ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಮಲತಾ ಹಿಂದೆ ಬಿದ್ದಿದೆ ಗುಪ್ತಚರ ಇಲಾಖೆ, ಚಲನವಲನದ ಮೇಲೆ ನಿಗಾ?

|
Google Oneindia Kannada News

Recommended Video

Lok Sabha elections 2019:ಮುಖ್ಯಮಂತ್ರಿಗಳಿಗೆ ಠಕ್ಕರ್ ಕೊಟ್ಟಿದ್ದ ಸುಮಲತಾ

ಬೆಂಗಳೂರು, ಮೇ 02: ಮಂಡ್ಯದಲ್ಲಿ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿಗಳಿಗೇ ಭಾರಿ ಠಕ್ಕರ್ ಕೊಟ್ಟಿರುವ ಸುಮಲತಾ ಅವರಿಗೆ ಆತಂಕವೊಂದು ಕಾಡುತ್ತಿದೆಯಂತೆ, ಅವರ ಚಲನವಲನಗಳ ಮೇಲೆ ಯಾರೋ ಕಣ್ಣಿಟ್ಟಿದ್ದಾರೆ ಎಂಬ ಗುಮಾನಿ ಇದೆಯಂತೆ ಅವರಿಗೆ.

ಮಂಡ್ಯದಲ್ಲಿ ಸುಮಲತಾ ಅವರು ಪಕ್ಷೇತರವಾಗಿ ಅಭ್ಯರ್ಥಿಯಾಗಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಈ ವಿಷಯವನ್ನು ಅವರು ಬಹಿರಂಗ ಪಡಿಸಿದ್ದರು, ಆಗ ಮಾತನಾಡಿದ್ದ ಸುಮಲತಾ ಅವರು ಸಿಎಂ ಅವರು ಗುಪ್ತಚರ ಇಲಾಖೆ ಬಳಸಿಕೊಂಡು ನಮ್ಮ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಆರೋಪಿಸಿದ್ದರು.

ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಕಾಂಗ್ರೆಸ್ ಮುಖಂಡರ ರಹಸ್ಯ ಸಭೆ ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಕಾಂಗ್ರೆಸ್ ಮುಖಂಡರ ರಹಸ್ಯ ಸಭೆ

ಈಗ ಚುನಾವಣೆ ಮುಗಿದ ಬಳಿಕವೂ ಆ ಆತಂಕ ಹೋಗಿಲ್ಲ, ಈಗಲೂ ಸುಮಲತಾ ಅವರ ಬೆನ್ನಹಿಂದೆ ಸಿಎಂ ಅವರು ಗುಪ್ತಚರ ಇಲಾಖೆಯನ್ನು ಛೂ ಬಿಟ್ಟಿದ್ದಾರೆ ಎಂದು ಸುಮಲತಾ ಅವರ ಆಪ್ತವರ್ಗ ಆರೋಪ ಮಾಡುತ್ತಿದೆ.

ನಿನ್ನೆಯಷ್ಟೆ ಮಾಧ್ಯಮಗಳಲ್ಲಿ ಸುಮಲತಾ ಅವರಿಗೆ ಸಂಬಂಧಪಟ್ಟ ವಿಡಿಯೋ ಒಂದು ಹರಿದಾಡಿತ್ತು, ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ಸುಮಲತಾ ಅವರು ಮಂಡ್ಯದ ಭಿನ್ನಮತೀಯ ಕಾಂಗ್ರೆಸ್ ಮುಖಂಡರ ಜೊತೆ ರಹಸ್ಯ ಸಭೆ ನಡೆಸಿದ್ದರು, ಆದರೆ ಈ ಸಭೆಯ ವಿಡಿಯೋ ಹೊರಗಡೆ ಸಿಕ್ಕಿದ್ದಾದರೂ ಹೇಗೆ? ಎಂಬ ಅನುಮಾನ ಈಗ ಕಾಡುತ್ತಿದೆ.

ಗುಪ್ತಚರ ಇಲಾಖೆ ಸಿಬ್ಬಂದಿ ಮಾಡಿದ ವಿಡಿಯೋ?

ಗುಪ್ತಚರ ಇಲಾಖೆ ಸಿಬ್ಬಂದಿ ಮಾಡಿದ ವಿಡಿಯೋ?

