ಶಾಲೆ, ನನ್ನ ಜವಾಬ್ದಾರಿ' ಉಪಕ್ರಮವನ್ನು ಆರಂಭಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.‌

ಸಭೆಯಲ್ಲಿ ನೆರೆದಿದ್ದ 150ಕ್ಕೂ ಹೆಚ್ಚು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪಾಟೀಲ ಅವರು, ಸರಕಾರದ ಆಸಕ್ತಿಯಿಂದಾಗಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಹೊಸಹೊಸ ಉದ್ಯಮಗಳು ಬರುತ್ತಿವೆ. ಈ ಮೂಲಕ ಕೈಗಾರಿಕೆ ಮತ್ತು ಶಿಕ್ಷಣ ಎರಡೂ ಜತೆಜತೆಯಾಗಿ ಬೆಳವಣಿಗೆ ಹೊಂದುತ್ತಿವೆ. ರಾಜ್ಯದ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಕೊಡುವ ಜವಾಬ್ದಾರಿಯನ್ನು ಸರಕಾರ ಹೊತ್ತುಕೊಂಡಿದೆ. ಇದಕ್ಕೆ ಉದ್ಯಮಗಳ ಸಹಕಾರ ಕೂಡ ಬೇಕು ಎಂದು ಅವರು ತಿಳಿಸಿದ್ದಾರೆ.

ತಂತ್ರಜ್ಞಾನ ಮತ್ತು ಉತ್ತಮ ಶಿಕ್ಷಣ ಅಗ್ರಪಂಕ್ತಿಯಲ್ಲಿದೆ

ಶಾಲೆಯಲ್ಲಿ ಆಧುನಿಕ ಕಲಿಕಾ ಪರಿಕರಗಳು, ನೈರ್ಮಲ್ಯ, ತರಬೇತಿ ಪಡೆದ ಶಿಕ್ಷಕರು, ಡಿಜಿಟಲ್ ಕಲಿಕೆ ಎಲ್ಲವೂ ಇರುವಂತೆ ಸರಕಾರ ನೋಡಿಕೊಳ್ಳುತ್ತಿದೆ. ರಾಜ್ಯವು ತಂತ್ರಜ್ಞಾನ ಮತ್ತು ಉತ್ತಮ ಶಿಕ್ಷಣ ಎರಡರಲ್ಲೂ ಅಗ್ರಪಂಕ್ತಿಯಲ್ಲಿದೆ. ಇದರ ಫಲವಾಗಿ ರಾಜ್ಯದಲ್ಲಿ ಇಂದು 20 ಸಾವಿರಕ್ಕೂ ಹೆಚ್ಚು ಚಿಪ್ ವಿನ್ಯಾಸಕಾರರು ಸಕ್ರಿಯರಾಗಿದ್ದಾರೆ. ಜತೆಗೆ ಈ ವಲಯದಲ್ಲಿ 1 ಲಕ್ಷ ಪಿಎಚ್.ಡಿ. ಮಹಾಪ್ರಬಂಧಗಳು ಬಂದಿದ್ದು, ದೇಶದ ಒಟ್ಟು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಶೀನ್ ಲರ್ನಿಂಗ್ ವಲಯಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚು ಪಾಲನ್ನು ರಾಜ್ಯವೇ ಹೊಂದಿದೆ ಎಂದು ಅವರು ನುಡಿದಿದ್ದಾರೆ.

ನಾವು ನಾಲ್ಕನೇ ಹಂತದ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಮೊದಲಿನಿಂದಲೇ ಎಐ ಮತ್ತು ಐಒಟಿ ಎರಡಕ್ಕೂ ಸಂಬಂಧಿಸಿದಂತೆ ತರಬೇತಿ ಕೊಡುತ್ತಿದ್ದೇವೆ. ಇದಕ್ಕಾಗಿ ಸರಕಾರವು ಸೀಮನ್ಸ್ ತರಹದ ಅಗ್ರಗಣ್ಯ ಕಂಪನಿಗಳ ಜತೆ ಸಹಭಾಗಿತ್ವ ಏರ್ಪಡಿಸಿಕೊಂಡಿದ್ದೇವೆ. ಸಿಎಸ್ಆರ್ ನಿಧಿಯ ಪರಿಣಾಮಕಾರಿ ಬಳಕೆಯನ್ನು ಸುಗಮವಾಗಿಸಲು ಕರ್ನಾಟಕ ಉದ್ಯೋಗ ಮಿತ್ರ' ವಿಭಾಗವು ಶಿಕ್ಷಣ ಇಲಾಖೆಯ ಜತೆ ಕೆಲಸ ಮಾಡಲಿದೆ ಎಂದು ಪಾಟೀಲ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+