HSRP:ಈ 3 ಕಾರಣಕ್ಕೆ ನಂಬರ್‌ ಪ್ಲೇಟ್ ಗಡುವು ವಿಸ್ತರಣೆ?

ಬೆಂಗಳೂರು, ಫೆಬ್ರವರಿ 12: ಕರ್ನಾಟಕದ ಸಾರಿಗೆ ಇಲಾಖೆ ಹಳೆಯ ವಾಹನಗಳಿಗೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ 17ರ ಗಡುವು ನೀಡಿದೆ. ಈ ಗಡುವು ಸಮೀಪಿಸುತ್ತಾ ಬಂದರೂ ಸಹ ಇನ್ನೂ ಕೋಟ್ಯಾಂತರ ವಾಹನಗಳಿಗೆ ನಂಬರ್ ಪ್ಲೇಟ್ ಆಳವಡಿಕೆ ಮಾಡುವುದು ಬಾಕಿ ಇದೆ.

ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಕೆ ಮಾಡುವ ಗಡುವು ವಿಸ್ತರಣೆಯಾಗಲಿದೆ ಎಂಬ ಸುಳಿವು ಸಿಕ್ಕಿದೆ. ಸದ್ಯದ ಮಾಹಿತಿ ಪ್ರಕಾರ ಇನ್ನೂ ಮೂರು ತಿಂಗಳ ಕಾಲ ಗಡುವು ವಿಸ್ತರಣೆ ಮಾಡಲಾಗುತ್ತದೆ. ಈ ಕುರಿತು ಸಾರಿಗೆ ಇಲಾಖೆ ಶೀಘ್ರವೇ ಸಭೆ ನಡೆಸಿ ಆದೇಶ ಹೊರಡಿಸಲಿದೆ.

HSRP Number Plate 3 Reasons Why Deadline Will Extend

ಭಾನುವಾರ ಮುಖ್ಯಮಂತ್ರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, "ಈ ಹಿಂದೆಯೂ ದಿನಾಂಕ ವಿಸ್ತರಣೆ ಮಾಡಲಾಗಿತ್ತು. ಈಗ ಪುನಃ ದಿನಾಂಕ ವಿಸ್ತರಣೆಗೆ ಒತ್ತಡ ಕೇಳಿ ಬಂದಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಈಗ ಸಾರಿಗೆ ಇಲಾಖೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಕೆ ಇರುವ ಗಡುವು ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ.

* ಕಾರಣ 01: High Security Registration Plate (HSRP) ಅಳವಡಿಕೆಗೆ ಕೊನೆಯ ದಿನ ಫೆಬ್ರವರಿ 17 ಎಂದು ಸಾರಿಗೆ ಇಲಾಖೆ ಹೇಳಿದೆ. ಇಲ್ಲವಾದಲ್ಲಿ ಸಂಚಾರಿ ಪೊಲೀಸರ ಜೊತೆ ಸೇರಿ ದಂಡ ವಿಧಿಸಲು ಚಿಂತನೆ ನಡೆಸಿದೆ. ಕೊನೆಯ ಕೆಲವು ದಿನ ಬಾಕಿ ಉಳಿದಿರುವಾಗ ಜನರು ಹೆಚ್ಚು ರಿಜಿಸ್ಟರ್ ಮಾಡಲು ಮುಂದಾಗುತ್ತಿದ್ದು, ಇದರಿಂದಾಗಿ ವೆಬ್‌ಸೈಟ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಇದರಿಂದ ವಿವರಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಫೆಬ್ರವರಿ 17ರ ಗಡುವಿನೊಳಗೆ ಎಲ್ಲಾ ವಾಹನಗಳು ನಂಬರ್ ಪ್ಲೇಟ್ ಆಳವಡಿಕೆ ಮಾಡುವುದು ಅಸಾಧ್ಯ. ಆದ್ದರಿಂದ ಗಡುವು ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ.