ಆ ವಿಡಿಯೋ ಹೊರ ಬರಲು ಗುಪ್ತಚರ ಇಲಾಖೆ ಸಿಬ್ಬಂದಿಯೇ ಕಾರಣ ಎಂಬ ಸುದ್ದಿ ಹರಿದಾಡುತ್ತಿದ್ದು, ಹೊಟೆಲ್‌ಗೆ ಹೋಗುವ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿ, ಹೊಟೆಲ್ ಸಿಬ್ಬಂದಿಯಿಂದ ರೆಕಾರ್ಡ್‌ ಮಾಡಿಸಿ, ಅದರ ಪ್ರತಿಯನ್ನು ಗುಪ್ತಚರ ಇಲಾಖೆ ಪಡೆದುಕೊಂಡಿದೆ ಎಂದು ಸುಮಲತಾ ಆಪ್ತರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸುಮಲತಾ ಅವರು ನೇರವಾಗಿ ಯಾವುದೇ ಹೇಳಿಕೆಗಳನ್ನು ಈ ವರೆಗೆ ನೀಡಿಲ್ಲ.

ಪೂರ್ಣ ವಿಡಿಯೋ ಕುಮಾರಸ್ವಾಮಿ ಬಳಿ ಇದೆ!

ಪೂರ್ಣ ವಿಡಿಯೋ ಕುಮಾರಸ್ವಾಮಿ ಬಳಿ ಇದೆ!

ಸುಮತಲಾ ಅವರ ಫೋನ್ ಟ್ಯಾಪ್ ಮಾಡಿ, ಅವರು ಅದೇ ದಿನ, ನಿರ್ದಿಷ್ಟ ಹೊಟೆಲ್‌ನಲ್ಲಿ ಸಭೆ ಸೇರಲಿದ್ದಾರೆಂಬ ಪೂರ್ವ ಮಾಹಿತಿ ಸಂಗ್ರಹಿಸಿಯೇ ಗುಪ್ತಚರ ಇಲಾಖೆ ವಿಡಿಯೋ ಚಿತ್ರೀಕರಿಸಿದೆ ಎನ್ನಲಾಗಿದ್ದು, ಪೂರ್ಣ ವಿಡಿಯೋ ಕುಮಾರಸ್ವಾಮಿ ಅವರ ಬಳಿ ಇದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.

ಕಾಂಗ್ರೆಸ್ ನಾಯಕರ ಜೊತೆ ಸುಮಲತಾ ಸಭೆ, ಚಲುವರಾಯಸ್ವಾಮಿ ಹೇಳಿದ್ದೇನು? ಕಾಂಗ್ರೆಸ್ ನಾಯಕರ ಜೊತೆ ಸುಮಲತಾ ಸಭೆ, ಚಲುವರಾಯಸ್ವಾಮಿ ಹೇಳಿದ್ದೇನು?

ಭಿನ್ನಮತೀಯ ಶಾಸಕರ ಮೇಲೆ ಗುಪ್ತಚರದ ನಿಗಾ?

ಭಿನ್ನಮತೀಯ ಶಾಸಕರ ಮೇಲೆ ಗುಪ್ತಚರದ ನಿಗಾ?

ಸುಮಲತಾ ಅವರ ಆಪ್ತರ ಆರೋಪಗಳಿಗೆ ಗಟ್ಟಿ ಆಧಾರವೂ ಇದೆ. ಈ ಹಿಂದೆ ಕಾಂಗ್ರೆಸ್- ಜೆಡಿಎಸ್‌ನ ಭಿನ್ನಮತೀಯ ಶಾಸಕರನ್ನು ಹದ್ದು ಬಸ್ತಿನಲ್ಲಿಡಲು ಕುಮಾರಸ್ವಾಮಿ ಅವರು ಗುಪ್ತಚರ ಇಲಾಖೆಯ ನೆರವು ಪಡೆದಿದ್ದರು ಎನ್ನಲಾಗುತ್ತದೆ. ಯಾವ ಶಾಸಕರು ಬಿಜೆಪಿಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಸಿಎಂ ಅವರಿಗೆ ಅವರದ್ದೇ ಸೂಚನೆ ಮೇರೆಗೆ ರವಾನಿಸಿತ್ತೆಂಬ ಸುದ್ದಿ ಆಗೊಮ್ಮೆ ಜೋರಾಗಿಯೇ ಕೇಳಿಬಂದಿತ್ತು.

ಸುಮಲತಾ ಜತೆ ರಹಸ್ಯ ಸಭೆ, ದೂರು ಬಂದರೆ ಕ್ರಮ: ಪರಮೇಶ್ವರ್ಸುಮಲತಾ ಜತೆ ರಹಸ್ಯ ಸಭೆ, ದೂರು ಬಂದರೆ ಕ್ರಮ: ಪರಮೇಶ್ವರ್

ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿಸಿದ್ದರು

ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿಸಿದ್ದರು

ಅಷ್ಟೆ ಅಲ್ಲದೆ, ಕುಮಾರಸ್ವಾಮಿ ಅವರು ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಕಂದಕೂರು ಅವರಿಂದ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದ ಮಾತುಕತೆಯನ್ನೇ ರೆಕಾರ್ಡ್ ಮಾಡಿಸಿ ಆಪರೇಷನ್ ಕಮಲ ಆಡಿಯೋ ಬಿಡುಗಡೆಗೊಳಿಸಿ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು ಸಹ ಮರೆಯುವಂತಿಲ್ಲ.

