Ration Card: ರೇಷನ್ ಕಾರ್ಡುದಾರರೇ ಈ ಪ್ರಮುಖ ಮಾಹಿತಿಯನ್ನು ಗಮನಿಸಿ
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿಯೂ ಒಂದಾಗಿದೆ. ಅದರಲ್ಲೂ ಇದೀಗ ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ನೀಡಿ ಪಡೆದಂತಹ ಪಡಿತರ ಚೀಟಿಯನ್ನು ರದ್ದು ಮಾಡಿ ಅಂತಹವರನ್ನು ಎಪಿಎಲ್‌ಗೆ ವರ್ಗಾವಣೆ ಮಾಡುತ್ತಿದೆ. ಇದರ ನಡುವೆಯೇ ಇದೀಗ ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಹತ್ವದ ಮಾಹಿತಿಯೋಂದು ಹೊರಬಿದ್ದಿದೆ. ಇಲ್ಲಿದೆ ನೋಡಿ ಮಾಹಿತಿ.
ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಇಂಡಿಯಾ ಅಡಿಯಲ್ಲಿ ಸರ್ಕಾರವು ಪ್ರಮುಖ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದು, ಪಡಿತರ ಚೀಟಿಯನ್ನು ಡಿಜಿಟಲ್ ರೂಪದಲ್ಲಿ ಪಡೆಯುವಂತೆ ಮಾಡುವಲ್ಲಿ ಸರ್ಕಾರ ಯಶಸ್ವಿ ಆಗಿದೆ. ಹಾಗಾದರೆ ಹೇಗೆ ಪಡೆಯಬಹುದು ಹಾಗೂ ಇದರ ಪ್ರಯೋಜನೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

ಜನರಿಗೆ ಅನುಕೂಲ ಆಗುವ ಉದ್ದೇಶದಿಂದ ಎಲ್ಲಾ ರೀತಿಯ ದತ್ತಾಂಶಗಳನ್ನು ಆನ್‌ಲೈನ್‌ನಲ್ಲಿ ಸಿಗುವಂತೆ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಈ ವಿಭಾಗದಲ್ಲಿ ಪಡಿತರ ಚೀಟಿ ಡಿಜಿಟಲ್ ರೂಪದಲ್ಲಿ ದೊರೆಯುವಂತೆ ಮಾಡುವಲ್ಲಿ ಸರ್ಕಾರ ಯಶಸ್ವಿ ಆಗಿದೆ. ದೇಶದಲ್ಲಿ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ.
ಡಿಜಿಟಲ್ ಪಡಿತರ ಚೀಟಿ ಎಲೆಕ್ಟ್ರಾನಿಕ್ ಕಾರ್ಡ್ ಆಗಿದೆ. ಇದು ಪಡಿತರ ಚೀಟಿಯ ಡಿಜಿಟಲ್ ಆವೃತ್ತಿ ಆಗಿದೆ. ಇದನ್ನು ಡೌನ್‌ಲೋಡ್ ಮಾಡುವುದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯುವುದು ಸುಲಭ ಆಗುತ್ತದೆ. ಆನ್‌ಲೈನ್ ಅಥವಾ ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.
ಡಿಜಿಟಲ್ ಪಡಿತರ ಚೀಟಿಯು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಫಲಾನುಭವಿಗಳಿಗೆ ಅನುಕೂಲ ಆಗುವ ಎಲೆಕ್ಟ್ರಾನಿಕ್ ದಾಖಲೆಯಾಗಿದೆ. ಇದನ್ನು ಆನ್‌ಲೈನ್ ಅಥವಾ ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದೆ. ಇದು ಭಾರತ ಸರ್ಕಾರದಿಂದ ಬಿಡುಗಡೆಯಾದ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಪಡಿತರ ಚೀಟಿದಾರರಿಗೆ PES ಸೇವೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಕೇಂದ್ರವು ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತಿದೆ.
ಏನೆಲ್ಲಾ ಆಯ್ಕೆಗಳು ಲಭ್ಯ?
* ಡಿಜಿಟಲ್ ಪಡಿತರ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
* ವೈಯಕ್ತಿಕ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು
* ನಿಮ್ಮ ಪಡಿತರ ಹಕ್ಕುಗಳ ಬಗ್ಗೆ ನೀವು ಮಾಹಿತಿಯನ್ನು ಪಡೆಯಬಹುದು.
* ಕುಟುಂಬ ಸದಸ್ಯರನ್ನು ಸೇರಿಸುವ ಅಥವಾ ತೆಗೆದುಹಾಕುವಂತಹ ಸೇವೆಗಳನ್ನು ಪಡೆಯಬಹುದು.
ಅಪ್ಲಿಕೇಶನ್ ಡೌನ್‌ಲೋಡ್ ಮಾಡೋದೇಗೆ?
* Android ಬಳಕೆದಾರರು Google Play Store ನಿಂದ ಡೌನ್‌ಲೋಡ್ ಮಾಡಿ.
* iOS ಬಳಕೆದಾರರು Apple App Storeನಿಂದ ಡೌನ್‌ಲೋಡ್ ಮಾಡಿ.
* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೇರಾ ರೇಷನ್ 2.0 ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಅದನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
ಡಿಜಿಟಲ್ ಪಡಿತರ ಚೀಟಿ ಪಡೆಯುವುದೇಗೆ?
* ಬಳಿಕ ಪರದೆಯ ಮೇಲೆ ತೋರಿಸಿರುವ ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
* ಪರಿಶೀಲಿಸು ಬಟನ್ ಕ್ಲಿಕ್ ಮಾಡಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
* OTP ಅನ್ನು ನಮೂದಿಸಿ ಮತ್ತು ಪರಿಶೀಲಿಸು ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ನಂತರ, ನಿಮ್ಮ ಡಿಜಿಟಲ್ ಪಡಿತರ ಚೀಟಿ ಪರದೆಯ ಮೇಲೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಡಿಜಿಟಲ್ ಪಡಿತರ ಚೀಟಿಯ ಪ್ರಯೋಜನಗಳೇನು?
* ನೀವು ಇದನ್ನು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಬಳಸಬಹುದು.
* ಭೌತಿಕ ಕಾರ್ಡ್ ಕಳೆದುಕೊಳ್ಳುವ ಭಯವಿಲ್ಲ.
* ಎಲ್ಲ ದಾಖಲೆಗಳೂ ಡಿಜಿಟಲ್ ಆಗಿರುವುದರಿಂದ ವಂಚನೆಯಾಗುವ ಸಾಧ್ಯತೆ ಕಡಿಮೆ.
ನೀವು ಒಂದು ವೇಳೆ ನಿಮ್ಮ ಇ-ಪಡಿತರ ಕಾರ್ಡ್ ಮಾಹಿತಿಯನ್ನು ಪರಿಶೀಲಿಸಲು ನಿಮ್ಮ ರಾಜ್ಯ ಆಹಾರ ಮತ್ತು ಸಾರ್ವಜನಿಕ ಕಲ್ಯಾಣ ಇಲಾಖೆಗೆ ಭೇಟಿ ನೀಡಬೇಖಾಗುತ್ತದೆ












Click it and Unblock the Notifications