ಬೆಂಗಳೂರಿಗರೇ ಗಮನಿಸಿ: ಕಾವೇರಿ ನೀರಿಗಾಗಿ ಹೋರಾಟ, ಸೆ.26ಕ್ಕೆ ಎಲ್ಲಾ ಹೋಟೆಲ್‌ಗಳು ಬಂದ್
ಬೆಂಗಳೂರು, ಸೆಪ್ಟೆಂಬರ್ 24: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ್ 26ರಂದು ಕಾವೇರಿ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಬೆಂಗಳೂರು ಬಂದ್‌ಗೆ ಇದೀಗ ನಗರದ ಹೋಟೆಲ್ ಮಾಲೀಕರ ಸಂಘ ಬೆಂಬಲ ನೀಡಿದ್ದು, ಸೆಪ್ಟೆಂಬರ್ 26ರಂದು ನಗರದಾದ್ಯಂತ ಹೋಟೆಲ್‌ಗಳು ಬಂದ್ ಆಗಲಿವೆ.
ಬಂದ್‌ಗೆ ಖಾಸಗಿ ಸಾರಿಗೆ ಒಕ್ಕೂಟ ಸೇರಿದಂತೆ ಸುಮಾರು 32 ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಬೆಂಬಲ ಘೋಷಿಸಿವೆ. ಆದ್ದರಿಂದ ಸೆಪ್ಟೆಂಬರ್ 26ರ ಬೆಳಿಗ್ಗೆಯಿಂದಲೇ ಆಟೊ, ಟ್ಯಾಕ್ಸಿ, ಖಾಸಗಿ ಬಸ್‌ಗಳು ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿಯುತ್ತಿಲ್ಲ. ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡು, ರ್ಯಾಲಿ ನಡೆಸುವುದಾಗಿ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.

ಬೆಂಗಳೂರು ಬಂದ್‌ಗೆ ರೈತ ಸಂಘಟನೆಗಳ ಒಕ್ಕೂಟ, ಪ್ರತಿಪಕ್ಷ ಬಿಜೆಪಿ, ಆಮ್ ಆದ್ಮಿ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ನವನಿರ್ಮಾಣ ಸೇನೆ ಸೇರಿದಂತೆ 150ಕ್ಕೂ ಹೆಚ್ಚು ಸಂಘಗಳು ಬೆಂಬಲ ಘೋಷಿಸಿವೆ.
ಬೆಂಗಳೂರು ಬಂದ್‌ಗೆ ಬೆಂಬಲ ಸೂಚಿಸಿದ ಸಂಘಟನೆಗಳ ವಿವರ ಇಲ್ಲಿದೆ.
1. ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ
2. ಕರ್ನಾಟಕ ಚಾಲಕರ ವೇದಿಕೆ
3. ಕರ್ನಾಟಕ ಕನ್ನಡಿಗರ ವೇದಿಕೆ
4. ಕರ್ನಾಟಕ ಯುವ ರಕ್ಷಣಾ ವೇದಿಕೆ
5. ಸುವರ್ಣ ಕರ್ನಾಟಕ ಹಿತಾರಕ್ಷಣ ವೇದಿಕೆ
6. ಕಾವೇರಿ ಕನ್ನಡಿಗರ ವೇದಿಕೆ
7. ಅಖಿಲ ಭಾರತ ಕಾರ್ಮಿಕರ ಹಿತರಕ್ಷಣಾ ವೇದಿಕೆ
8. ಜೈ ಭಾರತ ರಕ್ಷಣಾ ವೇದಿಕೆ
9. ಕಾರ್ಮಿಕರ ಪಡೆ
10. ಕರವೇ ಕನ್ನಡಿಗರ ಸಾರಥ್ಯ
11. ಕರವೇ ಕನ್ನಡ ಸೇನೆ
12. ನಮ್ಮ ನಾಡ ರಕ್ಷಣಾ ವೇದಿಕೆ
13. ಕರ್ನಾಟಕ ಸಿಂಹ ಘರ್ಜನೆ ವೇದಿಕೆ
14. ಕರುನಾಡ ಕಾವಲು ಪಡೆ
15. ಜೈ ಕರ್ನಾಟಕ
16. ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ
17. ಹೊಯ್ಸಳ ಸೇನೆ
18. ಕರವೇ ಗಜಸೇನೆ
19. ಜೈ ಕರುನಾಡ ಯುವಸೇನೆ
20. ಕರುನಾಡ ಯುವಪಡೆ
21. ಕೆಂಪೇಗೌಡ ಸೇನೆ
22. ಒಕ್ಕಲಿಗರ ಯುವ ವೇದಿಕೆ
23. ನೆರವು ಕಟ್ಟದ ಕಾರ್ಮಿಕರ ಸಂಘ
24. ಅಖಿಲ ಕರ್ನಾಟಕ ಯುವ ಸೇನೆ
25. ಯುವ ಶಕ್ತಿ ಕರ್ನಾಟಕ
26. ದಲಿತ ಸಂರಕ್ಷಣ ಸಮಿತಿ
27. ಕರ್ನಾಟಕ ಸಮರ ಸೇನೆ
28. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ
29. ದಲಿತ ಜನಸೇನಾ
30. ಕರುನಾಡ ಜನ ಬೆಂಬಲ ವೇದಿಕೆ
31. ಕರ್ನಾಟಕ ದಲಿತ ಜನಸೇನೆ
32. ಜೈ ಭಾರತ ಚಾಲಕರ ಸಂಘ
33. ರಾಜ್ಯ ಕರ್ನಾಟಕ ಸೇನೆ
34. ಕರವೇ ಜನಸೇನೆ
35. ಅಖಂಡ ಕರ್ನಾಟಕ ರಕ್ಷಣಾ ವೇದಿಕೆ
36. ಕರುನಾಡ ಸೇನೆ
37. ಕರ್ನಾಟಕ ಚಳುವಳಿ ವೇದಿಕೆ
38. ಕನ್ನಡ ಸಾಹಿತ್ಯ ಪರಿಷತ್
39. ಓಲಾ ಹಾಗೂ ಉಬರ್ ಮಾಲೀಕರ ಸಂಘ
40. ರಾಜ್ಯ ಕಬ್ಬು ಬೆಳೆಗಾರರ ಸಂಘ
41. ಆಮ್ ಆದ್ಮಿ ಪಕ್ಷ
42. ಕನ್ನಡ ಚಳವಳಿ ಕೇಂದ್ರ ಸಮಿತಿ
43. ಜಯ ಕರ್ನಾಟಕ ಸಂಘಟನೆ
44. ರಾಷ್ಟ್ರೀಯ ಚಾಲಕರ ಒಕ್ಕೂಟ
45. ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ
46. ತಮಿಳು ಸಂಘ
47. ಕೆಂಪೇಗೌಡ ಸಮಿತಿ
48. ರಾಜಸ್ತಾನಿ ಭಾಷಿಕರ ಸಂಘ
49. ಕರ್ನಾಟಕ ರಕ್ಷಣಾ ಸೇನೆ












Click it and Unblock the Notifications