ಮಂಡ್ಯದಲ್ಲಿ ನಡೆದಿದ್ದು, ಇನ್ಮುಂದೆ ನಡೆಯೋದು ದ್ವೇಷದ ರಾಜಕಾರಣನಾ? ಮಂಡ್ಯದಲ್ಲಿ ನಡೆದಿದ್ದು, ಇನ್ಮುಂದೆ ನಡೆಯೋದು ದ್ವೇಷದ ರಾಜಕಾರಣನಾ?

ವಿರೋಧಿಗಳ ಮೇಲೆ ಕಣ್ಣಿಟ್ಟಿರುತ್ತಾರೆ ಎಚ್‌ಡಿಕೆ

ವಿರೋಧಿಗಳ ಮೇಲೆ ಕಣ್ಣಿಟ್ಟಿರುತ್ತಾರೆ ಎಚ್‌ಡಿಕೆ

ಕುಮಾರಸ್ವಾಮಿ ಅವರು ರಾಜಕೀಯ ವಿರೋಧಿಗಳ ಮೇಲೆ ಸದಾ ಒಂದು ಕಣ್ಣಿಟ್ಟಿರುತ್ತಾರೆ. ಅಧಿಕಾರದಲ್ಲಿ ಇಲ್ಲದಾಗಲೂ ಸಹ ಅವರು ವಿರೋಧಿಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿರುತ್ತಾರೆ ಆದರೆ ಈಗ ಅಧಿಕಾರಿದಲ್ಲಿದ್ದಾರೆ ಈಗ ಅವರು ಸುಮ್ಮನಿರುತ್ತಾರೆಯೇ ಎಂದು ಅನಿಸದೇ ಇರದು.

ಮಂಡ್ಯ ಫಲಿತಾಂಶದ ಕುರಿತು ಕುಮಾರಸ್ವಾಮಿಗೆ ಗುಪ್ತಚರ ಇಲಾಖೆ ವರದಿಮಂಡ್ಯ ಫಲಿತಾಂಶದ ಕುರಿತು ಕುಮಾರಸ್ವಾಮಿಗೆ ಗುಪ್ತಚರ ಇಲಾಖೆ ವರದಿ

ಗುಪ್ತಚರ ಇಲಾಖೆಯ ಖಾಸಗಿ ಬಳಕೆ ಸಾಕಷ್ಟು ಭಾರಿ ಆಗಿದೆ?

ಗುಪ್ತಚರ ಇಲಾಖೆಯ ಖಾಸಗಿ ಬಳಕೆ ಸಾಕಷ್ಟು ಭಾರಿ ಆಗಿದೆ?

ಸರ್ಕಾರ ಉಳಿಸಿಕೊಳ್ಳಲು, ಚುನಾವಣೆಗಳಲ್ಲಿ ಕ್ಷೇತ್ರದ ಸಮೀಕ್ಷೆ ಮಾಡಿಸಲು, ವಿರೋಧಿಗಳ ಚಲನಚಲನಗಳ ಮೇಲೆ ಕಣ್ಣಿಡಲು ಈ ಹಿಂದಿನ ಸರ್ಕಾರಗಳು ಸಹ ಗುಪ್ತಚರ ಇಲಾಖೆಯನ್ನು ಬಳಸಿಕೊಂಡಿವೆ. ಸಿದ್ದರಾಮಯ್ಯ ಅವಧಿಯಲ್ಲಿ ಕ್ಷೇತ್ರಗಳ ಚುನಾವಣಾ ಪೂರ್ವ ಸಮೀಕ್ಷೆಯನ್ನು ಗುಪ್ತಚರ ಇಲಾಖೆಯಿಂದ ಮಾಡಿಸಲಾಗಿತ್ತು ಎನ್ನುವ ಆರೋಪ ಇದೆ. ಯಡಿಯೂರಪ್ಪ ಅವರ ವಿರುದ್ಧವೂ ಇಂತಹಾ ಆರೋಪ ಕೇಳಿಬಂದಿತ್ತು, ಬಹು ಹಿಂದೆ ಆಗ ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ಅವರ ಮೇಲೆ ಫೋನ್ ಕದ್ದಾಲಿಕೆ ಆರೋಪ ಹೊರಿಸಲಾಗಿದ್ದನ್ನೂ ಸಹ ಮರೆಯುವಂತಿಲ್ಲ.

English summary
Sumalatha's followers alleging that Intelligence department keeping eye on Sumalatha on Kumaraswamy's instruction. Saying that video of Sumalatha having meeting with Mandya congress leaders shot by the intelligence department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X