HIV: ಹಾಸ್ಟೆಲ್, ಪಿಜಿಗಳಲ್ಲಿರುವವರಿಗೆ ಆಘಾತಕಾರಿ ಸುದ್ದಿ, ಏನದು?
ಕರ್ನಾಟಕದ ಹಾಸ್ಟೆಲ್, ಪಿ.ಜಿಗಳಲ್ಲಿ ಎಚ್‌ಐವಿ ಏಡ್ಸ್(ಎಚ್‌ಐವಿ ರೋಗ) ಹೆಚ್ಚಾಗ್ತಿದೆ ಎನ್ನುವ ಆತಂಕಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎಚ್‌ಐವಿ ಹೆಚ್ಚಾಗಿದೆ. ಇನ್ನೂ ಆಘಾತಕಾರಿ ಅಂಶವೆಂದರೆ, ಹಾಸ್ಟೆಲ್, ಪಿ.ಜಿ ಹಾಗೂ ಗೆಸ್ಟ್ ಹೌಸ್‌ನಲ್ಲಿ ಇರುವವರಲ್ಲಿ ಎಚ್‌ಐವಿ ಹಾಗೂ ಏಡ್ಸ್ ರೋಗ ಕಾಣಿಸಿಕೊಳ್ಳುತ್ತಿದ್ದು. ಈ ರೋಗ ಗಂಭೀರ ಹಂತಕ್ಕೆ ತಲುಪಿದ ಮೇಲೆ ವೈದ್ಯರ ಬಳಿಗೆ ಹೋಗುತ್ತಿದ್ದಾರೆ. ಏಡ್ಸ್ ನಂತಹ ಭಯಾನಕ ರೋಗ ಯಾಕೆ ಬರ್ತಿದೆ. ಏನಿದು ಆಘಾತಕಾರಿ ಬೆಳವಣಿಗೆ ಎನ್ನುವ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಇದು ನಿಜಕ್ಕೂ ಕರ್ನಾಟಕವೇ ಬೆಚ್ಚಿಬೀಳುವಂತಹ ಸುದ್ದಿ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಸ್ಟಲ್ ಹಾಗೂ ಪಿ.ಜಿಗಳಲ್ಲಿ ಇರುವ ಹುಡುಗರಲ್ಲಿ ಏಡ್ಸ್ ಹಾಗೂ ಎಚ್‌ಐವಿ ಸೋಂಕು ಹೆಚ್ಚಾಗುತ್ತಿದೆಯಂತೆ. ಇದಕ್ಕೆ ಕಾರಣ ಕೇಳಿದರೆ ನೀವು ಕಂಡಿತವಾಗಿಯೂ ಶಾಕ್ ಆಗ್ತೀರಿ. ಈಚೆಗೆ ಬಿಡುಗಡೆಯಾದ ಸಿನಿಮಾವೊಂದರಲ್ಲಿ ಜೈಲಿನಲ್ಲಿ ಸಲಿಂಗಕಾಮ ನಡೆಯುವ ಬಗ್ಗೆ ತೋರಿಸಲಾಗಿತ್ತು. ಇದೀಗ ಇದೇ ವಿಷಯವೊಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಡೆದಿದೆ. ಎಚ್‌ಐವಿ ಎನ್ನುವುದು ಸದ್ಯ ವಾಸಿ ಮಾಡಲಾಗದ ರೋಗ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಸಣ್ಣ ವಯಸ್ಸಿನ ಮಕ್ಕಳೇ ಇದಕ್ಕೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಹಾಸ್ಟೆಲ್ ಹಾಗೂ ಪಿ.ಜಿಗಳಲ್ಲಿ ಸೆಕ್ಸ್‌ನಿಂದ ಎಚ್‌ಐವಿ ಹೆಚ್ಚಾಗುತ್ತಿದೆ.

