HSRP: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಹಾಕಿಸಲು ಕೊನೆ ದಿನ ಹತ್ತಿರ ಬಂದರೂ ಜನರಿಗಿಲ್ಲ ಆಸಕ್ತಿ!

ಬೆಂಗಳೂರು, ಮೇ. 05: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ಗಡುವು ಸಮೀಪಿಸುತ್ತಿದ್ದರೂ, 2 ಕೋಟಿ ವಾಹನಗಳಲ್ಲಿ ಇಲ್ಲಿಯವರೆಗೆ ಕೇವಲ 35.5 ಲಕ್ಷ ವಾಹನಗಳು ಮಾತ್ರ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿವೆ. ಇದು ಜನರಲ್ಲಿ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆ ಬಗ್ಗೆ ಜನರಿಗಿರುವ ನಿರಾಸಕ್ತಿಯನ್ನು ಎತ್ತಿ ತೋರಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಹೊರಡಿಸಲಾದ ಸರ್ಕಾರದ ಅಧಿಸೂಚನೆಯ ಪ್ರಕಾರ, ಏಪ್ರಿಲ್ 1, 2019 ರ ಮೊದಲು ಕರ್ನಾಟಕದಲ್ಲಿ ನೋಂದಾಯಿಸಲಾದ ಸರಿಸುಮಾರು ಎರಡು ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.

HSRP Deadline fast approaching only 35 5 lakh vehicles have gotten their HSRP plates

ಆರಂಭದಲ್ಲಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ನವೆಂಬರ್ 17, 2023 ಆಗಿತ್ತು, ವಾಹನ ಮಾಲೀಕರಿಂದ ಕಳಪೆ ಪ್ರತಿಕ್ರಿಯೆಯಿಂದಾಗಿ ಈ ವರ್ಷ ಫೆಬ್ರವರಿ 17 ರವರೆಗೆ ಗಡುವನ್ನು ವಿಸ್ತರಿಸಲಾಯಿತು. ಆಗಲು ವಾಹನ ಮಾಲೀಕರಿಂದ ಉತ್ತಮ ಪ್ರತಿಕ್ರಿಯೆ ಬರದ ಕಾರಣ ಈ ವರ್ಷದ ಫೆಬ್ರವರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಗಡುವಿನ ಮೇಲೆ ಮತ್ತೊಂದು ಮೂರು ತಿಂಗಳ ವಿಸ್ತರಣೆಯನ್ನು ಘೋಷಿಸಿ, ಮೇ 31 ಕ್ಕೆ ಹೊಸ ಗಡುವು ನೀಡಿದ್ದಾರೆ.

ಏಕೆಂದರೆ ವಾಹನ ಮಾಲೀಕರಿಗೆ ನೀಡಲಾದ ಗಡುವಿನಲ್ಲಿ ಸುಮಾರು 18 ಲಕ್ಷ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಮಾತ್ರ ಹಾಕಿಸಲಾಗಿತ್ತು. ಹೀಗಾಗಿ ವಾಹನ ಮಾಲೀಕರಿಗೆ ಮತ್ತೊಂದು ಅವಕಾಶ ನೀಡಲು ಅಧಿಕಾರಿಗಳಿಗೆ ವಿಸ್ತರಣೆ ಮಾಡುವಂತೆ ಸೂಚಿಸಲಾಯಿತು. ಆದರೆ, ಮೇ ವೇಳೆಗೆ, 2 ಕೋಟಿ ವಾಹನಗಳಲ್ಲಿ ಕೇವಲ 35.5 ಲಕ್ಷ ಜನರು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಂಡಿದ್ದಾರೆ.

ಮತ್ತೆ ವಿಸ್ತರಣೆಯಾಗುತ್ತಾ ಎಚ್‌ಎಸ್‌ಆರ್‌ಪಿ ಗಡುವು?

ಈ ತಿಂಗಳಲ್ಲಿಯೂ ಕೂಡ ಲಕ್ಷಾಂತರ ಮಂದಿ ನೊಂದಣಿ ಮಾಡಿಸಬೇಕಾದ ಕಾರಣ ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆಯಾಗಲಿದೆ ಎನ್ನಲಾಗುತ್ತಿದೆ. ಆದರೆ, ಸಾರಿಗೆ ಇಲಾಖೆ ಈ ಬಗ್ಗೆ ಇನ್ನು ಮಾಹಿತಿ ನೀಡಿದ್ದ. ವಿಸ್ತರಣೆಯ ಸಾಧ್ಯತೆಯನ್ನು ನಿರಾಕರಿಸುವುದಿಲ್ಲ. ಮುಂದಿನ ನಿರ್ಧಾರಗಳ ಬಗ್ಗೆ ಮೇ ತಿಂಗಳ ಕೊನೆಯ ವಾರದೊಳಗೆ ಸರ್ಕಾರದೊಂದಿಗೆ ಸಭೆ ನಡೆಸಲಾಗುವುದು ಎಂದು ಸಾರಿಗೆ ಹೆಚ್ಚುವರಿ ಆಯುಕ್ತ (ಜಾರಿ) ಸಿ ಮಲ್ಲಿಕಾರ್ಜುನ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

HSRP Deadline fast approaching only 35 5 lakh vehicles have gotten their HSRP plates

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸದ ಮಾಲೀಕರಿಗೆ ದಂಡ ವಿಧಿಸುವುದರ ಜೊತೆಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ. ಸರ್ಕಾರದ ನಿರ್ದೇಶನದ ಆಧಾರದ ಮೇಲೆ ಇದನ್ನು ಜಾರಿ ಮಾಡಲು ಸಾರಿಗೆ ಇಲಾಖೆಯು ವಿಶೇಷ ಡ್ರೈವ್‌ಗಳನ್ನು ಸಹ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ವಾಹನ ಮಾಲೀಕರು ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಮೇ 31ರೊಳಗೆ ನೋಂದಣಿ ಮಾಡದಿದ್ದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಖಚಿತ ಪಡಿಸಿದೆ. ಮೊದಲ ಬಾರಿಗೆ ಸಿಕ್ಕಿಬಿದ್ದರೆ 500 ರೂಪಾಯಿ ದಂಡ ವಿಧಿಸಲಾಗುತ್ತಿದ್ದು, ಎಚ್‌ಎಸ್‌ಆರ್‌ಪಿ ಇಲ್ಲದೆ ಮತ್ತೊಮ್ಮೆ ಸಿಕ್ಕಿಬಿದ್ದರೆ 1000 ರೂಪಾಯಿಗೆ ಏರಿಕೆಯಾಗಲಿದೆ ಎಂದು ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಮತ್ತು ನೋಂದಾಯಿಸಲು, https://transport.karnataka.gov.in/ ಅಥವಾ www.siam.in ಗೆ ಭೇಟಿ ನೀಡಿ ಮತ್ತು 'Book HSRP' ಆಯ್ಕೆ ಮಾಡಬೇಕು. ಜೋಡಣೆಗಾಗಿ ಸ್ಲಾಟ್ ಅನ್ನು ಬುಕ್ ಮಾಡಲು ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡಿ ನಿಮ್ಮ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+