Holiday: ಕೆಎಸ್‌ಆರ್‌ಟಿಸಿ ಅಧಿಕಾರಿಗಳ ರಜೆ ಕುರಿತು ಮಹತ್ವದ ಆದೇಶ
Holiday: ಸರ್ಕಾರಿ ಅಧಿಕಾರಿಗಳ ರಜೆಗಳ ಕುರಿತು ಆಗಾಗ ಅಪ್ಡೇಟ್ ಮಾಹಿತಿಯನ್ನು ಹೊರಬೀಳುತ್ತಲೇ ಇರುತ್ತವೆ. ಹಾಗೆಯೇ ಇದೀಗ ರಾಜ್ಯದ ಜೀವನಾಡಿ ಸಾರಿಗೆಯಾಗಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ರಜೆ ಎಂಟ್ರಿ ಕುರಿತು ಹೊಸ ನಿಯಮ ಜಾರಿಯಾಗಿದ್ದು, ಇದರಿಂದ ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರತಿ ತಿಂಗಳು ಕೆಲವು ಅಧಿಕಾರಿ/ಸಿಬ್ಬಂದಿ ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ರಜೆ ಅರ್ಜಿ ಸಲ್ಲಿಸದೆ ತಿಂಗಳ ಕೊನೆಯಲ್ಲಿ ಬ್ಯಾಕೆಂಡ್ ಅಲ್ಲಿ ಅಪ್ಡೇಟ್ ಮಾಡಲಾಗುತ್ತಿದೆ. ಆದ್ದರಿಂದ ಇದನ್ನು ಬಿಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಸೂಕ್ತಾಧಿಕಾರಿಗಳು 03.02.2025ರಂದು ಆದೇಶ ಹೊರಡಿರುವ ಹಿನ್ನೆಲೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಎಲ್ಲಾ ಹಿರಿಯ/ವಿಭಾಗೀಯ ನಿಯಂತ್ರಣಾಧಿಕಾರಿಗಳು/ಪ್ರಾಂಶುಪಾಲರು, ಕಾರ್ಯ ವ್ಯವಸ್ಥಾಪಕರು/ಮುದ್ರಣ ನಿಯಂತ್ರಣಾಧಿಕಾರಿಗಳಿಗೆ ಈ ಆದೇಶ ಹೊರಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಕಚೇರಿ ಹಾಗೂ ವಿಭಾಗಗಳಲ್ಲಿ ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ಅಧಿಕಾರಿ/ನೌಕರರ ಜನವರಿ-25ರ ಮಾಹೆಯ ಹಾಜರಾತಿಯನ್ನು ಸೂಕ್ತಾಧಿಕಾರಿಗಳು ಗಮನಿಸಿದ್ದಾರೆ.
ಪ್ರತಿ ತಿಂಗಳು ಕೆಲವು ಅಧಿಕಾರಿ/ಸಿಬ್ಬಂದಿ ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ರಜೆ ಅರ್ಜಿಯನ್ನು ಸಲ್ಲಿಸದೆ ತಿಂಗಳ ಕೊನೆಯಲ್ಲಿ ಬ್ಯಾಕೆಂಡ್ ಅಲ್ಲಿ ಅಪ್ಡೇಟ್ ಮಾಡಲಾಗುತ್ತಿದೆ ಹಾಗೂ ವಿಭಾಗ/ಘಟಕಗಳಲ್ಲಿ ನೌಕರರ ಹಾಜರಾತಿಯಲ್ಲಿ A ಮತ್ತು L ಎಂದು ನಮೂದಿಸಿ ನಂತರ ಅದನ್ನು ರಜೆ ಎಂದು ಬದಲಾಯಿಸುತ್ತಿರುವುದು ಬೆಳಕಿದೆ ಬಂದಿದೆ.
