ಅಕ್ರಮ ಭ್ರೂಣ ಹತ್ಯೆ: ನಾಲ್ವರ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು, ಜೂನ್ 25: ಮಂಡ್ಯ ಜಿಲ್ಲೆಯ ಪಾಂಡವಪುರ ಟೌನ್‌ ವ್ಯಾಪ್ತಿಯ ಆರೋಗ್ಯ ವಸತಿಗೃಹ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಾನೂನು ಬಾಹಿರವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪದಡಿ ಬಂಧನದಲ್ಲಿರುವ ಐವರು ಆರೋಪಿಗಳ ಸಲ್ಲಿಸಿದ್ದ ಪ್ರತ್ಯೇಕ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಹಾಗಾಗಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಮೂವರು ಜೈಲಿನಲ್ಲೇ ಇರಬೇಕಾಗಿದೆ. ಇನ್ನೂ ಬಂಧನ ಭೀತಿಯಲ್ಲಿದ್ದ ಇಬ್ಬರು ಇದೀಗ ತಾವೇ ಶರಣಾಗದೇ ಬೇರೆ ದಾರಿ ಇಲ್ಲದಾಗಿದೆ. ಆರೋಪಿಗಳಾದ ಬೆಂಗಳೂರಿನ ಶಾಂತಿನಗರದ ಡಾ. ಎಸ್‌. ಆದರ್ಶ ಹಾಗೂ ಮೈಸೂರು ತಾಲ್ಲೂಕಿನ ಸಾಲುಂಡಿ ಗ್ರಾಮದ ಶಿವಲಿಂಗನಾಯಕ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

Illegal Abortions Scam HC Refuse To Grant Bail To Five Accused

ಅಷ್ಟೇ ಅಲ್ಲದೆ, ಮೇಲುಕೋಟೆ ಹೋಬಳಿಯ ಮಹದೇಶ್ವರಪುರದ ಎಂ. ಎಸ್‌. ಕಿರಣ್‌, ಪಾಂಡವಪುರ ತಾಲ್ಲೂಕು ಹೊಸಕೋಟೆಯ ಎಚ್‌. ಪಿ. ಅಖಿಲೇಶ್‌ ಹಾಗೂ ಕೆ. ಆರ್‌. ಪೇಟೆಯ ಶ್ರುತಿ ಸಲ್ಲಿಸಿದ್ದ ನಿಗದಿತ ಜಾಮೀನು ಅರ್ಜಿಗಳನ್ನು ನ್ಯಾಯಮೂ‌ರ್ತಿ ಎಂ. ಜಿ. ಉಮಾ ಅವರಿದ್ದ ಏಕಸದಸ್ಯಪೀಠ ನಿರಾಕರಿಸಿದೆ.

ಪ್ರಾಸಿಕ್ಯೂಷನ್ ವಾದವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಜಾಮೀನು ನೀಡುವಂತೆ ಕೋರಿದ ಐವರೂ ಅರ್ಜಿದಾರರ ಪರ ವಕೀಲರ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. "ಇದೊಂದು ಗಂಭೀರ ಪ್ರಕರಣ. ಆರೋಪಿಗಳ ವಿರುದ್ಧ ಗುರುತರ ಆಪಾದನೆಗಳಿವೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಇನ್ನೂ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹಾಗಾಗಿ, ಇಂತಹ ಪ್ರಕರಣದಲ್ಲಿ. ಅದೂ ಈ ಹಂತದಲ್ಲಿ ಜಾಮೀನು ಮಂಜೂರು ಮಾಡಲು ಆಗದು" ಎಂದು ಹೇಳಿದೆ.

ಇನ್ನೂ ತನಿಖೆ ಪ್ರಗತಿಯಲ್ಲಿ: ರಾಜ್ಯ ಪ್ರಾಸಿಕ್ಯೂಷನ್‌ ಪರ ವಕೀಲ ರಾಹುಲ್‌ ರೈ ಅವರು, "ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು ನೀಡಿರುವ ಸ್ವಯಂ ಹೇಳಿಕೆ ಅನುಸಾರ ಭ್ರೂಣದ ಲಿಂಗ ಪತ್ತೆ ಹಾಗೂ ಗರ್ಭಪಾತ ಮಾಡಿಸಿಕೊಂಡಿರುವ ಹಲವು ಸಂತ್ರಸ್ತೆಯರನ್ನು ಪತ್ತೆ ಮಾಡಿ ಅವರ ಹೇಳಿಕೆ ಪಡೆಯಬೇಕಿದೆ, ತನಿಖೆ ಇನ್ನೂ ಪ್ರಗತಿಯಲ್ಲಿದೆ" ಎಂದು ವಿವರಿಸಿದರು.

ಅಂತೆಯೇ, "ಪ್ರಕರಣದ ತನಿಖಾ ವೇಳೆ ವಶಪಡಿಸಿಕೊಂಡಿರುವ ವೈದ್ಯಕೀಯ ಉಪಕರಣಗಳು, ಔಷಧಿಗಳು, ಚುಚ್ಚುಮದ್ದುಗಳನ್ನು ತಜ್ಞರ ಬಳಿಗೆ ಕಳುಹಿಸಿ ಅವರ ಅಭಿಪ್ರಾಯ ಪಡೆಯಬೇಕಿದೆ. ಭ್ರೂಣ ಲಿಂಗ ಪತ್ತೆ ಮಾಡುವ ಸಲುವಾಗಿ ಆರೋಪಿಗಳು ಬಳಸಿರುವ ಸ್ಕ್ಯಾನಿಂಗ್‌ ಮೆಷಿನ್‌ ಪತ್ತೆ ಮಾಡಿ ಅವುಗಳನ್ನು ವಶಕ್ಕೆ ಪಡೆಯಬೇಕಿದೆ ಮತ್ತು ಈ ಪ್ರಕರಣದಲ್ಲಿ ಇನ್ನೂ ಕೆಲವು ಸಾಕ್ಷಿದಾರರ ಹೇಳಿಕೆ ಕಲೆ ಹಾಕಬೇಕಿದ್ದು, ಇನ್ನಷ್ಟು ಸಾಕ್ಷ್ಯಾಧಾರ ಸಂಗ್ರಹಿಸಬೇಕಿದೆ. ಆದ್ದರಿಂದ, ಯಾವುದೇ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು" ಎಂದು ಕೋರಿದ್ದರು.

ಆರೋಪಿಗಳ ವಿರುದ್ಧ, ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನಾ ಕಾಯ್ದೆ-2007 ಹಾಗೂ ವೈದ್ಯಕೀಯ ಗರ್ಭಪಾತ ಕಾಯ್ದೆ-1971ರ (ಎಂಟಿಪಿ ಕಾಯ್ದೆ) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+