ಕಾರವಾರದಲ್ಲಿ ಸೆ. 18ರಂದು ನೌಕಾಪಡೆ ನೇಮಕಾತಿ
ಉತ್ತರ ಕನ್ನಡ, ಆ.20 : ಭಾರತೀಯ ನೌಕಾದಳದಲ್ಲಿ 2015ರ ಜನವರಿ ಬ್ಯಾಚ್‌ನ ಸೀನಿಯರ್ ಸೆಕೆಂಡರಿ ರಿಕ್ರೂಟ್ಸ್ ಹುದ್ದೆಗಳ ಭರ್ತಿಗೆ ಕಾರವಾರದಲ್ಲಿ ಸೆ.18ರಂದು ನೇಮಕಾತಿ ನಡೆಯಲಿದೆ. ಅವಿವಾಹಿತ ಪುರುಷ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.
ಈ ನೇಮಕಾತಿಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು 1994 ಫೆಬ್ರವರಿ 1 ರಿಂದ 1998ರ ಜನವರಿ 31 ರೊಳಗೆ ಜನಿಸಿರಬೇಕು. ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯುಳ್ಳವರಾಗಿದ್ದು, ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ, ರಾಸಾಯನಿಕಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್, ವಿಷಯಗಳನ್ನು ತೆಗೆದುಕೊಂಡಿರವರಾಗಿರಬೇಕು.

ಸ್ಕ್ರೀನಿಂಗ್ ಟೇಸ್ಟ್‌ಗೆ ಹಾಜರಾಗಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳ ಮೂಲ ಪ್ರತಿಗಳು ಹಾಗೂ ಜೆರಾಕ್ಸ್ ಪ್ರತಿಗಳನ್ನು ಹಾಗೂ ತಹಶೀಲ್ದಾರರಿಂದ ದೃಡೀಕರಿಸಿದ ನಿವಾಸಿ ದೃಡೀಕರಣ ಪತ್ರ ಮತ್ತು 8 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ತರಬೇಕು. [ಒನ್ ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ]
ನೇಮಕಾತಿ ಸ್ಥಳದ ವಿಳಾಸ : ಸೆಪ್ಟೆಂಬರ್ 18 ರಂದು ಕಾರವಾರದ ಆರ್ಗಮೇನ್‌ಗೇಟ್, ಐ.ಎನ್.ಎಸ್ ಕದಂಬ ನಾವೆಲ್ ಬೇಸ್‌ನಲ್ಲಿ ನಡೆಯುವ ಸ್ಕ್ರೀನಿಂಗ್ ಟೆಸ್ಟ್‌ನಡೆಯಲಿದೆ. ನೇಮಕಾತಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ http://www.nausena-bharti.nic.in/ ವೆಬ್‌ಸೈಟ್ ಅಥವ 08382-2312521, 231251 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಅರ್ಜಿ ಆಹ್ವಾನ : ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬಂಗಾರಪೇಟೆ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ 16 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ ಮತ್ತು 30 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 30-08-2014ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆನ್‌ಲೈನ್ ಮೂಲಕವೂ http://wcdkolar.kar.nic.in ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಗಾಂಧಿನಗರ, ಬಂಗಾರಪೇಟೆ ದೂರವಾಣಿ ಸಂಖ್ಯೆ : 08153-255409 ಅನ್ನು ಸಂಪರ್ಕಿಸಬಹುದು. [ಮಾಹಿತಿ : ಕರ್ನಾಟಕ ವಾರ್ತೆ]












Click it and Unblock the Notifications