Lok Sabha Election 2024: ಮೇ 7 ರಂದು 3ನೇ ಹಂತದ ಮತದಾನ, ಕರ್ನಾಟಕದ ಯಾವ ಕ್ಷೇತ್ರಗಳಿಗೆ ವೋಟಿಂಗ್? ಇಲ್ಲಿದೆ ವಿವರ

ಬೆಂಗಳೂರು, ಮೇ 06: ದೇಶಾದ್ಯಂತ ಲೋಕಸಭೆ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮೊದಲ ಹಂತದ ವೋಟಿಂಗ್ ಏಪ್ರಿಲ್ 19ರಂದು ನಡೆದಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆದರೇ, ಮೂರನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ.

ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಒಟ್ಟು 13 ರಾಜ್ಯಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಏಪ್ರಿಲ್ 26ರಂದು ಕರ್ನಾಟಕದ ದಕ್ಷಿಣದ ಜಿಲ್ಲೆಗಳ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗಿತ್ತು. ಇದೀಗ ಮೂರನೇ ಹಂತದಲ್ಲಿ 11 ರಾಜ್ಯಗಳ 92 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಒಟ್ಟು 1300 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

How Many Constituencies Were There In Election Phase 3 Polls Voting In Karnataka On 7 May

ಮೂರನೇ ಹಂತದಲ್ಲಿ ಗುಜರಾತ್​​ನ 25, ಕರ್ನಾಟಕದ 14, ಮಹಾರಾಷ್ಟ್ರದ 11, ಮಧ್ಯಪ್ರದೇಶದ 8, ಛತ್ತೀಸ್‌ಗಢದ 7, ಬಿಹಾರದ 5, ಅಸ್ಸಾಂನ 4, ಉತ್ತರ ಪ್ರದೇಶದ 10, ಪಶ್ಚಿಮ ಬಂಗಾಳದ 4, ಗೋವಾದ 2, ದಾದರ್-ನಗರ ಹವೇಲಿಯ 2 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಈಗಾಗಲೇ ಕರ್ನಾಟಕದ 28 ಕ್ಷೇತ್ರಗಳ ಫೈಕಿ 14 ಕ್ಷೇತ್ರಗಳ ಏಪ್ರಿಲ್‌ 26 ರಂದು ಮತದಾನವಾಗಿದ್ದು, ಮೇ 7 ರಂದು ಮೂರನೇ ಹಂತದ ಮತದಾನಕ್ಕೆ ಚುನಾವಣಾ ಆಯೋಗವು ಸಕಲ ಸಿದ್ದತೆಯನ್ನ ಮಾಡಿಕೊಂಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣದ ಜಿಲ್ಲೆಗಳ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದಿದ್ದು, ಉಳಿದ ಆ 14 ಕ್ಷೇತ್ರಗಳ ಯಾವುವು, ಮೇ 7 ರಂದು 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮೇ 7ರಂದು ಯಾವ ಯಾವ ಜಿಲ್ಲೆಗಳಲ್ಲಿ ಚುನಾವಣೆ!

* ಚಿಕ್ಕೋಡಿ

* ಬೆಳಗಾವಿ

* ಬಾಗಲಕೋಟೆ

* ಬಿಜಾಪುರ (ಎಸ್‌ಸಿ)

* ಗುಲ್ಬರ್ಗಾ (ಎಸ್‌ಸಿ)

* ರಾಯಚೂರು (ಎಸ್‌ಟಿ)

* ಬೀದರ್

* ಕೊಪ್ಪಳ

* ಬಳ್ಳಾರಿ (ಎಸ್‌ಟಿ)

* ಹಾವೇರಿ

* ಧಾರವಾಡ

* ಉತ್ತರ ಕನ್ನಡ

* ದಾವಣಗೆರೆ

* ಶಿವಮೊಗ್ಗ

ಏಪ್ರಿಲ್‌ 26 ರಂದು ಯಾವ ಯಾವ ಜಿಲ್ಲೆಗಳಲ್ಲಿ ಚುನಾವಣೆ ನಡೆದಿತ್ತು.

* ಬೆಂಗಳೂರು ಕೇಂದ್ರ

* ಬೆಂಗಳೂರು ಉತ್ತರ

* ಬೆಂಗಳೂರು ಗ್ರಾಮಾಂತರ

* ಬೆಂಗಳೂರು ದಕ್ಷಿಣ

* ಚಾಮರಾಜನಗರ

* ಚಿಕ್ಕಬಳ್ಳಾಪುರ

* ಚಿತ್ರದುರ್ಗ

* ದಕ್ಷಿಣ ಕನ್ನಡ

* ಹಾಸನ

* ಕೋಲಾರ

* ಮಂಡ್ಯ

* ಮೈಸೂರು

* ತುಮಕೂರು

* ಉಡುಪಿ ಚಿಕ್ಕಮಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+