ಬಾಳೆಗೊನೆ ಮಧ್ಯೆ ಬುಸ್ ಎಂದ ನಾಗ, ಬೆಂಕಿ ಕಿಡಿಗೆ ಗುಡಿಸಲು ಭಸ್ಮ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್,02: ಬಾಳೆಗೊನೆಯಿಂದ ಹಣ್ಣು ಕೀಳಲು ಹೋದವರಿಗೆ ಅದರ ಮಧ್ಯೆ ಹಾವು ಎದ್ದು ಬುಸ್ ಎಂದರೆ ಅವರ ಸ್ಥಿತಿ ಹೇಗಾಗಬೇಡ? ಹೌದು ಈ ಹಾವು ಕೊಡಗಿನಿಂದ ಮೈಸೂರು ತನಕ ಬಾಳೆಗೊನೆಯಲ್ಲೇ ಆಶ್ರಯಪಡೆದು ಬಂದಿತ್ತು ಎಂಬುದು ಸತ್ಯ.

ಮಲಬಾರ್ ಫಿಟ್ ವೈಪರ್ ಎಂಬ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ವಾಸವಾಗಿರುವ ಭಾಗ್ಯ ಎಂಬುವವರು ತಮ್ಮ ಊರಾದ ಕೊಡಗಿನ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಿಂದ ಬಾಳೆಗೊನೆ ಕಡಿದು ಅದನ್ನು ಕಾರಿನಲ್ಲಿ ಹಾಕಿಕೊಂಡು ಬಂದಿದ್ದರು. ಆ ಬಾಳೆಗೊನೆ ಮಧ್ಯೆದಲ್ಲಿ ಹಾವು ಕಾಣಿಸಿದೆ.[ಬರೋಬ್ಬರಿ 3 ಹೆಬ್ಬಾವು ಹಿಡಿದ ಮಂಗಳೂರು ಯುವಕರು!]

Myuru

ಬಾಳೆಗೊನೆಯನ್ನು ಕಾರಿನಿಂದ ಇಳಿಸಿ ಒಂದೆಡೆ ಇಟ್ಟಿದ್ದರು. ಆ ನಂತರ ಬಾಳೆಗೊನೆ ಬಳಿ ಹೋದಾಗ ಅದರ ಮೇಲೆ ಹಾವು ಅಡ್ಡಾಡುತ್ತಿರುವುದನ್ನು ಕಂಡಿದ್ದಾರೆ. ಬಳಿಕ ಮೈಸೂರು ನಗರಪಾಲಿಕೆಯ 17ನೇ ವಾರ್ಡ್ ಸದಸ್ಯ ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಮ್ ಹಾವನ್ನು ಹಿಡಿದು ಚಾಮುಂಡಿಬೆಟ್ಟದ ಕಾಡಿಗೆ ಬಿಟ್ಟಿದ್ದಾರೆ.[30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್]

ಬೆಂಕಿ ಕಿಡಿಗೆ ಐದು ಗುಡಿಸಲು ಭಸ್ಮ

ಚಾಮರಾಜನಗರ: ಒಲೆ ಹಚ್ಚುವಾಗ ಹಾರಿದ ಸಣ್ಣ ಬೆಂಕಿ ಕಿಡಿಯೊಂದು ಚಾಮರಾಜನಗರದ ಕೂಡ್ಲೂರು ಗ್ರಾಮದ ಐದು ಗುಡಿಸಲಿನ ಭಸ್ಮಕ್ಕೆ ಕಾರಣವಾಗಿದೆ. ಈ ಘಟನೆಯಿಂದ ಗುಡಿಸಲಿನಲ್ಲಿ ವಾಸವಾಗಿದ್ದ ಜನರಿಗೆ ವಾಸಕ್ಕೆ ಮನೆ ಇಲ್ಲದಂತಾಗಿದೆ.

ಚಾಮರಾಜನಗರದ ಕೂಡ್ಲೂರು ಗ್ರಾಮದ ಉಪ್ಪಾರ ಹೊಸ ಬಡಾವಣೆಯ ಮಲ್ಲಮ್ಮ ಅವರ ಗುಡಿಸಲು ಸೇರಿದಂತೆ ಶೇಖಮ್ಮ, ಮಹದೇವ, ಪಾಪಮ್ಮ, ಮುತ್ತಶೆಟ್ಟಿ ಎಂಬುವವರ ಗುಡಿಸಲುಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಭಸ್ಮವಾಗಿವೆ. ಗುಡಿಸಲು ಕಳೆದುಕೊಂಡವರಿಗೆ ಶಾಸಕ ಪುಟ್ಟರಂಗಶೆಟ್ಟಿ ಅವರು ಸ್ಥಳಕ್ಕೆ ತೆರಳಿ ವೈಯಕ್ತಿಕ ಪರಿಹಾರ ನೀಡಿದ್ದಾರೆ.[ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ, 26 ನವಜಾತ ಶಿಶುಗಳ ರಕ್ಷಣೆ]