* ಕಾರಣ 02: 2019ರ ಏಪ್ರಿಲ್1 ಕ್ಕೂ ಮುನ್ನ ನೋಂದಣಿಯಾದ ಎಲ್ಲಾ ವಾಹನಗಳು ಹೆಚ್ಎಚ್‌ಆರ್‌ಪಿ ನಂಬರ್‌ ಪ್ಲೇಟ್ ಆಳವಡಿಕೆ ಮಾಡಿಕೊಳ್ಳಬೇಕ ಎಂದು ಸಾರಿಗೆ ಇಲಾಖೆ ಹೇಳಿದೆ. ಇದಕ್ಕಾಗಿ 2023ರ ನವೆಂಬರ್ 17ರ ತನಕ ಮೊದಲು ಗಡುವು ನೀಡಲಾಗಿತ್ತು. ಬಳಿಕ ಅದನ್ನು ಫೆಬ್ರವರಿ 17ರ ತನಕ ವಿಸ್ತರಣೆ ಮಾಡಲಾಯಿತು. ಆದರೆ ಇನ್ನೂ 1.88 ಕೋಟಿ ವಾಹನಗಳಿಗೆ ನಂಬರ್ ಪ್ಲೇಟ್ ಆಳವಡಿಕೆ ಮಾಡಬೇಕಿದೆ. ಇದುವರೆಗೂ 12 ಲಕ್ಷ ವಾಹನಗಳಿಗೆ ಮಾತ್ರ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಲಾಗಿದೆ. ಆದ್ದರಿಂದ ಇನ್ನೂ 5 ದಿನದಲ್ಲಿ 1.88 ಕೋಟಿ ವಾಹನಕ್ಕೆ ನಂಬರ್ ಪ್ಲೇಟ್ ಹಾಕುವುದು ಅಸಾಧ್ಯ. ಆದ್ದರಿಂದ ಸಾರಿಗೆ ಇಲಾಖೆ ಗಡುವು ವಿಸ್ತರಣೆ ಮಾಡಲೇಬೇಕಿದೆ.

* ಕಾರಣ 03: ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ ಇನ್ನೂ 1.88 ಕೋಟಿ ವಾಹನಗಳಿಗೆ ನಂಬರ್ ಪ್ಲೇಟ್ ಆಳವಡಿಕೆ ಮಾಡಬೇಕಿದೆ. ಇದರಲ್ಲಿ ಸರ್ಕಾರಿ ವಾಹನಗಳು ಸಹ ಸೇರಿವೆ. ಸಚಿವರ, ಶಾಸಕರ, ಅಧಿಕಾರಿಗಳ ಬಳಿ ಹಳೆಯ ವಾಹನಗಳಿವೆ. ಸರ್ಕಾರಿ ವಾಹನಗಳಿಗೆ ಇನ್ನೂ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಲ್ಲ. ಸರ್ಕಾರಿ ವಾಹನಕ್ಕೆ ಮಾಡದೇ ಜನರ ವಾಹನಕ್ಕೆ ದಂಡ ಹಾಕಿದರೆ ಜನರು ಆಕ್ರೋಶಗೊಳ್ಳುತ್ತಾರೆ. ಆದ್ದರಿಂದ ಸರ್ಕಾರ ಫೆಬ್ರವರಿ 17ರ ಗಡುವು ವಿಸ್ತರಣೆ ಮಾಡುವುದು ಬಹುತೇಕ ಖಚಿತವಾಗಿದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದ್ವಿಚಕ್ರ ವಾಹನಗಳಿಗೆ 390 ರಿಂದ 440 ರೂ.ಗಳು. 4 ಚಕ್ರದ ವಾಹನಗಳಿಗೆ 680 ರಿಂದ 690 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ ಎಂಬ ಮಾಹಿತಿ ಇದೆ. ಕಾನೂನಿನಲ್ಲಿ ಮೊದಲ ಸಲ 1000 ರೂ., 2ನೇ ಸಲ 2 ಸಾವಿರ ರೂ. ತನಕ ದಂಡ ವಿಧಿಸಲು ಸಹ ಅವಕಾಶವಿದೆ. ದಂಡ ಪ್ರಯೋಗಕ್ಕೆ ಸಾರಿಗೆ ಇಲಾಖೆ ಮುಂದಾದರೆ ಅದಕ್ಕೆ ಸಂಚಾರಿ ಪೊಲೀಸರ ನೆರವು ಪಡೆಯಲಿದ್ದಾರೆ.

2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು 90 ದಿನಗಳ ಒಳಗಾಗಿ ಹೆಚ್‌ಎಸ್‌ಆರ್‌ಪಿ ಫಲಕ ಹೊಂದಬೇಕು ಎಂದು ಕರ್ನಾಟಕ ಸರ್ಕಾರ 2023ರ ಆಗಸ್ಟ್ 18ರಂದು ಅಧಿಸೂಚನೆ ಹೊರಡಿಸಿತ್ತು. ನವೆಂಬರ್ ತನಕ ಗಡುವು ವಿಧಿಸಿತ್ತು, ಆದರೆ ಬಳಿಕ ಗಡುವನ್ನು ಫೆಬ್ರವರಿ 17ರ ತನಕ ವಿಸ್ತರಣೆ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+