Vande Bharat Express: ಉತ್ತರ ಕರ್ನಾಟಕಕ್ಕೆ ಸಿಕ್ಕ ವಂದೇ ಭಾರತ್ ರೈಲುಗಳೆಷ್ಟು? ಹೊಸ ರೈಲು ಸಂಚಾರ, ವೇಳಾಪಟ್ಟಿ ಅಪ್ಡೇಟ್

ಬೆಂಗಳೂರು, ಮೇ 14: ರೈಲು ಸಾರಿಗೆಯಲ್ಲಿ ಸಾಕಷ್ಟು ಖ್ಯಾತಿ ಪಡೆದ, ಪ್ರಯಾಣಿಕರಿಗೆ ಅರಾಮದಾಯಕ ಅನುಭವ ನೀಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Trains) ಕರ್ನಾಟಕದಲ್ಲಿ 11 ಸಂಚರಿಸುತ್ತಿವೆ. ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವರು ಉತ್ತರ ಕರ್ನಾಟಕಕ್ಕೆ ಮತ್ತೊಂದು ಹೊಸ ರೈಲು ಅನುಮೋದನೆ ನೀಡಿದ ಬಳಿಕ, ಇದೀಗ ರಾಜ್ಯದಲ್ಲಿ ಸಂಚರಿಸುವ ವಂದೇ ಭಾರತ್ ರೈಲುಗಳ ಸಂಖ್ಯೆ 12ಕ್ಕೆ ಏರಿಕೆ ಆಗಿದೆ. ಹಾಗಾದರೆ ರಾಜ್ಯದ ಉತ್ತರ-ದಕ್ಷಿಣದ ಕೊಂಡಿಯಾಗಿರುವ ವಂದೇ ಭಾರತ್ ಹೊಸ ರೈಲು ಸಂಚಾರ ಆರಂಭ ಯಾವಾಗ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಮೇ ಆರಂಭದಲ್ಲಿ ಕೇಂದ್ರ ರೈಲ್ವೆ ಇಲಾಖೆಯು ಬಹುನಿರೀಕ್ಷೆ ಬೆಳಗಾವಿ-ಬೆಂಗಳೂರಿಗೆ ಹೊಸ ವಂದೇ ಭಾರತ್ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ. ಇದೇ ವಿಚಾರವಾಗಿ ಹಲವು ಬಾರಿ ಮನವಿ ಮಾಡಿದ್ದ ಸಂಸದ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರ ಬರೆದು ದೃಢಪಡಿಸಿದ್ದಾರೆ.

How Many Vande Bharat Express Train Run for North Karnataka BGM-SBC Vande Bharat Schedule

ಕಲ್ಯಾಣ ಕರ್ನಾಟಕ ಒಳಗೊಂಡಂತೆ ಒಟ್ಟು ಉತ್ತರ ಕರ್ನಾಟಕಕ್ಕೆ 04 ವಂದೇ ಭಾರತ್ ರೈಲುಗಳು ಸಿಕ್ಕಂತಾಗಿವೆ. ಈ ಮೊದಲು ಮೂರು ಇದ್ದು, ಆ ಪಟ್ಟಿಗೆ ಹೊಸ ಬೆಳಗಾವಿ-ಬೆಂಗಳೂರು ರೈಲು ಸೇರಿದೆ. ಬೆಂಗಳೂರು-ಧಾರವಾಡ-ಬೆಂಗಳೂರು ರೈಲನ್ನೇ ಬೆಳಗಾವಿ ವರೆಗೆ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಒಪ್ಪಿಗೆ ಕೊಡುವುದರ ಜೊತೆಗೆ ವಿರೋಧವು ಕೇಳಿ ಬಂತು.

ಅದರ ಬೆನ್ನಲ್ಲ ಬೆಂಗಳೂರಿ-ಬೆಳಗಾವಿಗೆ ಹೊಸ ರೈಲು ಘೋಷಣೆ ಆಗಿದೆ. ಇದರಿಂದ ಹುಬ್ಬಳ್ಳಿ, ಹಾವೇರಿ, ದಾವಣೆಗೆರೆ, ಅರಸಿಕರೆ ಹಾಗೂ ತುಮಕೂರು ಮಾರ್ಗದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚರಿಸುವಂತಾಗಿದೆ. ಇದರಿಂದ ಆಯಾ ಭಾಗ ಅಭಿವೃದ್ಧಿ ಸಹಾಯವಾಗಲಿದೆ. ಸರಿಯಾದ ಸಮಯಕ್ಕೆ ಜನರು ಬೆಂಗಳೂರು ಸೇರಲು ಸಹಾಯವಾಗುತ್ತದೆ.

How Many Vande Bharat Express Train Run for North Karnataka BGM-SBC Vande Bharat Schedule

ಹೊಸ ರೈಲಿನ ವೇಳಾಪಟ್ಟಿ, ಸಂಚಾರ ಶುರು ಯಾವಾಗ?

ಬೆಳಗ್ಗೆ ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುತ್ತದೆ. ಅಲ್ಲಿಂದ ಬೆಂಗಳೂರಿನಿಂದ ಮರಳಿ ಮಧ್ಯಾಹ್ನ ಬೆಳಗಾವಿಗೆ ಪ್ರಯಾಣ ಬೆಳೆಸುತ್ತದೆ. ಈಗಾಗಲೇ ಇರುವ ರೈಲು ವಾರದಲ್ಲಿ ಆರು ದಿನ ಸಂಚರಿಸುತ್ತಿದೆ. ಈ ಹೊಸದಾಗಿ ಘೋಷಿತ ಈ ರೈಲು ಎಷ್ಟು ಭಾರಿ ಸಂಚರಿಸುತ್ತದೆ. ಪ್ರಯಾಣದ ದರ, ಸಮಯ ಮಾಹಿತಿ ಶೀಘ್ರವೇ ಅಂತಿಮವಾಗಲಿದೆ. ಹಾಲಿ ರೈಲು ಸಂಚಾರಕ್ಕೆ ತೊಂದರೆ ಆಗದಂತೆ ವೇಳಾಪಟ್ಟಿ ಸಿದ್ಧಪಡಿಸಲಿದೆ. ಇದರೊಂದಿಗೆ ಯಾವಾಗ ಈ ರೈಲು ತನ್ನ ಮೊದಲು ಸಂಚಾರ ಆರಂಭಿಸುತ್ತದೆ ಎಂದು ತಿಳಿಯಬೇಕಿದೆ. ಕಿತ್ತೂರು ಕರ್ನಾಟಕ, ಉತ್ತರ ಕರ್ನಾಟಕದ ಪ್ರಯಾಣಿಕರು ಇದರಲ್ಲಿ ಓಡಾಡಲು ಉತ್ಸುಕರಾಗಿದ್ದಾರೆ.

ಉತ್ತರ ಕರ್ನಾಟಕದ 04 'ವಿಬಿ' ರೈಲುಗಳು

* ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು (20661/62-ವಾರಕ್ಕೆ 06 ದಿನ)

* ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲು (20669/70- ವಾರಕ್ಕೆ 03 ದಿನ

* ಕಲಬುರಗಿ-ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು (ಸಂಖ್ಯೆ 22231 - ವಾರಕ್ಕೆ 06 ದಿನ

* ಹೊಸ ರೈಲು ಘೋಷಣೆ ಬೆಳಗಾವಿ-ಬೆಂಗಳೂರು-ಬೆಳಗಾವಿ ವಂದೇ ಭಾರತ್‌ ರೈಲು. ಇದರ ವೇಳಾಪಟ್ಟಿ, ಸಂಖ್ಯೆ, ಸಂಚಾರ ಗೊತ್ತಾಗಬೇಕಿದೆ. ಇದೇ ತಿಂಗಳಾಂತ್ಯಕ್ಕೆ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+