Chamarajanagar

ಮಲ್ಲಮ್ಮ ಎಂದಿನಂತೆ ಕಟ್ಟಿಗೆ ಬಳಸಿ ಅಡುಗೆ ಮಾಡುತ್ತಿದ್ದರು. ಆಗ ಬೆಂಕಿಕಿಡಿಯೊಂದು ಗುಡಿಸಿಲಿಗೆ ಹಾರಿದ್ದು ಬೆಂಕಿ ಅವರ ಗುಡಿಸಲಿಗೆ ಬೆಂಕಿ ಹತ್ತಿದೆ. ಅವರ ಮನೆಯ ಸಾಲಿನಲ್ಲಿದ್ದ ಐದು ಮನೆಗಳಿಗೂ ಬೆಂಕಿ ಹಬ್ಬಿ ಗುಡಿಸಲಲ್ಲಿದ್ದ ದಿನಸಿ ಪದಾರ್ಥಗಳು, ಅಡುಗೆ ಪಾತ್ರೆಗಳು ಸೇರಿದಂತೆ ವಸ್ತುಗಳು ಹಾಗೂ ಬೈಕ್ ವೊಂದು ಸಂಪೂರ್ಣ ಸುಟ್ಟು ಹೋಗಿವೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಎಚ್.ಡಿ.ಕೋಟೆಯಲ್ಲಿ ಚಿರತೆ ಸೆರೆ, ಗ್ರಾಮಸ್ಥರಲ್ಲಿ ನೆಮ್ಮದಿ

ಮೈಸೂರು: ಹಲವು ದಿನಗಳಿಂದ ಮುಳ್ಳೂರು, ಚಂಗೌಡನಹಳ್ಳಿ, ಕಂದೇಗಾಲದ ಸುತ್ತ ಮುತ್ತಲ ಜನರ ಪಾಲಿಗೆ ದುಸ್ವಪ್ನವಾಗಿದ್ದ ೯ ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಚಂಗೌಡನಹಳ್ಳಿ ಜಮೀನೊಂದರಲ್ಲಿ ಶುಕ್ರವಾರ ಸೆರೆಹಿಡಿದಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ 3 ದಿನಗಳ ಹಿಂದೆ ಚಂಗೌಡನಹಳ್ಳಿ ನಾಗರಾಜುರವರ ಜಮೀನಿನಲ್ಲಿ ಬೋನನ್ನು ಇಡಲಾಗಿತ್ತು. ಚಿರತೆ ಸೆರೆ ಹಿಡಿಯಲು ಬೋನಿನಲ್ಲಿ ನಾಯಿ ಕೂಡಿಹಾಕಲಾಗಿತ್ತು. ರಾತ್ರಿ ವೇಳೆ ಅರಣ್ಯ ಇಲಾಖೆಯವರು ಅದರ ಚಲನವಲನದ ಮೇಲೆ ನಿಗಾ ಇರಿಸಿದ್ದರು.[ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?]

Mysuru

ಶುಕ್ರವಾರ ಬೆಳಗಿನ ಜಾವ ಚಿರತೆ ನಾಯಿಯ ಚೀರಾಟಕ್ಕೆ ಚಿರತೆ ತಿನ್ನಲು ಬಂದು ಬೋನಿಗೆ ಸೆರೆಯಾಗಿದೆ. ತಾಲೂಕಿನಲ್ಲಿ 15ಕ್ಕೂ ಹೆಚ್ಚು ಚಿರತೆ ಸೆರೆ ಹಿಡಿಯಲಾಗಿದ್ದು ಇದು ಭಾರಿ ಗಾತ್ರದ ಚಿರತೆಯಾಗಿದೆ. ಸೆರೆ ಹಿಡಿದ ಚಿರತೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಲ್ಕೆರೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.[ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪಲು ಕಾರಣವೇನು?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Inshort news of Myuru, Chamarajanagar district: Five huts fired in Chamarajanagar, Snake found in Banana bunch in Mysuru. Forest department official captured leopard in Mysuru
Please Wait while comments are loading...