ಸರ್ಕಾರಿ ಬಸ್‌ಗಳ ಪಾಸುಗಳನ್ನು ಪಡೆಯುವುದು ಹೇಗೆ?
ಬೆಂಗಳೂರು, ಅಕ್ಟೋಬರ್ 14 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈಗ ಸೇವಾಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ವ್ಯವಸ್ಥೆಯಡಿ ನಿರ್ವಹಿಸುತ್ತಿದೆ. ಬಸ್ ಪಾಸುಗಳನ್ನು ಪಡೆಯಲು ಪ್ರಯಾಣಿಕರು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕಿದೆ.
ನಾಲ್ಕು ರಾಜ್ಯ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪಾಸುಗಳನ್ನು ಪಡೆಯಲು ನೋಂದಣಿ ಮಾಡಿಸಬೇಕು.
ಸಾರಿಗೆ ನಿಗಮಗಳು ವಿವಿಧ ಮಾದರಿಯ ಬಸ್ ಪಾಸುಗಳನ್ನು ನೀಡುತ್ತವೆ. ಸೇವಾಸಿಂಧು ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಪಾಸುಗಳನ್ನು ಪಡೆಯುವಂತೆ ಸೂಚನೆಯನ್ನು ನೀಡಲಾಗಿದೆ.

ವಿದ್ಯಾರ್ಥಿ ಉಚಿತ ಅಥವಾ ರಿಯಾಯಿತಿ ಪಾಸು, ವಿಕಲಚೇತನರ ರಿಯಾಯಿತಿ ಪಾಸು, ಅಂಧರ ಉಚಿತ ಪಾಸು, ಸ್ವಾತಂತ್ಯ್ರ ಹೋರಾಟಗಾರರ ಪಾಸು, ಸ್ವಾತಂತ್ರ್ಯ ಹೋರಾಟಗಾರರ ಪತಿ/ ಪತ್ನಿಯರ ಉಚಿತ ಕೂಪನ್ಸ್ ಮತ್ತು ಅಪಘಾತ ಪರಿಹಾರ ನಿಧಿ ಈ ಸೇವೆಗಳನ್ನು ಪಡೆಯಲು ನೋಂದಣಿ ಕಡ್ಡಾಯ.
ಈಗಾಗಲೇ ಬಸ್ ಪಾಸುಗಳನ್ನು ಪಡೆದಿರುವವರು ನವೀಕರಿಸಿಕೊಳ್ಳಲು ಮತ್ತು ಹೊಸ ಪಾಸು ಪಡೆದುಕೊಳ್ಳಲು ಸೇವಾಸಿಂಧು ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸುವಾಗ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಅರ್ಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು.
ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ ಬಳಿಕ ಮೌಖಿಕವಾಗಿ ಪಾಸು ಪಡೆಯಲು ಬಂದಾಗ ಅಗತ್ಯ ದಾಖಲಾತಿ ಹಾಗೂ ಅದರ ಜೆರಾಕ್ಸ್ ಪ್ರತಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications