Dengue: ಯಾವ ಜಿಲ್ಲೆಯಲ್ಲಿ ಎಷ್ಟಿದೆ ಡೆಂಗಿ ಪ್ರಕರಣ? ಇಲ್ಲಿದೆ ವರದಿ
ರಾಜ್ಯದಲ್ಲಿ ಡೆಂಗಿ ಮಹಾಮಾರಿಯಂತೆ ಹಬ್ಬುತ್ತಿದೆ. ದಿನೇ ದಿನೇ ಈ ರೋಗ ಎಲ್ಲ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಸದ್ಯ ರಾಜ್ಯದಲ್ಲಿ ಡೆಂಗಿಯ 7547 ಪ್ರಕರಣಗಳು ಸಕ್ರಿಯಾವಗಿವೆ. ಜನರಲ್ಲಿ ಈ ರೋಗದ ಬಗ್ಗೆ ಭಯ ಹೆಚ್ಚಿದ್ದು ಸರ್ಕಾರ ಸಹ ಮುಂಜಾಗೃತಾ ಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದೆ.
ಮಂಗಳವಾರ ಡೆಂಗಿ ಪರೀಕ್ಷೆಗೆ ಒಟ್ಟು 948 ಜನರು ಒಳಪಟ್ಟಿದ್ದು, 185 ಜನರಲ್ಲಿ ಡೆಂಗಿ ಕಾಣಿಸಿಕೊಂಡಿದೆ. ಇನ್ನು ಸಕ್ರಿಯ ರೋಗ ಲಕ್ಷಣಗಳನ್ನು ಹೊಂದಿದ್ದು ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 62 ಆಗಿದೆ. ಒಟ್ಟಾರೆ ರಾಜ್ಯದಲ್ಲಿ ಈ ವರೆಗೆ 56660 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 7547 ಜನರಲ್ಲಿ ಈ ರೋಗವು ಕಾಣಿಸಿಕೊಂಡಿದೆ. ಅಲ್ಲದೆ ಆಸ್ಪತ್ರೆಯಲ್ಲಿ 346 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾವ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ?
ಬೆಂಗಳೂರಿನಲ್ಲಿ ಈ ರೋಗದ ಲಕ್ಷಣಗಳಿರುವ ರೋಗಿಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 91 ಪ್ರಕರಣಗಳು ಮಂಗಳವಾರ ಪತ್ತೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳ ಸಂಖ್ಯೆ 22ಕ್ಕೆ ಏರಿದೆ. ಇನ್ನು ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2174 ಡೆಂಗಿ ಸಕ್ರಿಯ ಪ್ರಕರಣಗಳು ಇದ್ದು, 146 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಹೊರತು ಪಡಿಸಿದರೆ ಈ ರೋಗವು ಹೆಚ್ಚಾಗಿ ಮಂಗಳವಾರ ಮಂಡ್ಯದಲ್ಲಿ ಕಾಣಿಸಿಕೊಂಡಿದ್ದು, 15 ಜನರಲ್ಲಿ ಡೆಂಗಿ ಪತ್ತೆಯಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು 267 ಸಕ್ರಿಯ ಕೇಸ್‌ಗಳು ಇದ್ದು, 22 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡದಲ್ಲೂ ಒಟ್ಟು 12 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 319ಕ್ಕೆ ಏರಿಕೆ ಆಗಿದೆ. 33 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈ 9ರಂದು ಸಾವು ನೋವಿನ ವರದಿಯಾಗಿಲ್ಲ.
ಉಳಿದಂತೆ ರಾಮನಗರದಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 1, ಚಿತ್ರದುರ್ಗದಲ್ಲಿ 4, ಯಾದಗಿರಿಯಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ.











Click it and Unblock the Notifications