ನಿವೇಶನ-ವಸತಿ ರಹಿತರ ದಾಖಲಾತಿಗೆ ಇಂದಿರಾ ಆ್ಯಪ್ ಬಳಕೆ
ಬೆಂಗಳೂರು, ಸೆಪ್ಟೆಂಬರ್ 3: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳಲ್ಲಿ ವಾಸವಾಗಿರುವ ಛಾಯಾಚಿತ್ರಗಳನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ವೆಬ್‌ಸೈಟ್‌ನಲ್ಲಿ ನಮೂದಿಸಲು ನಿಗಮವು ಅನುಷ್ಠಾನಾಧಿಕಾರಿಗಳಿಗಾಗಿ ಇಂದಿರಾ ಮನೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ರಾಜ್ಯದ ಎಲ್ಲ ಜಿಪಂ ಸಿಇಓ ಹಾಗೂ ತಾಪಂ ಸಿಇಓಗಳಿಗೆ ಸೂಚನೆ ನೀಡಿದ್ದಾರೆ. ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಸಾಮಾಜಿಕ ಆರ್ಥಿಕ ಜಾತಿ ಜನಗಣತಿ 2011ರ ಪ್ರಕಾರ, ವಸತಿ ರಹಿತರು ಮತ್ತು ನಿವೇಶನ ರಹಿತರನ್ನು ಗುರುತಿಸಿ ಶಾಶ್ವತ ಪಟ್ಟಿಗೆ ಸೇರಿಸುವಂತೆ ಈಗಾಗಲೇ ಅನುಷ್ಠಾನಾಧಿಕಾರಿಗಳಿಗೆ ತಿಳಿಸಲಾಗಿದೆ.
ಆಗಸ್ಟ್ ಅಂತ್ಯದಲ್ಲಿ ರಾಜ್ಯದಲ್ಲಿ 15,75,330 ವಸತಿ ರಹಿತರು ಹಾಗೂ 6,66,400 ನಿವೇಶನ ರಹಿತರು ಸೇರಿದಂತೆ ಒಟ್ಟು 22,41,730 ಜನರನ್ನು ಗುರುತಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ವಸತಿ ರಹಿತರು, ನಿವೇಶನ ರಹಿತರು ಹಾಗೂ ನಿರ್ಮಿಸಿದ ಮನೆಗಳಲ್ಲಿ ವಾಸವಾಗಿರುವ ಲಾನುಭವಿಗಳ ಮಾಹಿತಿಯನ್ನು ಮನೆಗಳ ಛಾಯಾಚಿತ್ರ ಸಹಿತ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅನುಷ್ಠಾನಾಧಿಕಾರಿಗಳು ಹೊಸದಾಗಿ ಬಿಡುಗಡೆಗೊಳಿಸಿದ ಆ್ಯಪ್ ಮುಖಾಂತರವೇ ಮಾಹಿತಿ ಅಪ್‌ಲೋಡ್ ಮಾಡಬೇಕು ಹಾಗೂ ಹಳೆಯ ವರ್ಶನ್ ಲಿಂಕ್ ಇನ್ನು ಮುಂದೆ ಲಭ್ಯ ಇರುವುದರಿಂದ ಎಂದು ತಿಳಿಸಲಾಗಿದೆ.

ಮಾಹಿತಿ ಅಪ್‌ಲೋಡ್ ಮಾಡುವ ವೇಳೆ, ವಸತಿ ಹಾಗೂ ನಿವೇಶನ ರಹಿತರ ಮತ್ತು ಮನೆಗಳಲ್ಲಿ ವಾಸವಿರುವ ಲಾನುಭವಿಗಳ ವಿದ್ಯಾರ್ಹತೆ, ಕುಟುಂಬದಲ್ಲಿ ಯಾರಾದರೂ ಅಂಗವಿಕಲರಿದ್ದರೆ ನಮೂದಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.












Click it and Unblock the Notifications