ಶ್ರೀರಂಗಪಟ್ಟಣ ದಸರಾದಲ್ಲಿ ಜಿವಿಗೆ ಅವಮಾನ

Posted By:
Subscribe to Oneindia Kannada
venkatasubbaiah
ಮಂಡ್ಯ, ಅ.8 : ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ, ನಿಘಂಟು ತಜ್ಞ, ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಕರೆಸಲಾಗಿತ್ತು. ಆದರೆ, ಅವರಿಗಿಂತ ಮೊದಲೇ ರಾಜಕಾರಣಿಗಳು ದಸರಾ ಉದ್ಘಾಟನೆ ಮಾಡುವ ಮೂಲಕ ನಾಡಿನ ಹಿರಿಯ ಚೇತನಕ್ಕೆ ಅವಮಾನ ಮಾಡಿದ್ದಾರೆ.

ಸೋಮವಾರ ಅಂಬಾರಿಯಲ್ಲಿ ಆಸೀನಳಾಗಿದ್ದ ಶ್ರೀ ಚಾಮುಂಡೇಶ್ವರಿಗೆ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಿವಿ ಮಧ್ಯಾಹ್ನ 2 ಗಂಟೆಗೆ ದಸರಾಗೆ ಚಾಲನೆ ನೀಡಬೇಕಾಗಿತ್ತು. ನಿಗದಿತ ಸಮಯಕ್ಕಿಂತ ಮೊದಲೇ ಆಗಮಿಸಿದ್ದ ಅವರು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಮತ್ತು ಸಂಸದೆ ರಮ್ಯಾ ಅವರ ಆಗಮನಕ್ಕಾಗಿ ಕಾಯುತ್ತಿದ್ದರು.

ಈ ಸಮಯದಲ್ಲಿ ಆಗಮಿಸಿದ ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ, ಚಾಮುಂಡೇಶ್ವರಿ ವಿಗ್ರಹದ ಬಳಿ ಬಂದು ಅಲ್ಲಿದ್ದ ಹೂವನ್ನು ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಎರಚಿದರು. ಇದನ್ನು ನೋಡಿದ ಅಂಬರೀಶ್ ಮತ್ತು ರಮ್ಯಾ ತಾವು ಆಗಮಿಸಿ ದೇವಿಗೆ ಪುಷ್ಪವನ್ನು ಅರ್ಪಿಸಿ, ದಸರಾಕ್ಕೆ ಚಾಲನೆ ನೀಡಿದರು.

ಮೂವರು ಜನಪ್ರತಿನಿಧಿಗಳಿಗೆ ದಸರಾ ಉದ್ಘಾಟನೆಗಾಗಿ ವೆಂಕಟಸುಬ್ಬಯ್ಯ ಅವರನ್ನು ಕರೆಸಿದ್ದೇವೆ. ಅವರಿಂದ ದಸರಾ ಉದ್ಘಾಟನೆ ಮಾಡಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಮರೆತು ಹೋಗಿತ್ತು. ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ಜಿವಿ ಅವರ ಕೈಗೆ ಮತ್ತಷ್ಟು ಹೂಗಳನ್ನು ನೀಡಿ, ದೇವಿಗೆ ಸಮರ್ಪಿಸುವಂತೆ ಮನವಿ ಮಾಡಿದರು.

ಜನಪ್ರತಿನಿಧಿಗಳ ಈ ವರ್ತನೆ ಅಲ್ಲಿ ನೆರೆದಿದ್ದ ಜನರ ಅಸಮಾಧಾನಕ್ಕೆ ಕಾರಣವಾಯಿತು. ಹಿರಿಯ ಸಾಹಿತಿಯನ್ನು ಕರೆಸಿ ಅವರಿಂದ ಮೊದಲು ಚಾಲನೆ ನೀಡಿಸದೇ ಅವಮಾನ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆದರೆ, ಇವುಗಳ ಪರಿವೇ ಇಲ್ಲದೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರೊ.ವೆಂಕಟಸುಬ್ಬಯ್ಯ ತಮ್ಮ ಔದಾರ್ಯ ಮೆರೆದರು. ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಏನು ಹೇಳೋಣ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior lexicographer G. Venkatasubbaiah, popularly known as Prof. G.V., is expected to inaugurate the Srirangapatna Dasara On Monday, October 7. but, district in-charge Minister Ambresh and MP Ramya inaugurate the Dasara politician not allowing him to inaugurate. by this they insulted for Prof. G.V.
Please Wait while comments are loading...