ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಆಫರ್; ಕಾಂಗ್ರೆಸ್ ಶಾಸಕ ಹೇಳಿದ್ದೇನು?

ರಾಮನಗರ, ಅಕ್ಟೋಬರ್‌ 27: ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಆಫರ್ ನೀಡಿದ್ದಾರೆ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದ್ದು, ನಮಗೆ ಯಾವುದೇ ಆಫರ್ ಬಂದಿಲ್ಲ.ನಾವು ಅದರಿಂದ ದೂರ ಇದ್ದೀವಿ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮಲ್ಲಿ 136 ಶಾಸಕರಿದ್ದಾರೆ, ಸರ್ಕಾರ ಬಲಿಷ್ಠವಾಗಿದೆ. ಕೆಡವಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

I Have Not Received Any Offer From BJP Says Iqbal Hussain

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದು ಕೇವಲ ನಮ್ಮ ನಾಯಕರೊಬ್ಬರ ಅಭಿಪ್ರಾಯ ಅಲ್ಲ. ಇಡೀ ರಾಮನಗರ ಜಿಲ್ಲೆಯ ಜನರ ಬಯಕೆ. ನಾವೆಲ್ಲ ಮೊದಲು ಬೆಂಗಳೂರು ಜಿಲ್ಲೆಯವರೇ ಆಗಿದ್ದವು. ಬೆಂಗಳೂರು ಒಂದು ಪ್ರಸಿದ್ಧವಾದ ಜಾಗ, ಅದಕ್ಕೆ ಅದರದ್ದೇ ಆದ ಗೌರವ ಇದೆ, ದೇಶದಲ್ಲಿ ಹೆಸರು ವಾಸಿಯಾಗಿದೆ.

ರಾಮನಗರಕ್ಕೆ ತೀರ ಹತ್ತಿರವಾದ ಬೃಹತ್ ನಗರ. ಇದಕ್ಕೆ ಬೆಂಗಳೂರು ಹೆಸರು ಬಂದ್ರೆ ಮತ್ತಷ್ಟು ಅಭಿವೃದ್ಧಿ ಆಗುತ್ತದೆ, ಮುಂದಕ್ಕೆ ನಾವೆಲ್ಲ ಅಭಿವೃದ್ಧಿ ಕಾಣಲು ಇದು ಅವಶ್ಯಕ. ಯಾರೋ ಒಬ್ಬರಿಗೋಸ್ಕರ, ಸ್ವಾರ್ಥಕ್ಕೋಸ್ಕರ ಹೆಸರು ಬದಲಾವಣೆ ಮಾಡುತ್ತಿಲ್ಲ. ಅಂತಹ ಕೆಲಸವನ್ನ ಕಾಂಗ್ರೆಸ್ ನವರು ಮಾಡಲ್ಲ, ಅಧಿಕಾರದ ಇದೆ ಮಾಡಿ ತೋರಿಸ್ತೀವಿ. ಇದಕ್ಕೆ ವಿರೋಧ ಮಾಡ್ತಿರುವವ ಕೊಡುಗೆ ಏನು.? ಎಂದು ಪ್ರಶ್ನಿಸಿದ ಅವರು, ಹಾರೋಹಳ್ಳಿ ತಾಲೂಕು ಮಾಡಿ, ಏನು ಮಾಡಿದ್ರಿ. ಅಧಿಕಾರಿಗಳು ಮರದ ಕೆಳಗೆ ಕುತ್ಕೊಂಡು ಕೆಲಸ ಮಾಡುತ್ತಿದ್ದಾರೆ.

ರಾಮನಗರದಲ್ಲಿ ಕುಡಿಯೋಕೆ ನೀರಿಲ್ಲ, ಒಳಚರಂಡಿ, ರಸ್ತೆ ಇಲ್ಲ. ಜಿಲ್ಲೆ ಮಾಡಿ ನೀವು‌ ಮಾಡಿರೋ ಸಾಧನೆ ಆದ್ರೂ ಏನು.? ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿದರು. ಕೇವಲ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕೂತ್ಕೊಂಡ್ ದರ್ಬಾರ್ ಮಾಡಿದ್ದೇ ಆಯ್ತು ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು, ಪ್ರತಿ ದಿನ ಮಾಧ್ಯಮಗಳಲ್ಲಿ ಕಾಣೊಸಿಕೊಳ್ಳಲು ಹೀಗೆ ಮಾತನಾಡ್ತಿದ್ದಾರೆ. ಏನೇನೋ ಹೇಳಿಕೆ ಕೊಡೊದು, ಅಸಭ್ಯ ಪದ ಬಳಕೆ ಮಾಡೋದು.ರಾಮನಗರಕ್ಕೆ ಏನು‌ ಮಾಡಿದ್ದೀನಿ ಅಂತ ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ. ನಮಗೆ ಈಗ ಅಧಿಕಾರ ಇದೆ, ನಾವು‌ ಅಭಿವೃದ್ಧಿ ಮಾಡಿ ತೋರಿಸ್ತೀವಿ ಎಂದ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಎಚ್‌ ಡಿ ಕುಮಾರಸ್ವಾಮಿ ಆಣೆ-ಪ್ರಮಾಣ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮಂಜುನಾಥಸ್ವಾಮಿ ಇಡೀ ಲೋಕಕ್ಕೆ ದೇವರು. ಕೇವಲ ಇವರೊಬ್ಬರಿಗೆ ದೇವರಲ್ಲ, ಅವರೇ ಒಪ್ಪಿಕೊಂಡಿದ್ದಾರೆ ದೇಣಿಗೆ ಬಂದಿದೆ ಅಂತ. ಹಾಗಿದ್ರೆ ಹಣತಿಂದಿರೋ ಬಗ್ಗೆ ಕಮಿಟ್ ಆಗಿದ್ದಾರೆ ಅಂತ ಅರ್ಥ, ಹೆಸರು ಬದಲಾವಣೆ ಮಾಡಿದ್ರೆ ಕುಮಾರಸ್ವಾಮಿ ಅಮರಣಾಂತ ಸತ್ಯಾಗ್ರಹ ಮಾಡುವ ವಯಸ್ಸು ಮುಗಿದಿದೆ ಎಂದು ಟಾಂಗ್‌ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+