‘ಶಕ್ತಿ’ ಯೋಜನೆಯಡಿ ಉಚಿತವಾಗಿ 3ನೇ ದಿನ ಪ್ರಯಾಣಿಸಿದ ಮಹಿಳೆಯರೆಷ್ಟು?

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕುರಿತು ಬಿಜೆಪಿ ತರಾಟೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲೇ ಹೊಸ ಸುದ್ದಿ ಹೊರಬಿದ್ದಿದೆ. 'ಶಕ್ತಿ' ಯೋಜನೆ ಜಾರಿಯಾದ ಬಳಿಕ, 2ನೇ ಮತ್ತು 3ನೇ ದಿನ ಎಷ್ಟು ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ರು ಗೊತ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.

ಕಾಂಗ್ರೆಸ್ & ಬಿಜೆಪಿ ನಡುವೆ ಗ್ಯಾರಂಟಿ ವಾರ್ ದಿನದಿಂದ ದಿನಕ್ಕೆ ಭೀಕರವಾಗುತ್ತಿದೆ. ಆದರೆ ಇದೇ ಸಂದರ್ಭವನ್ನ ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಪ್ರಚಾರಕ್ಕೆ ಹಾಗೂ ಅಸ್ತ್ರವಾಗಿ ಬಳಸಿ, ಬಿಜೆಪಿ ವಿರುದ್ಧ ತಿರುಗೇಟು ನೀಡುತ್ತಿದೆ. ಈಗಲೂ ಅಷ್ಟೇ ಬಿಜೆಪಿ ಬಸ್ ಗ್ಯಾರಂಟಿ ಕುರಿತು ಮಾಡಿದ್ದ ಆರೋಪಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದೆ. ಸರ್ಕಾರಿ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ರಾಜ್ಯ ಸರ್ಕಾರದ ಯೋಜನೆಯನ್ನು ಎಷ್ಟು ಮಹಿಳೆಯರು ಬಳಸಿಕೊಂಡಿದ್ದಾರೆ ಅನ್ನೋ ಬಗ್ಗೆ ಮಾಹಿತಿ ತಿಳಿಸಿದೆ. ಇನ್ನು ರಾಜ್ಯದಲ್ಲಿ 2 & 3ನೇ ದಿನ ಎಷ್ಟು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ರು ಗೊತ್ತಾ? ಮುಂದೆ ಓದಿ.

free bus scheme in Karnataka

ಉಚಿತ ಪ್ರಯಾಣ, ಮಹಿಳೆಯರು ಖುಷ್!

ಇದೇ ಭಾನುವಾರದಿಂದ ರಾಜ್ಯದಲ್ಲಿ ಜಾರಿಗೆ ಬಂದ ಶಕ್ತಿ ಯೋಜನೆ ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಯಲ್ಲಿದ್ದು, ಎರಡನೇ ದಿನ 41,34,726 ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಹಾಗೇ ಪ್ರಯಾಣದ ಮೌಲ್ಯ ರೂಪಾಯಿ 8,83,53,434 ಕೋಟಿ ಎನ್ನಲಾಗಿದೆ. 3ನೇ ದಿನ ಕೂಡ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣ ಮಾಡಿದ ರಾಜ್ಯದ ಮಹಿಳೆಯರ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಮೂಲಕ ರಾಜ್ಯ ಸರ್ಕಾರದ ಯೋಜನೆಗೆ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ.

3ನೇ ದಿನ 51 ಲಕ್ಷ ಮಹಿಳೆಯರು!

ಹೌದು, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದು 3 ದಿನ ಕಳೆದಿದೆ. ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ ಕಳೆದ 3 ದಿನದಲ್ಲಿ ಭಾರಿ ಪ್ರಮಾಣದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಅದ್ರಲ್ಲೂ 3ನೇ ದಿನ 51 ಲಕ್ಷ ಮಹಿಳೆಯರು ಕರ್ನಾಟಕ ಸರ್ಕಾರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರಂತೆ. ಈ ಮೂಲಕ 10 ಕೋಟಿ 82 ಲಕ್ಷ ವೆಚ್ಚ 3ನೇ ದಿನಕ್ಕೆ ತಗುಲಿದೆ. ದಿನದಿಂದ ದಿನಕ್ಕೆ ಸರ್ಕಾರಿ ಸಾರಿಗೆ ಬಳಸುವ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದು ಗಮನಾರ್ಹ ಸಂಗತಿ. ಈ ಮೂಲಕ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಪೈಕಿ, ಉಚಿತ ಬಸ್ ಯೋಜನೆ ಸಕ್ಸಸ್ ಆಗುತ್ತಿದೆ ಎಂದು ಖುಷಿ ಪಟ್ಟಿದೆ.

free bus scheme in Karnataka

ಟ್ವೀಟ್ ಮಾಡಿ ಕಾಂಗ್ರೆಸ್ ಸಂತಸ

ಹಾಗೇ ಮಹಿಳೆಯರ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ, ಮಹಿಳಾ ಪ್ರಯಾಣಕರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿ ಖುಷಿಪಟ್ಟಿದೆ. 'ಶಕ್ತಿ ಯೋಜನೆ ಜಾರಿಯಾದ ಎರಡನೇ ದಿನ 41 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಮಹಿಳೆಯರ ಸ್ವಾವಲಂಬನೆಗೆ, ಸ್ವಾಭಿಮಾನದ ಬದುಕಿಗೆ ಈ ಯೋಜನೆ ಕ್ರಾಂತಿಕಾರಕ ಬೆಂಬಲ ನೀಡಲಿದೆ. ಕಾಂಗ್ರೆಸ್ ನ ಚಿಂತನೆ, ಯೋಜನೆಗಳು ಸದಾ ಜನಪರವಾಗಿರುತ್ತವೆ #ಜನಪರಕಾಂಗ್ರೆಸ್' ಎಂದು ಟ್ವೀಟ್ ಮಾಡಿದೆ ರಾಜ್ಯ ಕಾಂಗ್ರೆಸ್ ಘಟಕ. ಹಾಗೇ ಕಾಂಗ್ರೆಸ್ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದೆ.

ಹೀಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಗ್ಯಾರಂಟಿ ವಾರ್ ನಡೆಯುತ್ತಿದೆ. ಅತ್ತ ಬಿಜೆಪಿ, ಬಿಟ್ಟಿ ಯೋಜನೆ ಮೂಲಕ ರಾಜ್ಯವನ್ನ ಕಾಂಗ್ರೆಸ್ ದಿವಾಳಿ ಮಾಡುತ್ತಿದೆ ಎಂದು ಆರೋಪಿಸುತ್ತಿದೆ. ಆದರೆ ಕಾಂಗ್ರೆಸ್ ತನ್ನ ಉಚಿತ ಯೋಜನೆಗಳ ಮೂಲಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸುತ್ತಿದೆ. ಹೀಗೆ ಇಬ್ಬರ ನಡುವೆ ಗ್ಯಾರಂಟಿ ವಾರ್ ನಡೆಯುವಾಗ ರಾಜ್ಯದ ಮಹಿಳೆಯರು ಮಾತ್ರ ಫ್ರೀ ಬಸ್ ವ್ಯವಸ್ಥೆ ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+