HSRP Plate: ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ ಪ್ಲೀಸ್!
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ 17 ಡೆಡ್‌ಲೈನ್ ನೀಡಿದೆ ರಾಜ್ಯ ಸಾರಿಗೆ & ರಸ್ತೆ ಸುರಕ್ಷತಾ ಇಲಾಖೆ. ಫೆಬ್ರವರಿ 17ರ ಗಡುವಿನ ಒಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು ಶುಲ್ಕ ಪಾವತಿಸಿದ ಪ್ರಕರಣದಲ್ಲಿ, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ನಿಗದಿತ ದಿನಾಂಕದಿಂದ ಕೆಲ ದಿನಗಳ ಕಾಲ ವಿನಾಯಿತಿ ಇರಲಿದೆ. ಆದ್ರೆ 2024 ಫೆಬ್ರವರಿ 17ರ ನಂತರವೂ ನೀವು ಇದಕ್ಕೆ ಅರ್ಜಿ ಸಲ್ಲಿಸದೇ ಇದ್ದರೆ ಏನಾಗುತ್ತೆ ಗೊತ್ತಾ?
ಯೆಸ್, ನಕಲಿ ನಂಬರ್ ಪ್ಲೇಟ್ ಸೇರಿದಂತೆ ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುವುದು ತಪ್ಪಿಸಲು & ವಾಹನಗಳನ್ನು ಟ್ರ್ಯಾಕ್ ಮಾಡೋಕೆ ಸೇರಿ ಹಲವು ಕಾರಣಕ್ಕೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆ ಅಗತ್ಯ. ಆದ್ರೆ ಹೀಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಹಲವು ಬಾರಿ ಡೆಡ್‌ಲೈನ್ ನೀಡಿ, ಗಡುವು ಹಾಕಿದ್ರೂ ವಾಹನದ ಮಾಲೀಕರು ತಮ್ಮ ತಮ್ಮ ಗಾಡಿಗಳಿಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ (HSRP) ಅಳವಡಿಕೆ ಮಾಡೋದಕ್ಕೆ ಮುಂದಾಗುತ್ತಿಲ್ಲ.

ಮತ್ತೆ ದಿನಾಂಕ ವಿಸ್ತರಣೆ ಆಗುತ್ತಾ?
ಇದೇ ಕಾರಣಕ್ಕೆ ರಾಜ್ಯ ಸಾರಿಗೆ ಇಲಾಖೆ, ಈಗಾಗಲೇ ಹಲವು ಗಡುವನ್ನ ನೀಡಿ ವಿಸ್ತರಣೆ ಕೂಡ ಮಾಡಿದೆ. ಇದೀಗ 2024 ಫೆಬ್ರವರಿ 17 ಕೊನೆಯ ದಿನ ಎನ್ನಲಾಗಿದೆ. ಈ ಬಾರಿ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿ, ಮತ್ತಷ್ಟು ದಿನಗಳ ಕಾಲ ಅವಕಾಶ ನೀಡುವುದು ಡೌಟ್. ಹೀಗೆ ಈ ಬಾರಿ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಮುಂದಾಗಿದೆ. ಹೀಗಿದ್ದಾಗ ವಾಹನಗಳ ಮಾಲೀಕರು ಏನ್ ಮಾಡಬೇಕಿದೆ ಗೊತ್ತೆ?
ವಾಹನ ಮಾಲೀಕರೆ ಅಲರ್ಟ್ ಆಗಿ!
ಅಂದಹಾಗೆ ಇಲ್ಲೊಂದು ಪ್ರಮುಖ ವಿಚಾರ ಇದೆ ಅದೇನೆಂದರೆ, 2019ರ ಎಪ್ರಿಲ್ ತಿಂಗಳಿಗು ಮೊದಲು ರಿಜಿಸ್ಟ್ರೇಶನ್ ಆದ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ. ಯಾಕೆ ಅಂದ್ರೆ, 2019ರ ಎಪ್ರಿಲ್ ಬಳಿಕ ರಿಜಿಸ್ಟ್ರೇಶನ್ ಆದ ವಾಹನಗಳಿಗೆ ಹಾಕಲಾದ ನಂಬರ್ ಪ್ಲೇಟ್ HSRP ಆಗಿದೆ. ಹೀಗಾಗಿ ಯಾರ ವಾಹನ ಎಪ್ರಿಲ್ 2019ಕ್ಕೆ ಮೊದಲು ನೋಂದಣಿ ಆಗಿರುತ್ತದೊ ಅಂತಹ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಹಾಗಾದರೆ ಈ ನಂಬರ್ ಪ್ಲೇಟ್ ಪಡೆಯಲು ಏನು ಮಾಡಬೇಕಿದೆ? ಹಂತ ಹಂತವಾಗಿ ಈ ಕುರಿತು ಮಾಹಿತಿ ಇಲ್ಲಿದೆ ಮುಂದೆ ಓದಿ.
HSRP ಪಡೆಯುವುದು ಹೇಗೆ?
1) ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್ https://transport.karnataka.gov.in ಅಥವಾ www.siam.in ಮೂಲಕ ನೀವು HSRP Number Plate ಪಡೆಯಬಹುದು. ಇದಕ್ಕೆ ವೆಬ್‌ಸೈಟ್‌ನಲ್ಲಿ ಇರುವ 'Book HSRP' ಆಯ್ಕೆ ಮೇಲೆ ಮೊದಲಿಗೆ ಕ್ಲಿಕ್ ಮಾಡಿ.

