HSRP: ಸಮೀಪಿಸುತ್ತಿದೆ ಫೆಬ್ರವರಿ 17ರ ಗಡುವು, 2 ಕೋಟಿ ವಾಹನಗಳಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿರುವುದು ಎಷ್ಟಕ್ಕೆ?

ಬೆಂಗಳೂರು, ಫೆಬ್ರವರಿ, 06: ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಫೆಬ್ರವರಿ 17ರ ಗಡುವು ಸಮೀಪಿಸುತ್ತಿದೆ. ಆದರೆ ಸುಮಾರು ಎರಡು ಕೋಟಿ ವಾಹನಗಳಲ್ಲಿ ಕೇವಲ ಶೇಕಡಾ 5ರಷ್ಟು ವಾಹನಗಳಿಗೆ ಈ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಿಕೊಂಡಿದ್ದರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಸಿದ್ದಾರೆ.

ಇದುವರೆಗೆ ಸಾರಿಗೆ ಇಲಾಖೆ ನೀಡಿರುವ ಎರಡನೇ ಗಡುವು ಇದಾಗಿದ್ದು, ಮತ್ತೊಮ್ಮೆ ವಿಸ್ತರಣೆಗೆ ಚಿಂತನೆ ನಡೆಸುವ ಸಾಧ್ಯೆತೆಯಿದೆ ಎನ್ನಲಾಗಿದೆ. ಆದರೂ ಗಡುವನ್ನು ಮತ್ತೆ ವಿಸ್ತರಿಸಬಹುದೇ ಎಂದು ಮರುಮೌಲ್ಯಮಾಪನ ಮಾಡಲು ಇಲಾಖೆಯು ಶೀಘ್ರದಲ್ಲೇ ಸಭೆಯನ್ನು ಕರೆಯಲಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

HSRP: How many vehicles have HSRP number plates?, know details

ಏಪ್ರಿಲ್ 1, 2019ರ ಮೊದಲು ನೋಂದಾಯಿಸಲಾದ ಅಂದಾಜು ಎರಡು ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ, ನವೆಂಬರ್ 17, 2023 ಗಡುವನ್ನು ನಿಗದಿಪಡಿಸಿ ಇಲಾಖೆಯು ಆಗಸ್ಟ್ 2023ರಲ್ಲಿ ಅಧಿಸೂಚನೆಯನ್ನು ಹೊರಡಿಸಿತು. ಬಳಿಕ ಕೆಲವೇ ಜನರು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಕೊಂಡಿದ್ದು, ಇಲಾಖೆಯು ಫೆಬ್ರವರಿ 17ರವರೆಗೆ ಈ ಗಡುವನ್ನು ವಿಸ್ತರಿಸಿತು.

ಹೆಚ್ಚಿನ ಜನರು ಈ ನಂಬರ್‌ ಪ್ಲೇಟ್‌ ಅಳವಡಿಸಲು ಪ್ರೋತ್ಸಾಹಿಸಲು ಗಡುವನ್ನು ವಿಸ್ತರಿಸುವುದು ಏಕೈಕ ಆಯ್ಕೆಯಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. "ಶೀಘ್ರದಲ್ಲೇ ಗಡುವು ವಿಸ್ತರಣೆಯಾಗಬಹುದು. ಎಚ್‌ಎಸ್‌ಆರ್‌ಪಿಯ ನಿಯಮ ಮತ್ತು ಪ್ರಯೋಜನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಇಲಾಖೆ ಬಯಸಿದೆ," ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

HSRP ಶಾಶ್ವತ ಗುರುತಿನ ಸಂಖ್ಯೆ ಮತ್ತು ಕ್ರೋಮಿಯಂ ಆಧಾರಿತ ಹೊಲೊಗ್ರಾಮ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಲಾಖೆಯ ಪ್ರಕಾರ, ಎಚ್‌ಎಸ್‌ಆರ್‌ಪಿಯ ವಿಶಿಷ್ಟ ಲಕ್ಷಣವೆಂದರೆ ಟ್ಯಾಂಪರಿಂಗ್‌ಗೆ ಪ್ರತಿರೋಧ. ಆಗಸ್ಟ್ 17ರಂದು ಹೊರಡಿಸಲಾದ ಅಧಿಸೂಚನೆಯು ಈ ನಿಯಮವನ್ನು ಅನುಸರಿಸಲು ವಿಫಲವಾದ ಮಾಲೀಕರು ₹1,000ದಿಂದ ₹2,000 ವರೆಗಿನ ದಂಡವನ್ನು ವಿಧಿಸಬೇಕಾಗುತ್ತದೆ ಎಂದು ತಿಳಿಸಿದೆ.

ಆದರೆ, ಈ ಅಧಿಸೂಚನೆಯನ್ನು ಉದ್ಯಮದ ಒಂದು ವಿಭಾಗ ವಿರೋಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಅಖಿಲ ಕರ್ನಾಟಕ ವಾಹನ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘವು ಎಚ್‌ಎಸ್‌ಆರ್‌ಪಿ ಕಡ್ಡಾಯ ನಿಯಮವನ್ನು ಸಕ್ರಿಯವಾಗಿ ವಿರೋಧಿಸುತ್ತಿದೆ. ಇನ್ನು ವಾಹನಗಳಿಗೆ ಹೆಚ್ ಎಸ್ ಆರ್ ಪಿ ಅಳವಡಿಸದೇ ಮೊದಲ ಬಾರಿ ಸಿಕ್ಕಿಬಿದ್ದರೆ 1,000 ರೂಪಾಯಿ ದಂಡ, 2ನೇ ಬಾರಿ ಸಿಕ್ಕಿ ಬಿದ್ದರೆ 2,000 ರೂಪಾಯಿ ದಂಡ ಹಾಕಲಾಗುತ್ತದೆ ಎನ್ನುವ ಮಾಹಿತಿಯೊಂದು ತಿಳಿದುಬಂದಿದೆ.

ಹಳೆಯ ವಾಹನಗಳಿಗೆ HSRP ಅಳವಡಿಕೆ ವಿಧಾನ

* https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್ ಮಾಡಿ.

* ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.

* ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.

* HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.

* HSRP ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ, ಆನ್‌ಲೈನ್‌ನಲ್ಲಿ ಪಾವತಿಸಿ.

* ನಂತರ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.

* ನಿಮ್ಮ ಅನುಕೂಲಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.

* ವಾಹನ ಮಾಲೀಕರ ಕಚೇರಿ ಆವರಣ ಅಥವಾ ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

* ನಿಮ್ಮ ವಾಹನದ ಯಾವುದೇ ತಯಾರಕ ಅಥವಾ ಡೀಲರ್ ಸಂಸ್ಥೆಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+