ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ತುಂಬುವುದು ಹೇಗೆ?

ಬೆಂಗಳೂರು, ಡಿಸೆಂಬರ್ 14; 2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸಲು ಪೋಷಕರು ತಯಾರಿ ನಡೆಸುತ್ತಿದ್ದಾರೆ. ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ? ಎಂಬ ಕುರಿತು ಪೋಷಕರಿಗೆ ಮಾಹಿತಿ ನೀಡಲು ಪ್ರಕಟಣೆ ಹೊರಡಿಸಲಾಗಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಆನ್‌ಲೈನ್ ಮೂಲಕ 31/12/2023ರ ತನಕ ಅರ್ಜಿ ಸಲ್ಲಿಕೆ ಮಾಡಬಹುದು. ಪ್ರವೇಶ ಪತರ ಡೌನ್‌ಲೋಡ್‌ 1/2/2024ರಂದು ಮಾಡಿಕೊಳ್ಳಬೇಕು. ಪ್ರವೇಶ ಪರೀಕ್ಷೆ 18/2/2024ರಂದು ನಡೆಯಲಿದೆ.

How To Apply For Residential School Admission

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ) ಸುತ್ತೋಲೆಯೊಂದನ್ನು ಹೊರಡಿಸಿದೆ. ಈ ಸುತ್ತೋಲೆ 2024-25 ನೇ ಸಾಲಿಗೆ 6ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪ್ರಕ್ರಿಯೆ ಕುರಿತು ಎಂಬ ವಿಷಯ ಒಳಗೊಂಡಿದೆ.

ಸರ್ಕಾರದ ಆದೇಶದಂತೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ 2024-25 ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಅಧಿಸೂಚನೆ ಹೊರಡಿಸಿರುತ್ತಾರೆ ಎಂದು ಹೇಳಿದೆ.

ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮಾಹಿತಿ ಪುಸ್ತಕ-2024 ಅನ್ನು ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/kreis2024 ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

ಅರ್ಜಿ ಭರ್ತಿಗೆ ಸೂಚನೆಗಳು; ಅರ್ಜಿ ಭರ್ತಿ ಮಾಡುವಾಗ ಅಭ್ಯರ್ಥಿಯ ವಿವರಗಳಾದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ ಹಾಗೂ ಇನ್ನಿತರೆ ಮಾಹಿತಿಗಳನ್ನು SATS ಸಂಖ್ಯೆಯನ್ನು ನಮೂದಿಸಿ ಪಡೆಯತಕ್ಕದ್ದು. ಅಭ್ಯರ್ಥಿಯ SATS ಸಂಖ್ಯೆಯನ್ನು ನಮೂದಿಸಿದಾಗ ಮೇಲಿನ ಎಲ್ಲಾ ವಿವರಗಳನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಬಹುದು.ಯಾವುದಾದರೂ ಮಾಹಿತಿಯಲ್ಲಿ ದೋಷವಿದ್ದರೇ ಅಭ್ಯರ್ಥಿಯು ವ್ಯಾಸಂಗ ಮಾಡುತ್ತಿರುವ ಶಾಲೆಯ ಮುಖ್ಯೋಪಾದ್ಯಾಯರನ್ನು ಸಂಪರ್ಕಿಸಿ ಮಾಹಿತಿಯನ್ನು ಸರಿಪಡಿಸಿಕೊಂಡು ಬಂದು ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಪೋಷಕರಿಗೆ ತಿಳಿಸುವುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸಬೇಕಾಗಿರುವುದರಿಂದ ಅಭ್ಯರ್ಥಿಯ ಪೋಷಕರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.

ಅಭ್ಯರ್ಥಿಯು ಮೀಸಲಾತಿ ಪ್ರವರ್ಗಕ್ಕೆ ಸೇರಿದವರಾಗಿದ್ದಲ್ಲಿ, ಜಾತಿ ಪ್ರಮಾಣ ಪತ್ರದಲ್ಲಿರುವ ಜಾತಿಯನ್ನು ನಮೂದಿಸಬೇಕು ನಂತರ ಜಾತಿ/ ಆದಾಯ ಪ್ರಮಾಣ ಪತ್ರದಲ್ಲಿರುವ RDಸಂಖ್ಯೆ ನಮೂದಿಸಿದ ನಂತರ ವಿದ್ಯಾರ್ಥಿಯ ಹೆಸರು, ಜಾತಿ ಮತ್ತು ಆದಾಯವನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಬಹುದು.

