ಸಂದರ್ಶನ : ಧನಂಜಯ್ ಕುಮಾರ್ ಬಿಜೆಪಿ ಸೇರುವುದು ಖಚಿತ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14 : ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಪಕ್ಷ ಬಿಟ್ಟು ಹೋದ ನಾಯಕರು ಪಕ್ಷದತ್ತ ವಾಪಸ್ ಆಗಲು ಸಿದ್ಧವಾಗುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ ಧನಂಜಯ್ ಕುಮಾರ್ ಅವರು ಬಿಜೆಪಿಗೆ ಮರಳುವುದಾಗಿ ಹೇಳಿದ್ದಾರೆ.

ಗುರುವಾರ ಅರಮನೆ ಮೈದಾನದಲ್ಲಿ ನಡೆದ ಸಮಾವೇಶಲ್ಲಿ ಧನಂಜಯ್ ಕುಮಾರ್ ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ದೂರವಾಣಿ ಮೂಲಕ ಒನ್ ಇಂಡಿಯಾ ಪ್ರತಿನಿಧಿ ಜೊತೆ ಮಾತನಾಡಿದ ಧನಂಜಯ್ ಕುಮಾರ್ ಅವರು, 'ಬಿಜೆಪಿ ಸೇರುತ್ತಿರುವುದಾಗಿ, ಅದಕ್ಕಾಗಿಯೇ ಸಮಾವೇಶಕ್ಕೆ ಹೋಗಿದ್ದಾಗಿ' ತಿಳಿಸಿದ್ದಾರೆ. [ಬ್ರೇಕಿಂಗ್ ನ್ಯೂಸ್ ಕೊಟ್ಟ ಧನಂಜಯ್ ಕುಮಾರ್!]

dhananjay kumar

ಧನಂಜಯ್ ಕುಮಾರ್ ಹೇಳಿದ್ದಿಷ್ಟು
* 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯೆ ನೀಡಲು ಸರಿಯಾದ ಸಮಯವಲ್ಲ. ಚುನಾವಣೆಗೆ ಬಹಳ ದಿನಗಳು ಬಾಕಿ ಇವೆ. ನಾನು ಹಿಂದಿನಿಂದಲೂ ಯಡಿಯೂರಪ್ಪ ಅವರಿಗೆ ಬೆಂಬಲ ನೀಡುತ್ತಿದ್ದೆ. ಆದ್ದರಿಂದ ಪಕ್ಷಕ್ಕೆ ಮರಳುವ ಬಗ್ಗೆ ಚಿಂತಿಸಿದ್ದೇನೆ. [ಅರಮನೆ ಮೈದಾನದಲ್ಲಿ ಯಡಿಯೂರಪ್ಪ ಹೇಳಿದ್ದೇನು?]

* 1983ರಲ್ಲಿ ನಾನು ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದೆ. ಯಡಿಯೂರಪ್ಪ ಅವರು ಆಗ ಗೆಲುವು ಸಾಧಿಸಿದ್ದರು. ನಾವು 18 ಶಾಸಕರು ಆಗ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಕಾಂಗ್ರೆಸ್ ರಹಿತವಾದ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದ್ದೆವು. [ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು]

* ಕೆಟ್ಟ ರಾಜಕೀಯದಿಂದಾಗಿ ನಾನು ಬಿಜೆಪಿ ಪಕ್ಷ ತೊರೆದೆ. ಆದರೆ, ಯಾವಾಗಲೂ ಯಡಿಯೂರಪ್ಪ ಅವರಿಗೆ ಬೆಂಬಲವಾಗಿ ನಿಂತಿದ್ದೆ. ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳಿರುವುದು ಪಕ್ಷದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿದೆ.

* 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯಡಿಯೂರಪ್ಪ ಅವರು ಪಕ್ಷ ತೊರೆದು ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪನೆ ಮಾಡಿದ್ದು ಕಾರಣ, ಈಗ ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ಆದ್ದರಿಂದ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka BJP president B.S.Yeddyurappa loyalist and Former union minister V. Dhananjay Kumar put his appearance in a rally organized on April 14, by the BJP in Bengaluru, where Yeddyurappa delivered a key note speech. Dhananjay Kumar said, my taking part in the rally is a strong singling of joining the BJP.
Please Wait while comments are loading...