Mantralayam Special Bus: ಉತ್ತರ ಕರ್ನಾಟಕ ರಾಘವೇಂದ್ರ ಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್, ಇಲ್ಲಿಂದ ವಿಶೇಷ ಬಸ್ ಸಂಚಾರ

ಹುಬ್ಬಳ್ಳಿ/ಹಾವೇರಿ: ಕರ್ನಾಟಕದ ಗಡಿ ಜಿಲ್ಲೆ ರಾಯೂಚೂರು ಬಳಿ ಆಂಧ್ರ ಪ್ರದೇಶದದ ತುಂಗಭದ್ರಾ ನದಿ ತಟದಲ್ಲಿರುವ ಶ್ರೀ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿಗಳ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ತೆರಳುತ್ತಾರೆ. ಉತ್ತರ ಕರ್ನಾಟಕದಲ್ಲಿರುವ ಅಪಾರ ಭಕ್ತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸಾರ್ವಜನಿಕರಿಗೆ ಇಲ್ಲಿಂದ ಮಂತ್ರಾಲಯಕ್ಕೆ ತೆರಳಲು ವಿಶೇಷ ನಾನ್ ಎಸಿ ಸ್ಲೀಪರ್ ಬಸ್‌ ಬಿಡಲಾಗಿದೆ ಎಂದು ಕರ್ನಾಟಕದ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ತಿಳಿಸಿದೆ.

ಹುಬ್ಬಳ್ಳಿ, ಧಾರವಾಡ ಅವಳಿ ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅನುಕೂಲ ಆಗುವಂತೆ ಹುಬ್ಬಳ್ಳಿ ನಗರದಿಂದ ಮಂತ್ರಾಲಯಕ್ಕೆ ಈ ನಾನ್ ಎಸಿ ಸ್ಲೀಪರ್ ಸಾರಿಗೆ ಸೇವೆ ಲಭ್ಯವಾಗಲಿದೆ. ಹಾವೇರಿಯಿಂದಲೂ ಪ್ರತ್ಯೇಕ ವಿಶೇಷ ಸಾರಿಗೆ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಬಸ್ ಗಳ ಸಂಚಾರ ಮಾರ್ಗ, ಸಮಯ, ವೇಳಾಪಟ್ಟಿ ಮತ್ತು ಟಿಕೆಟ್ ದರ ವಿವರ ಇಲ್ಲಿದೆ.

Hubballi to Mantralayam

ಹುಬ್ಬಳ್ಳಿ-ಮಂತ್ರಾಲಯ ನಾನ್ ಎಸಿ ಸ್ಲೀಪರ್ ಬಸ್ ವೇಳಾಪಟ್ಟಿ

ಹುಬ್ಬಳ್ಳಿ ಬಸ್‌ ನಿಲ್ದಾಣದಿಂದ ಈ ವಾಯುವ್ಯ ಸಾರಿಗೆ ನಾನ್ ಎಸಿ ಸ್ಲೀಪರ್ ಬಸ್ ರಾತ್ರಿ 08.30ಕ್ಕೆ ಬಿಡುತ್ತದೆ. ಮಾರನೇ ದಿನ ಬೆಳಗಿನ ಜಾವ 5 ಗಂಟೆಗೆ ಮಂತ್ರಾಲಯವನ್ನು ತಲುಪುತ್ತದೆ.

ಸಂಚಾರ ಮಾರ್ಗ, ನಿಲುಗಡೆ ಸ್ಥಳ

ಬಸ್ ಹುಬ್ಬಳ್ಳಿಯಿಂದ ಗದಗ, ಕೊಪ್ಪಳ, ಹೊಸಪೇಟೆ ಮಾರ್ಗವಾಗಿ, ಅಧೋನಿ, ಬಳ್ಳಾರಿ ಮೂಲಕ ಮಂತ್ರಾಲಯ ತಲುಪುತ್ತದೆ. ಈ ಮಾರ್ಗದಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ನಿಲುಗಡೆ ಸಹ ನೀಡಲಿದೆ.

ಟಿಕೆಟ್ ದರ ಎಷ್ಟು?

ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ತೆರಳುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಒಬ್ಬ ಪ್ರಯಾಣಿಕರಿಗೆ ತಲಾ 782 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ 77609 91682 ಮತ್ತು ಟಿಕೆಟ್ ಬುಕಿಂಗ್‌ಗೆ www.ksrtc.in ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾವೇರಿಯಿಂದಲೂ ಮಂತ್ರಾಲಯಕ್ಕೆ ಬಸ್

ಹುಬ್ಬಳ್ಳಿಯಿಂದ ಮಾತ್ರವಲ್ಲದೇ ಹಾವೇರಿಯಿಂದ ಮಂತ್ರಾಲಯಕ್ಕೆ ವಿಶೇಷ ಸಾರಿಗೆ ಬಸ್ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಬಸ್ ಹಾವೇರಿ ಜಿಲ್ಲೆಯ ಸವಣೂರಿನಿಂದ ಹೊರಡುತ್ತದೆ.

ಸಂಚಾರ ಮಾರ್ಗ, ವೇಳಾಪಟ್ಟಿ

ಈ ಬಸ್ ಸವಣೂರು ಬಸ್ ನಿಲ್ದಾಣದಿಂದ ಸಂಜೆ 6 ಗಂಟೆ ಹೊರಡುತ್ತದೆ. ಅಲ್ಲಿಂದ ಹಾವೇರಿ, ಗುತ್ತಲ, ಸೊಂಡೂರು, ಬಳ್ಳಾರಿ ಮೂಲಕ ಸಂಚಾರ ಮಾಡಲಿದೆ. ಈ ಬಸ್ ಸಹಿತ ಮಾರನೇ ದಿನ ಬೆಳಗ್ಗೆ ಸುಮಾರು 5ಗಂಟೆ ಆಸುಪಾಸಿನಲ್ಲಿ ಮಂತ್ರಾಲಯ ತಲುಪಲಿದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಘಟಕದ ಮೇಲ್ವಿಚಾರಕರನ್ನು ಸಂಪರ್ಕಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+