ಆದ್ದರಿಂದ ತುರ್ತು ಮತ್ತು ಅತಿ ಜರೂರು ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳಲ್ಲಿ A ಮತ್ತು L ಎಂದು ಹಾಜರಾತಿಯಲ್ಲಿ ನಮೂದಿಸಿರುವುದನ್ನು ಬ್ಯಾಕೆಂಟ್ ಅಪ್ಡೇಟ್‌ನಲ್ಲಿ ರಜೆ ಎಂದು ಮಾಡಬಾರದು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಇನ್ನು ಆಂಡ್ರೈಡ್ ಮೊಬೈಲ್ ಹೊಂದಿಲ್ಲದವರು ಹಾಗೂ ಅನ್ಯ ಕರ್ತವ್ಯ ನಿಯೋಜನೆ ಮೇಲೆ ಕಚೇರಿಯಿಂದ ಹೊರಗೆ ಉಳಿಯುವ ಸಂದರ್ಭ ಹೊರತುಪಡಿಸಿ, ಇನ್ನುಳಿದ ಸಮಯದಲ್ಲಿ Web check-in ಮಾಡತಕ್ಕದ್ದಲ್ಲ.ಕಡ್ಡಾಯವಾಗಿ ಕಚೇರಿಗೆ ಬಂದ ನಂತರವೇ ಸಾರಿಗೆ ಮಿತ್ರ ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಜರಾತಿ ನಮೂದಿಸಬೇಂದು ತಿಳಿಸಿದ್ದಾರೆ.
Web check-in ವ್ಯವಸ್ಥೆ ದುರುಪಯೋಗ ಮಾಡಿಕೊಂಡಿರುವುದು ಗಮನಕ್ಕೆ ಬಂದರೆ, ಅದನ್ನು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ತಿಳಿಸಲು ಸೂಕ್ತಾಧಿಕಾರಿಗಳಿಂದ ನಿರ್ದೇಶಿತನಾಗಿದ್ದೇನೆ ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಸರ್ಕಾರಿ ನೌಕರರಿಗೆ ಮಾಹಿತಿ: ಸರ್ಕಾರಿ ನೌಕರರಿಗೆ ಗಳಿಕೆ ರಜೆ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಹಾಗಾದರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದಿನಾಂಕ 21.12.2023ರ ಸರ್ಕಾರಿ ಆದೇಶ ಸಂಖ್ಯೆ ಆಇ 10(ಇ) ಸೇನಿಸೇ 2023 ಮತ್ತು ದಿನಾಂಕ 17.1.2025ರ ಸರ್ಕಾರಿ ಆದೇಶ ಸಂಖ್ಯೆ ಆಇ 03 ಸೇನಿಸೇ 2024ರ ಆದೇಶ ಭಾಗದ ಕೊನೆಯಲ್ಲಿ ಈ ಕೆಳಗಿನವುಗಳನ್ನು ಸೇರಿಸಿ ತಿಳಿದುಕೊಳ್ಳತಕ್ಕದ್ದ ಎಂಬುದಾಗಿ ಹೇಳಿದ್ದಾರೆ.
ಗಳಿಕೆ ರಜೆ ನಗದೀಕರಣಕ್ಕೆ ಮಂಜೂರಾತಿ ನೀಡುವ ಆದೇಶವನ್ನು ಯಾವುದಾದರೂ ಕಾರಣದಿಂದ ನಿಗಧಿತ ಬ್ಲಾಕ್ ಅವಧಿಯಲ್ಲಿ ಹೊರಡಿಸಲು ಸಾಧ್ಯವಾಗದಿದ್ದರೆ ಸಂಬಂಧಿತ ಪ್ರಾಧಿಕಾರವು ಅಂತಹ ಆದೇಶವನ್ನು ಬ್ಲಾಕ್ ಅವಧಿ ಮುಕ್ತಾಯಗೊಂಡ ನಂತರವೂ ಹೊರಡಿಸಬಹುದು. ಆದರೆ, ಗಳಿಕೆ ರಜೆ ನಗದೀಕರಣದ ಆರ್ಥಿಕ ಪ್ರಯೋಜನವನ್ನು ಸಂಬಂಧಿತ ಆರ್ಥಿಕ ವರ್ಷವು ಅಂತ್ಯಗೊಳ್ಳುವ ಮುನ್ನ ಪಡೆಯತಕ್ಕದ್ದು ಎಂಬುದಾಗಿ ತಿಳಿಸಿದ್ದಾರೆ.












Click it and Unblock the Notifications