Smart Phone: ನಿಮ್ಮ 'ಮೊಬೈಲ್' ಅಸಲಿಯೇ?, ದುರಸ್ತಿ ಮಾಡಿದ್ದಾ? ಇಲ್ಲ ಕದ್ದಿದ್ದಾ? ಎಂಬುದನ್ನು ಇಲ್ಲಿ ತಿಳಿಯಿರಿ
ಬೆಂಗಳೂರು, ಸೆಪ್ಟಂಬರ್ 05: ಜಗತ್ತಿನ ಆಗು ಹೋಗುಗಳನ್ನು ಅಂಗೈಯಲ್ಲಿಯೇ ತಿಳಿದುಕೊಳ್ಳುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಅದರ ಭಾಗವಾಗಿ ಕ್ಷಣಾರ್ಧದಲ್ಲಿಯೇ ಅನೇಕ ಮಾಹಿತಿ ನೀಡುವ ಸ್ಮಾರ್ಟ್ ಫೋನ್ ನಿಂದ ಹಣದ ವಹೀವಾಟಿನ ಜೊತೆಗೆ ಇನ್ನಿತರ ಅಗತ್ಯೆಗಳನ್ನು ಆನ್‌ಲೈನ್ ಮೂಲಕ ಪೂರೈಸಿಕೊಳ್ಳುತ್ತಿದ್ದೇವೆ. ಅತ್ಯವಶ್ಯಕವಾದ ವಿವಿಧ ಮಾದರಿಗಳಲ್ಲಿ ಬೇಕಾದ ಸ್ಮಾರ್ಟ್‌ಫೋನ್ ಅನ್ನು ಸಾವಿರಾರು ರೂಪಾಯಿ ಕೊಟ್ಟು ಖರೀದಿಸುತ್ತೇವೆ. ಆದರೆ ನಮ್ಮ ಮೊಬೈಲ್‌ಗಳು ಅಸಲಿಯೇ? (Original), ನಕಲಿಯೇ? (Duplicate) ಇಲ್ಲ ಕಳ್ಳತನ ಮಾಡಿದ್ದಾ? (Theft) ಅಥವಾ ರಿಪೇರಿ (ದುರಸ್ತಿ) ಮಾಡಿದ್ದಾ? ಎಂಬುದನ್ನು ತಿಳಿಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಇಂದಿನ ದಿನಗಳಲ್ಲಿ ಬಹುತೇಕವಾಗಿ ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್‌ಗಳು ಇರುತ್ತವೆ. ಅದೇಷ್ಟೋ ಜನರಿಗೆ ರಿಫರ್ಬಿಷ್ಡ್ ಮೊಬೈಲ್ ಅನ್ನು ಮೋಸ ಮಾಡಿ ನೀಡಲಾಗಿರುತ್ತದೆ. ಕೆಲವೊಮ್ಮೆ ಆಮ್‌ಲೈನ್ ಖರೀದಿ ವೇಳೆ ಇಂತಹ ಅಚಾತುರ್ಯ ನಡೆದು ಬಿಟ್ಟಿರುತ್ತದೆ. ಗೊತ್ತಿಲ್ಲದೇ ನಾವು ಮೋಸ ಹೋಗಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿರುತ್ತೇವೆ.

