Karnataka Rain: ಕರ್ನಾಟಕದ ಹಲವೆಡೆ ವಾರಾಂತ್ಯದ ಖುಷಿ ಹೆಚ್ಚಿಸಲಿರುವ ವರುಣ: ಮುಂದಿನ 6 ದಿನ ಧಾರಾಕಾರ ಮಳೆ- ಎಲ್ಲಿ? ಯಾವಾಗ?

ಕರ್ನಾಟಕದ ಹಲವೆಡೆ ಕಳೆದ ಕೆಲ ದಿನಗಳಿಂದ ಜೋರು ಮಳೆಯಾಗುತ್ತಿದ್ದು ಬಿಸಿಲಿನ ಝಳ ಕಡಿಮೆಯಾಗಿದೆ. ಅಲ್ಲದೆ ಇಂದಿನಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೇ 16ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಆರು ದಿನಗಳ ಕಾಲ ಗುಡುಗು, ಮಿಂಚು ಹಾಗೂ ತೀವ್ರ ಗಾಳಿಯೊಂದಿಗೆ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯ ಸಿಂಚನವಾಗಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳು ಸೇರಿದಂತೆ ಹಲವೆಡೆ ವರುಣ ಅರ್ಭ ಜೋರಾಗಲಿದೆ. ಅಲ್ಲದೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯ ಕೆಲ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ.

IMD has predicted that there will be rain in Karnataka for the next 6 days

ಅಲ್ಲದೆ ಮಂಡ್ಯ, ಮೈಸೂರು, ಹಾಸನ, ಬೆಳಗಾವಿ, ಹಾವೇರಿ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ತೀವ್ರ ಗಾಳಿಯೊಂದಿಗೆ ಧಾರಾಕಾರ ಮಳೆಯಾಗಲಿದ್ದು, ರಾಯಚೂರು, ಯಾದಗಿರಿ, ಕೊಪ್ಪಳ, ಧಾರವಾಡ, ಕಲಬುರ್ಗಿ, ಬೀದರ್, ಬಳ್ಳಾರಿ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ.

ರಾಜ್ಯದ ಹಲವೆಡೆ ಮಳೆ

ರಾಯಚೂರು ಸೇರಿದಂತೆ ಹಲವೆಡೆ ಕಳೆದ ಎರಡು ದಿನ ಮಳೆಯಾಗಿದೆ. ಹೀಗಾಗಿ ವಾತಾವರಣ ತಂಪಾಗಿದೆ. ಮೇ 9ರಂದು ಬಳ್ಳಾರಿಯಲ್ಲಿ ಈ ವರ್ಷದ ಮೊದಲ ಮಳೆ ಸುರಿದಿದೆ. ಧಾರಾಕಾರ ಮಳೆಯಾದ ಕಾರಣ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. 3 ತಿಂಗಳಿಂದ ರಣ ರಣ ಬಿಸಿಲಿನ ತಾಪಮಾನಕ್ಕೆ ಬಳ್ಳಾರಿ ಹೈರಾಣಾಗಿದ್ದ ನಾಗರಿಕರಿಗೆ ವರುಣದೇವನ ಕೃಪೆ ದೊರೆತಿದೆ.

IMD has predicted that there will be rain in Karnataka for the next 6 days

ಕರಾವಳಿಯಲ್ಲಿ ಹೇಗಿರಲಿದೆ ವಾತಾವರಣ?

ವರದಿಯ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಇನ್ನೆರಡು ದಿನಗಳಲ್ಲಿ ರಾತ್ರಿಯ ಚಳಿ ಹೆಚ್ಚಾಗುವ ನಿರೀಕ್ಷೆ ಇದೆ.ಕರಾವಳಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗಲಿನ ವೇಳೆಯಲ್ಲಿ ಶುಷ್ಕ ಮತ್ತು ಮೋಡ ಕವಿದ ವಾತಾವರಣದೊಂದಿಗೆ ಸಂಜೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಎಲ್ಲೆಲ್ಲಿ ತೀವ್ರ ಗಾಳಿ

ಇನ್ನು ಹರಿಯಾಣದ ಮನೇಸರ್, ಬಲ್ಲಭಗಢ್, ಗೊಹಾನಾ, ಗನ್ನೌರ್, ಸೋನಿಪತ್, ರೋಹ್ಟಕ್, ಖರ್ಖೋಡಾ, ಉತ್ತರ ಪ್ರದೇಶದ ಬರೌತ್, ಬಾಗ್ಪತ್, ಖೇಕ್ರಾ, ಕೈತಾಲ್, ನರ್ವಾನಾ, ರಾಜೌಂಡ್, ಅಸ್ಸಂದ್, ಸಫಿಡಾನ್, ಬರ್ವಾಲಾ, ಜಿಂದ್, ಹಿಸ್ಸಾರ್, ಹಂಸಿ, ಸಿವಾನಿ, ಮೆಹಮ್, ಓಶಮ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ತೀವ್ರತೆಯ ಮಳೆ ಅಥವಾ ತುಂತುರು ಮಳೆಯಾಗಲಿದೆ.

ಎಲ್ಲೆಲ್ಲಿ ಭಾರೀ ಮಳೆಯಾಗಲಿದೆ?

ಇಡೀ ದೆಹಲಿ ಮತ್ತು ಎನ್‌ಸಿಆರ್, ಲೋನಿ ದೆಹತ್, ಹಿಂಡನ್ ಎಎಫ್ ಸ್ಟೇಷನ್, ಗಾಜಿಯಾಬಾದ್, ಇಂದಿರಾಪುರಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ, ಗಾಳಿ ಬೀಸೋ ಸಂಭವ ಇದೆ. ಛಪ್ರೌಲಾ, ನೋಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಫರಿದಾಬಾದ್ ಸೇರಿದಂತೆ ಹಲವೆಡೆ ಮಳೆಯ ಎಚ್ಚರಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+