ಈ ವಿವರನ್ನು ಸರಿಯಾಗಿದೆ ಎಂದು ಖಚಿತಪಡಿಸಿಕೊಂಡು ತಾಳೆ ಆಗಿದೆ ಎಂದು ಧೃಢಿಕರಿಸಬೇಕು. ಇಲ್ಲದಿದ್ದಲ್ಲಿ ಅಭ್ಯರ್ಥಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಲಾಗುವುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗದ ವಸತಿ ಶಾಲೆಗಳಲ್ಲಿ ಮಾತ್ರ ಪ್ರವೇಶಾತಿಗೆ ಅವಕಾಶವಿರುವುದರಿಂದ ಯಾವ ಜಿಲ್ಲೆಯಲ್ಲಿ ಸಾಮಾನ್ಯ ವರ್ಗದ ವಸತಿ ಶಾಲೆ ಇರುವುದಿಲ್ಲವೋ ಅಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಅರ್ಜಿ ಸ್ವೀಕರಿಸುವಂತಿಲ್ಲ.

ಅಭ್ಯರ್ಥಿಯು ವಿಶೇಷ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ದಾಖಲೆಗಳನ್ನು ಪರೀಶೀಲಿಸಿ ನಮೂದಿಸಬೇಕು. ಅಲೆಮಾರಿ-ಅರೆಅಲೆಮಾರಿ ಸೇರುವ ಜಾತಿ ಪಟ್ಟಿ ಲಗತ್ತಿಸಿದ್ದು ಅಭ್ಯರ್ಥಿಯ ಜಾತಿ ಈ ಪಟ್ಟಿಯಲ್ಲಿ ಇದ್ದರೆ ಅಲೆಮಾರಿ- ಅರೆಅಲೆಮಾರಿ ಎಂದು ನಮೂದಿಸಬೇಕು. ಜಾತಿ/ ಆದಾಯ ಪ್ರಮಾಣ ಪತ್ರ ಮತ್ತು ವಿಶೇಷ ವರ್ಗಕ್ಕೆ ಸಂಬಂಧಿಸಿದ ದಾಖಲೆಗಳ ಒಂದು ನಕಲು ಪ್ರತಿಯನ್ನು ಸ್ವೀಕರಿಸಬೇಕು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯು ಸೇರಬಯಸುವ ವಸತಿ ಶಾಲೆಗಳ ವಿವರಗಳನ್ನು ಅಂದರೆ ತಮ್ಮ ಜಿಲ್ಲೆಯಲ್ಲಿರುವ KREISನ ಎಲ್ಲಾ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ನಮೂದಿಸತಕ್ಕದ್ದು. ಆಯಾ ತಾಲ್ಲೂಕಿನ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.60 ರಷ್ಟು ಸೀಟುಗಳನ್ನು ಮೀಸಲಿಟ್ಟಿರುವುದರಿಂದ ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆಯ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ತಮ್ಮ ಸ್ವಂತ ತಾಲ್ಲೂಕಿನ ವಸತಿ ಶಾಲೆಗಳಿಗೆ ಪ್ರಥಮ ಆದ್ಯತೆ ನೀಡತಕ್ಕದ್ದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಎಲ್ಲಾ ವಿವರಗಳು ಸರಿಯಾಗಿ ನಮೂದಾಗಿರುವ ಬಗ್ಗೆ ಖಚಿತ ಪಡಿಸಿಕೊಂಡು ಪೋಷಕರಿಗೆ ಸ್ವಿಕೃತಿಯನ್ನು ನೀಡತಕ್ಕದ್ದು,ಯಾವುದೇ ಕಾರಣಕ್ಕೂ ಮಾಹಿತಿಯನ್ನು ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುವುದಿಲ್ಲ.

6ನೇ ತರಗತಿಗೆ ಅರ್ಜಿ ಆಹ್ವಾನಿಸಿರುವ ಕುರಿತು ಸ್ಥಳೀಯ ಪತ್ರಿಕೆಗಳಲ್ಲಿ ಉಚಿತವಾಗಿ ಪ್ರಕಟಣೆ ನೀಡಲು ಮತ್ತು ತಮ್ಮ ವ್ಯಾಪ್ತಿಯಲ್ಲಿರುವ ಬರುವ ಶಾಲೆಗಳಿಗೆ ಮಾಹಿತಿ ನೀಡಲು ಸೂಚಿಸಿದೆ.

ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜ ಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ/ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯ ಅಧಿಕಾರಿಗಳು ಪ್ರವೇಶ ಪ್ರಕ್ರಿಯೆಯನ್ನು ಸುಗಮವಾಗಿ ನಡೆಯುವಂತೆ ಹಾಗೂ ಯಾವುದೇ ಲೋಪದೋಷಗಳಾಗದಂತೆ ಕ್ರಮವಹಿಸುವುದು ಎಂದು ಸುತ್ತೋಲೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+