ಇಂತಹ ಸಂದರ್ಭಗಳಲ್ಲಿ ನಿಮ್ಮ ಸಹಾಯಕ್ಕೆಂದೆ ಸರ್ಕಾರ ಕೆಲವು ಕ್ರಮ ಕೈಗೊಂಡಿದೆ. ಈ ಕೆಳಗಿನ ಪ್ರಕ್ರಿಯೆ ಮೂಲಕ ನೀವು ಪಡೆಯುವ ಮಾಹಿತಿ ಖಚಿತವಾಗಿರುತ್ತದೆ. ಈ ಕುರಿತು ವಿಡಿಯೋ ಒಂದನ್ನು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರೇ ಖುದ್ದು ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದ್ದಾರೆ.
ನೀವು ಉಪಯೋಗಿಸುತ್ತಿರುವ ಮೊಬೈಲ್ ಫೋನ್ ಅಸಲಿ ಅಥವಾ ನಕಲಿ ಫೊನ್ ಆಗಿದೆಯೇ, ಇಲ್ಲವೇ ಕಳವು ಮಾಡಿರುವ ಅಥವಾ ದುರಸ್ತಿ ಮಾಡಿರುವ ಫೋನ್ ಆಗಿದೆಯೇ ಎಂಬುದನ್ನು ತಿಳಿಯಲು ಈ ಕೆಳಗಿನ ವೀಡಿಯೋವನ್ನು ವೀಕ್ಷಿಸಿ… #SafetyFirst pic.twitter.com/JE4siSC8nc
— DGP KARNATAKA (@DgpKarnataka) September 4, 2023
ಈ 3 ಆಯ್ಕೆಗಳಿಂದ ನಿಮ್ಮ ಮೊಬೈಲ್ ಬಗ್ಗೆ ತಿಳಿದುಕೊಳ್ಳಿ
1. KYM (Knwo you mobile) ಅಪ್ಲಿಕೇಷನ್ ಅನ್ನು ನೀವು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಕೇಳುವ ಮೊಬೈಲ್ ಮಾಹಿತಿಗಳನ್ನು ನಮೂದಿಸಿ ಮೊಬೈಲ್ ಮಾನ್ಯಯೆಯನ್ನು ತಿಳಿಯಬಹುದಾಗಿದೆ.

2. KYM ಜೊತೆಗೆ ಮೊಬೈಲ್‌ನ ಹದಿನೈದು ಸಂಖ್ಯೆ IEMI ನಂಬರ್ ನಮೂದಿಸಿ ನಿಮ್ಮ ಮೊಬೈಲ್‌ನಿಂದ 14422 ಸಂಖ್ಯೆಗೆ ನೀವು ಸಂದೇಶ (SMS) ಮಾಡುವ ಮೂಲಕ ನೀವು ಮಾಹಿತಿ ಪಡೆದುಕೊಳ್ಳಬಹುದಾಗಿದೆ.
3. ಇಲ್ಲವೇ ಕರ್ನಾಟಕ ಸರ್ಕಾರದ ಅಧಿಕೃತ 'ಸಂಚಾರ ಸಾಥಿ' Ceir.gov.in ಜಾಲತಾಣಗೆ ಬೇಟಿ ನೀಡಬೇಕು. ಅಲ್ಲಿ ಪರದೆಯ ಮೇಲೆ ಕೇಳಲಾಗುವ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ನಂತರ ಬರುವ ಒಟಿಪಿಯನ್ನು ನಮೂದಿಸಿ ನಿಮ್ಮ ಮೊಬೈಲ್ ಅಸಲಿಯೋ, ನಕಲಿಯೋ, ಕಳ್ಳತನ ಮಾಡಲಾಗಿದ್ದು ಇಲ್ಲವೇ ದರುಸ್ತಿ ಮಾಡಿದ್ದಾ ಎಂಬುದು ತಿಳಿಯುತ್ತದೆ.
ಏಳು ಲಕ್ಷ ಮೊಬೈಲ್ ಬ್ಲಾಕ್
ಹೆಚ್ಚುವರಿಯಾಗಿ ಈ ವೆಬ್‌ಸೈಟ್‌ನಲ್ಲಿ ಮೊಬೈಲ್ ಕಳೆದುಕೊಂಡಿದ್ದಲ್ಲಿ ಅಗತ್ಯ ಮಾಹಿತಿ ನಮೂದಿಸಿ ಬ್ಲಾಕ್ ಮಾಡಬಹುದು, ಇಲ್ಲವೇ ಅನ್‌ಬ್ಲಾಕ್ ಮಾಡಬಹುದು. ಜೊತೆಗೆ ಇನ್ನಿತರ ಮೊಬೈಲ್ ಕುರಿತು ಸ್ಟೇಟರ್‌ಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಈ ವೆಬ್‌ಸೈಟ್‌ನಲ್ಲಿ ನೀಡಿದ ಮಾಹಿತಿ ಪ್ರಕಾರ, ಈ ವರೆಗೆ ಸುಮಾರು 7,93,274 ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದೆ. 3,11,837 ಮೊಬೈಲ್‌ಗಳನ್ನು ಟ್ರೇಸ್ ಮಾಡಿ ಪತ್ತೆ ಮಾಡಲಾಗಿದೆ.












Click it and Unblock the Notifications