karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್

ಬೆಂಗಳೂರು ಏಪ್ರಿಲ್ 18: ಇವತ್ತು ಮಳೆಯಾಗುತ್ತೆ, ನಾಳೆ ಮಳೆಯಾಗುತ್ತೆ ಅಂತ ಸಿಲಿಕಾನ್ ಸಿಟಿ ಮಂದಿ ಕಾದು ಕಾದು ಹೈರಾಣಾಗಿದ್ದಾರೆ. ಮಳೆ ಬಾರದೇ ಇರುವುದು ಬೆಂಗಳೂರಿಗರಿಗೆ ಬಿಸಿಲಿನಷ್ಟೇ ಬೇಸರ ತಂದಿದೆ. ಮನೆಯಲ್ಲಿ ಕುತಿತುಕೊಳ್ಳಲಾಗುತ್ತಿಲ್ಲ. ಮನೆಯಿಂದ ಹೊರಬರಲೂ ಆಗುತ್ತಿಲ್ಲ. ಒಂದೇ ಒಂದು ಬಾರಿ ಮಳೆಯಾಗಲಿ ದೇವರೇ... ಅಂತ ನಿಂತಲ್ಲೂ ಕೂತಲ್ಲೂ ಜನ ವರುಣ ದೇವರನ್ನು ಬೇಡಿಕೊಳ್ಳುತ್ತಿದ್ದಾರೆ. ಈ ನಡುವೆ ಐಎಂಡಿ ಒಂದು ಸಿಹಿ ಸುದ್ದಿಯನ್ನು ನೀಡಿದೆ.

ಸಿಲಿಕಾನ್ ಸಿಟಿ ಮಂದಿಗೆ ಇಂದು ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರಿನಲ್ಲಿ ಗುರುವಾರ ಮತ್ತು ಶುಕ್ರವಾರ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರು ಮುನ್ಸೂಚನೆ ನೀಡಿದೆ.

IMD predicts light rain in karnataka on Thursday Friday

ಮುನ್ಸೂಚನೆಯ ಪ್ರಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬೆಂಗಳೂರು ಏಪ್ರಿಲ್‌ನಲ್ಲಿ 61.7 ಸೆಂ.ಮೀ ಮಳೆಯಾಗುವ ಬದಲು ಈ ಏಪ್ರಿಲ್‌ನಲ್ಲಿ ಕೇವಲ 3-4 ಸೆಂ.ಮೀ ಮಳೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದಾಗ್ಯೂ ನಗರದ ಎಲ್ಲಾ ಭಾಗಗಳಲ್ಲಿ ಮಳೆಯಾಗುವುದಿಲ್ಲ ಎಂದು ಐಎಂಡಿ ಯ ವಿಜ್ಞಾನಿಗಳು ತಿಳಿಸಿದ್ದಾರೆ. "ನಗರದ ಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆಯಾಗುತ್ತದೆ" ಎಂದು ಐಎಂಡಿ ಬೆಂಗಳೂರಿನ ಹಿರಿಯ ವಿಜ್ಞಾನಿ ಎ ಪ್ರಸಾದ್ ಹೇಳಿದರು.

ಐಎಂಡಿ ಏಪ್ರಿಲ್ 10ರ ವೇಳೆಗೆ ನಗರದಲ್ಲಿ ಮಳೆಯ ಮುನ್ಸೂಚನೆ ನೀಡಿತ್ತು. ಇದನ್ನು ನಂತರ ಏಪ್ರಿಲ್ 14ಕ್ಕೆ ಮುಂದೂಡಲಾಯಿತು. ನಗರದಲ್ಲಿ ಮಳೆಯಾಗದಿದ್ದರೂ, ಏಪ್ರಿಲ್ ಮೊದಲ ವಾರಕ್ಕೆ ಹೋಲಿಸಿದರೆ ತಾಪಮಾನ ಗಣನೀಯವಾಗಿ ಕಡಿಮೆಯಾಗಿದೆ. ಏಪ್ರಿಲ್ 6 ರಂದು, ಬೆಂಗಳೂರಿನಲ್ಲಿ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇದು ನಗರವು ಎಂಟು ವರ್ಷಗಳಲ್ಲಿ ಕಂಡ ಗರಿಷ್ಠ ತಾಪಮಾನವಾಗಿದೆ. ಅಂದಿನಿಂದ ಗರಿಷ್ಠ ತಾಪಮಾನದಲ್ಲಿ ಕ್ರಮೇಣ ಇಳಿಕೆ ಕಂಡುಬಂದಿದೆ. ಏಪ್ರಿಲ್ 13 ರಂದು ನಗರದಲ್ಲಿ 34.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆದಾಗ್ಯೂ, ಕಳೆದೆರಡು ದಿನಗಳಲ್ಲಿ ಮೂರು ಡಿಗ್ರಿ ಕುಸಿತವಾಗಿತ್ತು. ಏಪ್ರಿಲ್ 15 ರಂದು ನಗರದಲ್ಲಿ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗುವುದರೊಂದಿಗೆ ತಾಪಮಾನವು ಮತ್ತೆ ಸ್ವಲ್ಪ ಹೆಚ್ಚಾಗಿದೆ.

ಸದ್ಯ ಮುಂದಿನ ಎರಡು ದಿನಗಳಲ್ಲಿ ಅಂದರೆ ಇಂದು ಮತ್ತು ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ ತಿಳಿಸಿದೆ. ಅಲ್ಲದೇ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 30 ರಿಂದ 40 ಕಿಲೋ ಮೀಟರ್ ಗಾಳಿ ವೇಗವಾಗಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಜನ ಸಹ ಮಳೆಗಾಗಿ ಕಾಯ್ತಾ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+