2) 'Book HSRP' ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ವಾಹನ ತಯಾರಕರ ಕುರಿತು ಇರುವ ಆಯ್ಕೆ ಸೆಲೆಕ್ಟ್ ಮಾಡಿ & ಮೂಲ ವಾಹನದ ವಿವರ ಭರ್ತಿ ಮಾಡಿ. ಇದು ವಾಹನ ಮಾಲೀಕರಿಗೆ ಆರಂಭಿಕ ಹಂತವಾಗಿರುತ್ತದೆ. ಇಲ್ಲಿಂದ ಮಹತ್ವದ ಹಂತ ಆರಂಭ ಆಗಲಿದೆ.
3) ವಾಹನ ತಯಾರಕರ ಆಯ್ಕೆ ಸೆಲೆಕ್ಟ್ ಮಾಡಿ ಮತ್ತು ಮೂಲ ವಾಹನದ ವಿವರ ಭರ್ತಿ ಮಾಡಿ ನಂತರ, ಎಚ್‌ಎಸ್‌ಆರ್‌ಪಿ ಜೋಡಣೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳ ಆಯ್ಕೆ ಮಾಡಿ ಮತ್ತು ಆನ್‌ಲೈನ್‌ನಲ್ಲಿ ಎಚ್‌ಎಸ್‌ಆರ್‌ಪಿ ಶುಲ್ಕ ಪಾವತಿಗೆ ಮುಂದುವರಿಯಿರಿ.
4) ಎಚ್‌ಎಸ್‌ಆರ್‌ಪಿ ಶುಲ್ಕ ಪಾವತಿಸಲು ಹಣದ ರೂಪದಲ್ಲಿ ಪಾವತಿ ಮಾಡಲು ಆಗಲ್ಲ. ಆದ್ರೆ ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆ ನಂತರ ವಾಹನ ಮಾಲೀಕರ ಮೊಬೈಲ್ ನಂಬರ್‌ಗೆ ಒಟಿಪಿ ಅಂದ್ರೆ ಒನ್ ಟೈಂ ಪಾಸ್‌ವರ್ಡ್ ಬರುತ್ತದೆ. ನಂತರ ದಿನಾಂಕ ಮತ್ತು ಸಮಯ ಆಯ್ಕೆ ಮಾಡಬಹುದು.
5) ಪ್ರಕ್ರಿಯೆ ಮುಗಿಸಿದ ನಂತರ ವಾಹನಗಳ ಮಾಲೀಕರು ತಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಅಳವಡಿಸಲು ವಾಹನ ತಯಾರಕರು ಅಥವಾ ಡೀಲರ್ ಭೇಟಿ ಮಾಡಬೇಕು. ಇನ್ನು ಇದಕ್ಕಾಗಿ ನಿಗದಿ ಮಾಡಿರುವ ಶುಲ್ಕ, ದ್ವಿಚಕ್ರ ವಾಹನಕ್ಕೆ 400 ರೂಪಾಯಿ + 100 (ಕಲರ್ ಕೋಡ್ ಸ್ಟಿಕ್ಕರ್) ಆಗಿದ್ದರೆ. ಕಾರು ಸೇರಿದಂತೆ 4 ಚಕ್ರದ ವಾಹನಕ್ಕೆ 1,100 ರೂಪಾಯಿ (ಕಾರು ಇತರ ವಾಹನಗಳಿಗೆ ತಕ್ಕಂತೆ ಬದಲಾಗಲಿದೆ) + 100 (ಕಲರ್ ಕೋಡ್ ಸ್ಟಿಕ್ಕರ್) ಎಂದು ನಿಗದಿ ಮಾಡಲಾಗಿದೆ.
ಒಟ್ನಲ್ಲಿ ಗಡುವು ಮುಗಿಯುವ ಒಳಗಾಗಿ ಎಚ್‌ಎಸ್‌ಆರ್‌ಪಿಗೆ ಅರ್ಜಿ ಸಲ್ಲಿಸಿ. ಇಲ್ಲವಾದರೆ, ಭಾರಿ ದೊಡ್ಡ ಮೊತ್ತದ ದಂಡ ಬೀಳುವುದು ಪಕ್ಕಾ ಎಂಬ ಸೂಚನೆ ನೀಡಲಾಗಿದೆ. ಹೀಗಾಗಿ, ಅಲರ್ಟ್ ಆಗಿ ಕ್ರಮ ಕೈಗೊಂಡರೆ ಉತ್ತಮ. ಇಲ್ಲವಾದರೆ ಜೇಬಿಗೆ ಹೊರೆ ಬೀಳುವುದು ಗ್ಯಾರಂಟಿ.












Click it and Unblock the Notifications