ವಾಹನ ಮಾಲೀಕರ ನಂಬರ್ ಪ್ಲೇಟ್ ಟೆನ್ಷನ್ ಸರಿ ಮಾಡುತ್ತಾ ಸರ್ಕಾರ?
ವಾಹನ ಮಾಲೀಕರಿಗೆ ಟೆನ್ಷನ್.. ಟೆನ್ಷನ್.. ಯಾಕಂದ್ರೆ ಈಗ ಎಲ್ಲ ಕಡೆ ಒಂದೇ ಮಾತು, ನಂಬರ್ ಪ್ಲೇಟ್ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅದರಲ್ಲೂ ಇನ್ನೇನು ಕೆಲವೇ ದಿನದಲ್ಲಿ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇದ್ದವರಿಗೆ ಬರೆ ಗ್ಯಾರಂಟಿ. ಸಾವಿರಾರು ರೂಪಾಯಿ ಫೈನ್ ಕಟ್ಟಬೇಕಾಗುತ್ತದೆ, ಹೀಗಿದ್ದಾಗಲೇ ಹೊಸ ನಂಬರ್ ಪ್ಲೇಟ್ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸೋದಕ್ಕೆ ಆಗುತ್ತಿಲ್ಲ. ಹೀಗೆ ಸಂಕಷ್ಟ ಎದುರಾದಾಗ ಮತ್ತೊಮ್ಮೆ ಡೆಡ್‌ಲೈನ್ ವಿಸ್ತರಣೆ ಆಗುತ್ತಾ? ಮುಂದೆ ಓದಿ.
ಕರ್ನಾಟಕದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿ ಆಗಿರುವ ವಾಹನ ಸಂಖ್ಯೆಯು 2 ಕೋಟಿ ಮೀರಿದೆ. ಇವರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆದು ಅಳವಡಿಸಿಕೊಳ್ಳಬೇಕಿದೆ. ಆದ್ರೆ ಗಡುವು ವಿಸ್ತರಿಸಿದರೂ ಈವರೆಗೂ ಕೇವಲ 12 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಲಾಗಿದೆ. ಬಾಕಿ 1.88 ಕೋಟಿ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಅಳವಡಿಸೋಕೆ, ಹೊಸ ಸವಾಲು ಎದುರಾಗಿದೆ. ಈ ಹಿನ್ನೆಲೆ ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಜನರು ಮುಗಿಬಿದ್ದಿರುವ ಸಮಯದಲ್ಲೇ, ವೆಬ್‌ಸೈಟ್ ಕೂಡ ಕ್ರಾಷ್ ಆಗುತ್ತಿದೆ. ಹಾಗಾದರೆ ಮತ್ತೆ ಎಚ್‌ಎಸ್‌ಆರ್‌ಪಿ (HSRP) ಅಳವಡಿಕೆಗೆ ಅವಧಿ ವಿಸ್ತರಣೆ ಆಗುತ್ತಾ?

6 ತಿಂಗಳು ಡೆಡ್‌ಲೈನ್ ವಿಸ್ತರಣೆ?
ಅಂದಹಾಗೆ ಇದೀಗ ವಾಹನ ಮಾಲೀಕರಿಗೆ ಎದುರಾಗಿರುವ ಸಮಸ್ಯೆ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ. ಹಾಗೇ ಸಚಿವರ ಮಾತಿನಲ್ಲಿ ವಾಹನಗಳ ಮಾಲೀಕರಿಗೆ ಒಂದಷ್ಟು ರಿಲೀಫ್ ಸಿಗುವ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಸಾರಿಗೆ ಸಚಿವರು ಹೇಳಿದ್ದಾದರೂ ಏನು? ಫೆಬ್ರವರಿ 17ರ ಶನಿವಾರ ಬಳಿಕ ಮತ್ತೊಮ್ಮೆ ಎಚ್‌ಎಸ್‌ಆರ್‌ಪಿ (HSRP) ಅಳವಡಿಕೆಗೆ ಡೇಟ್ ಮುಂದೂಡಿಕೆ ಆಗುತ್ತಾ? 6 ತಿಂಗಳು ಡೆಡ್‌ಲೈನ್ ವಿಸ್ತರಣೆ ಮಾಡೋಕೆ ಪ್ಲ್ಯಾನ್ ಇದೆಯಾ? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ವಾಹನ ಮಾಲೀಕರು ಏನು ಮಾಡಬೇಕು?
ಕರ್ನಾಟಕ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇದೀಗ ನೀಡಿರುವ ಹೇಳಿಕೆ, ವಾಹನ ಮಾಲೀಕರಿಗೆ ಸ್ವಲ್ಪ ರಿಲೀಫ್ ನೀಡುವ ಮುನ್ಸೂಚನೆ ಕೊಟ್ಟಿದೆ. ಸದ್ಯಕ್ಕೆ ಸರ್ಕಾರ ಎಚ್‌ಎಸ್‌ಆರ್‌ಪಿ (HSRP) ಗಡುವು ವಿಸ್ತರಣೆ ಬಗ್ಗೆ ಚಿಂತನೆ ನಡೆಸಿಲ್ಲ. ಆದರೆ ಈ ಕುರಿತು, ಫೆಬ್ರವರಿ 17ರ ಬಳಿಕ ಮಹತ್ವದ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ ಸಾರಿಗೆ ಸಚಿವರು.
ಈ ಮೂಲಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಹೇಳಿಕೆ, ಡೆಡ್‌ಲೈನ್ ವಿಸ್ತರಣೆಯ ಬಗ್ಗೆ ಪರೋಕ್ಷ ಮುನ್ಸೂಚನೆ ನೀಡಿದೆ. ಮತ್ತೊಂದು ಕಡೆ ವಾಹನಗಳ ಮಾಲೀಕರು ಇದೀಗ ಎಚ್‌ಎಸ್‌ಆರ್‌ಪಿ (HSRP) ಡೆಡ್‌ಲೈನ್ ಅನ್ನ ಮತ್ತೆ 6 ತಿಂಗಳು ವಿಸ್ತರಣೆ ಮಾಡಲು ಬೇಡಿಕೆ ಇಟ್ಟಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಈ ಬಗ್ಗೆ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ? ಅನ್ನೋದನ್ನ ಕೂಡ ಕಾದು ನೋಡಬೇಕಿದೆ.
ಕರ್ನಾಟಕ ಸರ್ಕಾರ ಅಧಿಸೂಚನೆ ಸಂಖ್ಯೆ: ಟಿಡಿ 193 ಟಿಡಿಒ 2021 ದಿನಾಂಕ: 17-08-2023 & ಆಯುಕ್ತರು, ಸಾರಿಗೆ & ರಸ್ತೆ ಸುರಕ್ಷತೆ, ಬೆಂಗಳೂರು ಸುತ್ತೋಲೆ ಸಂಖ್ಯೆ: ಸಾಆ/ನೋಂ- 1/30-434/2022-23, ದಿನಾಂಕ : 18-08-2023 ಪ್ರಕಾರ, ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ.












Click it and Unblock the Notifications