NKWRTC: ಕರ್ನಾಟಕ-ಗೋವಾ ಸಂಪರ್ಕ ಮತ್ತಷ್ಟು ಸುಲಭ, ಹುಬ್ಬಳ್ಳಿ-ಮಡಗಾಂವಗೆ 2 ವಿಶೇಷ ಬಸ್ ಸಂಚಾರ

ಹುಬ್ಬಳ್ಳಿ; ಉತ್ತರ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಹುಬ್ಬಳ್ಳಿ-ಧಾರವಾಡ ಭಾಗದಿಂದ ಗೋವಾರ ಕಡೆಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಅದರಲ್ಲೂ ಸದ್ಯದ ಬೇಸಿಗೆ ವೇಳೆ ಗೋವಾದತ್ತ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಅಧಿಕ. ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ- ಮಡಗಾಂವ ನಡುವೆ 2 ವೇಗದೂತ ಬಸ್ ಗಳ ಸಂಚಾರ ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿರುವ ಕಾರಣ ಸಾರ್ವಜನಿಕರ ಬೇಡಿಕೆಯ ಮೇರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ - ಮಡಗಾಂವ ನಡುವೆ ಎರಡು ವೇಗದೂತ ಬಸ್ ಗಳ ಸಂಚಾರ ಸೇವೆ ಒದಗಿಸುತ್ತಿದೆ. ಧಾರವಾಡ ಸೇರಿ ವಿವಿಧ ಭಾಗದ ಜನರಿಗೆ ಸಹಾಯವಾಗಲಿದೆ.

Hubballi-Madgaon Two Buses

ನಿತ್ಯ ಉತ್ತರ ಕರ್ನಾಟಕದ ಜನರು ಉದ್ಯೋಗ, ವಾಣಿಜ್ಯ, ಶೈಕ್ಷಣಿಕ ಕಾರಣ, ಪ್ರವಾಸ, ಮತ್ತಿತರ ಕೆಲಸ ಕಾರ್ಯಗಳಿಗಾಗಿ ಪ್ರತಿ ದಿನ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಿಂದ ನೆರೆಯ ಗೋವಾ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಗಿ ಬರುತ್ತಾರೆ. ಪ್ರಸ್ತುತದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇವೆ. ಬೇಸಿಗೆ ರಜೆ ಆರಂಭವಾಗಿ ವಾರಗಳು ಕಳೆದಿವೆ.

Gold Bag: ನಗದು-ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ಪ್ರಾಮಾಣಿಕ ಬಸ್ ಚಾಲಕ, NWKRTC
Gold Bag: ನಗದು-ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ಪ್ರಾಮಾಣಿಕ ಬಸ್ ಚಾಲಕ, NWKRTC

ಹೀಗಾಗಿ ಸ್ನೇಹಿತರು ಕುಟುಂಬ ಸಮೇತರಾಗಿ ಪ್ರವಾಸ ಮತ್ತಿತರ ಕಾರಣಗಳಿಂದಾಗಿ ಗೋವಾಗೆ ತೆರಳುವುದು ಹೆಚ್ಚಾಗಿದೆ. ಪ್ರಯಾಣಿಕರ ದಟ್ಟಣೆಯಲ್ಲಿ ಏರಿಕೆ ಆಗಿದೆ. ಉಭಯ ರಾಜ್ಯಗಳ ನಡುವೆ ಪ್ರಯಾಣ ಮಾಡುವವರ ಅನುಕೂಲವಾಗುವಂತೆ ಸಾರ್ವಜನಿಕರ ಮನವಿ ಮೇರೆಗೆ ಹುಬ್ಬಳ್ಳಿ ಹಾಗೂ ಮಡಗಾಂವ ಸಂಚಾರ ಸುಧಾರಿಸಿದ್ದೇವೆ. ಹೆಚ್ಚುವರಿ ಬಸ್ ಸಿಕ್ಕಂತಾಗಿದೆ.

ಎಲ್ಲಿಂದ ಬಸ್‌ ಸಂಚಾರ, ಮಾರ್ಗಗಳು

ಈ ವಿಶೇಷ ಬಸ್‌ಗಳು ಹುಬ್ಬಳ್ಳಿಯ ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಹೊರಡುತ್ತವೆ. ಧಾರವಾಡ, ಅಳ್ನಾವರ, ರಾಮನಗರ, ಪೊಂಡಾ ಮಾರ್ಗವಾಗಿ ಸಂಚರಿಸುತ್ತವೆ.

ಬಸ್‌ಗಳ ಸಮಯ, ವೇಳಾಪಟ್ಟಿ

* ಹುಬ್ಬಳ್ಳಿ- ಮಡಗಾಂವ ಬಸ್ ಹುಬ್ಬಳ್ಳಿಯ ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 6-30 ಹೊರಟು ಬೆಳಗ್ಗೆ 11-15ಗಂಟೆಗೆ ತಲುಪುತ್ತದೆ. ಇನ್ನೊಂದು ಬಸ್ 10-30ಕ್ಕೆ ಇಲ್ಲಿಂದ ಹೊರಟು ಮಡಗಾಂವ ಅನ್ನು ಮಧ್ಯಾಹ್ನ 3-15ಕ್ಕೆ ತಲುಪುತ್ತದೆ.

* ಮಡಗಾಂವ - ಹುಬ್ಬಳ್ಳಿ ಬಸ್ ಮಡಗಾಂವ ಬಸ್ ನಿಲ್ದಾಣದಿಂದ ಬೆಳಗ್ಗೆ 11-45 ಹಾಗೂ ಸಂಜೆ 4-15ಕ್ಕೆ ಹೊರಡುತ್ತವೆ. ಕ್ರಮವಾಗಿ ಈ ಬಸ್ ಹುಬ್ಬಳ್ಳಿಗೆ ಸಂಜೆ 4-45 ಹಾಗೂ ರಾತ್ರಿ 9 00ಕ್ಕೆ ಆಗಮಿಸುತ್ತವೆ.

NWKRTC: ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ-ಪಣಜಿಗೆ ನಿತ್ಯ ಎಕ್ಸ್‌ಪ್ರೆಸ್ ಬಸ್‌ಗಳ ಸಂಚಾರ, ವೇಳಾಪಟ್ಟಿ
NWKRTC: ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ-ಪಣಜಿಗೆ ನಿತ್ಯ ಎಕ್ಸ್‌ಪ್ರೆಸ್ ಬಸ್‌ಗಳ ಸಂಚಾರ, ವೇಳಾಪಟ್ಟಿ

ಒಬ್ಬರಿಗೆ ಟಿಕೆಟ್ ದರ ಎಷ್ಟು?

ಹುಬ್ಬಳ್ಳಿ-ಮಡಗಾಂವ ಬಸ್ ಟಿಕೆಟ್ ದರ (ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಒಳಗೊಂಡು) 229 ರೂಪಾಯಿ ನಿಗದಿಪಡಿಆಲಗಿದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಹುಬ್ಬಳ್ಳಿಯಿಂದ ಗೋವಾ ರಾಜ್ಯದ ಇತರೆ ಪ್ರಮುಖ ಸ್ಥಳಗಳಿಗೆ ಇನ್ನಷ್ಟು ಬಸ್ಸುಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+