ಲಂಗಾ ದವನ್ಯಾಗ ಮಸ್ತ್ ಕಾಣತಿ .. ಅಂದ್ರೆ ಬೀಳುತ್ತೆ ಕೇಸ್‌, ಹುಷಾರ್‌!

ರೋಡ್‌ ರೋಮಿಯೋಗಳಿಗೆ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ರೋಡ್‌ ರೋಮಿಯೋಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹುಬ್ಬಳ್ಳಿ - ಧಾರವಾಡದಲ್ಲಿ ಈಚೆಗೆ ನಡೆದ ಘಟನೆಯು ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೊಲೀಸ್‌ ಇಲಾಖೆಯು ಹೆಚ್ಚುತ್ತುಕೊಂಡಿದ್ದು, ಮಹತ್ವದ ಎಚ್ಚರಿಕೆಯನ್ನು ಕೊಟ್ಟಿದೆ. ರಸ್ತೆಗಳಲ್ಲಿ ಮಹಿಳೆಯರು, ಯುವತಿಯರು ಹಾಗೂ ಮಕ್ಕಳನ್ನು ಚುಡಾಯಿಸುವವರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ..

ನಿನ್ನ ಫೋನ್ ನಂಬರ್ ಕೊಟ್ರ ಬರ್ತೈತಿ ಪುಣ್ಯ..

ಅನ್ನೋಂಗಿಲ್ಲ ಎಂದು ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ. ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ನಿನ್ನ ಫೋನ್ ನಂಬರ್ ಕೊಟ್ರ ಬರ್ತೈತಿ ಪುಣ್ಯ ಅಷ್ಟ.. ಅಂತಾವ ಹಾಡು ಕೇಳಿ ಅದನ್ನ ಅಲ್ಲಿಗೆ ಬಿಡ್ರಿ ಎಂದು ಹುಬ್ಬಳ್ಳಿ - ಧಾರವಾಡ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. ಈ ರೀತಿಯ ಹಾಡುಗಳನ್ನು ಕೇಳಿ ಬಿಡಬೇಕು. ರಸ್ತೆಗಳಲ್ಲಿ ಪ್ರಯೋಗಿಸಬಾರದು ಎಂದು ಹೇಳಲಾಗಿದೆ. ಅದನ್ನ ಬಿಟ್ಟು ಏನರ ಹೆಣ್ಣುಮಕ್ಕಳನ್ನು ಚುಡಾಯಿಸುದ ಆಗ್ಲಿ, ಕಾಡಿಸುದ ಆಗ್ಲಿ, ಮಾಡಿದ್ರ ಕೇಸ್, ರೌಡಿಶೀಟ್ ಹಾಕಸ್ಕೊಂಡ ಹುಬ್ಬಳ್ಳಿ-ಧಾರವಾಡದಿಂದ ಸೀದಾ ಗಡಿಪಾರು ಆಗ್ತೀರಿ ಅಂತ ಹೇಳಲಾಗಿದೆ.

Hubli-Dharwad Police Warn to File Rowdy Sheeter Case Against Women Teasers

ಮಹಿಳೆಯರು ಹಾಗೂ ಯುವತಿಯರನ್ನು ಚುಡಾಯಿಸುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹುಬ್ಬಳ್ಳಿ - ಧಾರವಾಡ ಪೊಲೀಸ್‌ ಕಮಿಷನರ್‌ (ಆಯುಕ್ತ) ಎನ್‌. ಶಶಿಕುಮಾರ್‌ ಹೇಳಿದ್ದಾರೆ. ಈ ರೀತಿ ಯಾರು ರೋಡ್‌ ರೋಮಿಯೋಗಳ ರೀತಿ ಬೀದಿ ಬೀದಿಗಳಲ್ಲಿ ಸುತ್ತುತ್ತಾರೋ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ.

ಈ ರೀತಿ ನಗರದಲ್ಲಿ ಸುತ್ತುತ್ತಿರುವವರನ್ನು ಪ್ರತಿ ಪೊಲೀಸ್‌ ಠಾಣೆಯಲ್ಲೂ ಪಟ್ಟಿ ಮಾಡಲಾಗುತ್ತಿದೆ. ಚುಡಾಯಿಸಿ ತೊಂದರೆ ಕೊಡುವ ಯುವಕರು ಹಾಗೂ ಪುರುಷರ ಮೇಲೆ ರೌಡಿಶೀಟರ್ ತೆಗೆಯಲಾಗುವುದು. ಅಲ್ಲದೇ ಸ್ಟೇಷನ್‌ಗೆ ಕರೆಸಿ ವಾರ್ನ್ ಮಾಡುವುದು ಹಾಗೂ ಕಾನೂನು ರೀತಿಯ ಕ್ರಮಗಳನ್ನು ತಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಎಲ್ಲಾರ ಮನೆಯಲ್ಲೂ ಅಕ್ಕ - ತಂಗಿಯರು ಮಹಿಳೆಯುರು ಸಹ ಇರುತ್ತಾರೆ. ಯಾವುದೇ ಮಹಿಳೆ ಈ ರೀತಿ ಮಾಡುವುದನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನು ಈ ರೀತಿ ಯಾರಾದರೂ ಯುವತಿಯರನ್ನು ಚುಡಾಯಿಸುತ್ತಿರುವುದು ಕಂಡು ಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು.

ನಾವು ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ವಿಚಾರದಲ್ಲಿ ಪೋಷಕರೇ ಬಂದು ದೂರು ನೀಡಬೇಕು ಎಂದೇನು ಇಲ್ಲ. ಯಾರಾದರೂ ಬಂದು ದೂರು ನೀಡಬಹುದು. ನಾವು (ಪೊಲೀಸರು) ಅವರ ಮೇಲೆ ಕಾನೂನು ಕ್ರಮ ಜರುಗಿಸಲಿದ್ದೇವೆ ಎಂದಿದ್ದಾರೆ.

ಸು-ಮೋಟೋ: ಇನ್ನು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಚುಡಾಯಿಸುವ ಘಟನೆ ನಡೆದು. ಆ ಪ್ರಕರಣದಲ್ಲಿ ಪೋಷಕರು ದೂರು ನೀಡಲು ಹಿಂಜರಿದರೆ ಪೊಲೀಸ್ ಇಲಾಖೆಯಿಂದಲೇ ಸು-ಮೋಟೋ (ಸ್ವಯಂ ಪ್ರೇರಿತ) ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐವರ ಬಂಧನ: ಹಳೇ ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಶುಭಂ ಹಾಗೂ ಮೆಹಬೂಬ್ ಇವರಿಗೆ ಸಹಕರಿಸಿದ ಸಾಗರ್, ಸಚಿನ್, ಶ್ರೀವತ್ಸ, ಸೇರಿದಂತೆ ಒಟ್ಟು ಐವರನ್ನು ಹುಬ್ಬಳ್ಳಿ - ಧಾರವಾಡ ಪೊಲೀಸರು ಬಂಧಿಸಿದ್ದು. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲದೇ ಬಂಧಿತರಿಂದ ಒಟ್ಟು 6 ಮೊಬೈಲ್ ಫೋನ್ & ಕೃತ್ಯಕ್ಕೆ ಬಳಸಿದ್ದ 1 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಹುಬ್ಬಳ್ಳಿ - ಧಾರವಾಡ ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+