Heavy Rain: ಭಾರಿ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಭಾಗಕ್ಕೆ 'ಯೆಲ್ಲೋ ಅಲರ್ಟ್'
ಅಂತೂ ಇಂತೂ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಜೂನ್ 1ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೂಡ ರಾಜ್ಯದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಜೂನ್ 8 ಮತ್ತು 9 ರಂದು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು, ಮಿಂಚು ಬಿರುಗಾಳಿ ಸಹಿತ ಮಳೆಯಾಗಲಿದೆ.
ಜೂನ್ 3 ರಿಂದ ಜೂನ್ 11 ರವರೆಗೆ #ಮಳೆ #ಮುನ್ಸೂಚನೆ (ಮೂಲ: SHAR-ISRO): ರಾಜ್ಯದಾದ್ಯಂತ ಗುಡುಗು, ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ವ್ಯಾಪಕವಾಗಿ ಮಳೆ ಹಾಗೂ 08/09th ಜೂನ್ ರಂದು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ.#ಮುಂಗಾರುಮಳೆ @KarnatakaVarthe pic.twitter.com/NoNW3EBrsq
— Karnataka State Natural Disaster Monitoring Centre (@KarnatakaSNDMC) June 3, 2024
ಭಾನುವಾರ ಭಾರಿ ಮಳೆ
ಸೋಮವಾರ ಬೆಳಗ್ಗೆ 8.30 ಗಂಟೆಗೆ ಕೊನೆಯಾದಂತೆ 24 ಗಂಟೆಗಳಲ್ಲಿ ಬಾಗಲಕೋಟೆ 145.5 ಮಿ.ಮೀ, ವಿಜಯಪುರ 121.5 ಮಿ.ಮೀ, ಬಳ್ಳಾರಿ 120 ಮಿ.ಮೀ, ಯಾದಗಿರಿ 117.5 ಮಿ.ಮೀ, ದಾವಣಗೆರೆ 112 ಮಿ.ಮೀ, ಬೆಂಗಳೂರು ನಗರ 110.5 ಮಿ.ಮೀ, ತುಮಕೂರು 107ಮಿ.ಮೀ, ಹಾವೇರಿ 98.5 ಮಿ.ಮೀ, ಕೊಪ್ಪಳ 96 ಮಿ.ಮೀ, ಮಂಡ್ಯ 96 ಮಿ.ಮೀ, ರಾಯಚೂರು 92.5 ಮಿ.ಮೀ, ಗದಗ 89.5 ಮಿ.ಮೀ, ಕಲಬುರಗಿ 79 ಮಿ.ಮೀ, ಚಿಕ್ಕಬಳ್ಳಾಪುರ 77 ಮಿ.ಮೀ, ಚಾಮರಾಜನಗರ 76.5 ಮಿ.ಮೀ, ಕೋಲಾರ 72.5 ಮಿ.ಮೀ, ಧಾರವಾಡ 66 ಮಿ.ಮೀ, ಚಿತ್ರದುರ್ಗ 65 ಮಿ.ಮೀ, ಬೆಂಗಳೂರು ಗ್ರಾಮಾಂತರ 64.5 ಮಿ.ಮೀ, ಕೊಡಗು 64 ಮಿ.ಮೀ, ಉಡುಪಿ 63 ಮಿ.ಮೀ, ಉತ್ತರ ಕನ್ನಡ 58 ಮಿ.ಮೀ, ರಾಮನಗರ 53.5 ಮಿ.ಮೀ, ಬೆಳಗಾವಿ 51 ಮಿ.ಮೀ, ದಕ್ಷಿಣ ಕನ್ನಡ 47.5 ಮಿಮೀ, ಬೀದರ್ 41 ಮಿ.ಮೀ, ಮೈಸೂರು 41 ಮಿ.ಮೀ, ಹಾಸನ 40.5 ಮಿ.ಮೀ, ಚಿಕ್ಕಮಗಳೂರು 26.5 ಮಿ.ಮೀ, ಶಿವಮೊಗ್ಗ 24.5 ಮಿ.ಮೀ ಮಳೆಯಾಗಿದೆ.
ಮುಂಗಾರು ಆರಂಭದಲ್ಲೇ ವ್ಯಾಪಕ ಮಳೆಯಾಗುತ್ತಿರುವುದು ರಾಜ್ಯದ ಜನತೆಗೆ ನೆಮ್ಮದಿ ತಂದಿದೆ. ಹಲವು ಕಡೆಗಳಲ್ಲಿ ಕೆರೆ ಕಟ್ಟೆಗಳು ತುಂಬಲಾರಂಭಿಸಿದ್ದು, ನದಿಗಳು ಕೂಡ ಮೈದುಂಬಿಕೊಳ್ಳುತ್ತಿವೆ. ಜಲಾಶಯಗಳಿಗೆ ನೀರು ಹರಿಯುತ್ತಿದ್ದು, ಈ ಬಾರಿ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿದರೆ ಸಾಕು ಎಂದು ಜನ ಮಳೆರಾಯನಿಗೆ ಬೇಡಿಕೊಳ್ಳುತ್ತಿದ್ದಾರೆ.












Click it and Unblock the Notifications