ಎಚ್‌ಐವಿ ಹೆಚ್ಚಳಕ್ಕೆ ಸಲಿಂಗಕಾಮ ಕಾರಣ: ಹೌದು ಇದು ನಿಜಕ್ಕೂ ಆಘಾತಕಾರಿ ವಿಷಯವೆಂದೇ ಹೇಳಬಹುದು. ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಎಚ್‌ಐವಿ ಸೋಂಕು ಹಾಗೂ ಏಡ್ಸ್ ರೋಗ ಹೆಚ್ಚಳವಾಗುತ್ತಿದೆ. (ಎಚ್‌ಐವಿ ಎನ್ನುವುದು ಒಂದು ಸೋಂಕು ಅದು ತೀವ್ರ ಸ್ವರೂಪ ಪಡೆದುಕೊಂಡರೆ ಏಡ್ಸ್ ಎಂದು ಹೇಳಲಾಗುತ್ತದೆ). ಇದಕ್ಕೆ ಕಾರಣವಾಗಿರುವುದು "ಸಲಿಂಗಕಾಮ" (ಪರಸ್ಪರ ಗಂಡು ಅಥವಾ ಹೆಣ್ಣು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು). ಹೌದು ರಾಜ್ಯದ ಕೆಲವು ಪ್ರಮುಖ ಪಿ.ಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಹುಡುಗರು ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಇದು ಎಚ್‌ಐವಿ/ ಏಡ್ಸ್ ಹೆಚ್ಚಳಕ್ಕೆ ಕಾರಣವಾಗಿದೆ.
ಮೂರ್ನಾಲ್ಕು ವರ್ಷದಿಂದ ಸಲಿಂಗಕಾಮದಲ್ಲಿ ಯುವಕರು ತೊಡಗಿದ್ದು. ಸೆಕ್ಸ್ ಮಾಡುವಾಗ ಮುಂಜಾಗ್ರಾತಾ ಕ್ರಮ (ಸುರಕ್ಷತಾ ವಿಧಾನ) ಅನುಸರಿಸದೆ ಇರುವುದೇ ಕಾರಣ ಎಂದು ಹೇಳಲಾಗಿದೆ. ಕಾಲೇಜಿಗೆ ಹೋಗುವ ಹುಡುಗರು, ಊರು ಬಿಟ್ಟು ಬೇರೆ ಊರಿಗೆ ಬಂದು ಕೆಲಸ ಮಾಡುವವರು ಹಾಗೂ ಒಂದೇ ರೂಮ್‌ನಲ್ಲಿ ಇರುವ ಹುಡುಗರಲ್ಲಿ ಎಚ್‌ಐವಿ ಹೆಚ್ಚಾಗುತ್ತಿದೆ. ಇನ್ನು ಮುಖ್ಯವಾಗಿ ಪಿ.ಜಿಗಳಲ್ಲಿ ಒಂದೇ ರೂಮ್‌ನಲ್ಲಿ ಇರುವ ಹುಡುಗರಲ್ಲಿ ಏಡ್ಸ್ ಹೆಚ್ಚಳವಾಗುತ್ತಿದೆ. ಸಲಿಂಗಕಾಮದಿಂದ ಎಚ್‌ಐವಿ ಹೆಚ್ಚಳವಾಗುತ್ತಿಲ್ಲ. ಸಲಿಂಗಕಾಮದಲ್ಲಿ ಸುರಕ್ಷತಾ ವಿಧಾನ ಅನುಸರಿದೆ ಇರುವುದು ಇದಕ್ಕೆ ಕಾರಣವಾಗಿದೆ. ಪಿ.ಜಿ ಹಾಗೂ ಹಾಸ್ಟಲ್‌ಗಳಲ್ಲಿ ಇರುವ ಹುಡುಗರು ಸೆಕ್ಸ್ ಮಾಡುವಾಗ (ಕಾಂಡೋಮ್) ಸುರಕ್ಷತಾ ವಿಧಾನ ಅನುಸರಿದೆ ಇರುವುದೇ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ತುಮಕೂರಿನಲ್ಲಿ ಹೆಚ್ಚಳ: ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಸಲಿಂಗಕಾಮದಿಂದ ಎಚ್‌ಐವಿ ಹಾಗೂ ಏಡ್ಸ್ ಹೆಚ್ಚಳವಾಗುತ್ತಿರುವುದು ವರದಿಯಾಗಿದೆ. ಈ ಭಾಗದಲ್ಲಿನ ಪಿ.ಜಿ ಹಾಗೂ ಹಾಸ್ಟೆಲ್‌ನಲ್ಲಿರುವ ಕೆಲವು ಹುಡುಗರು ಸಲಿಂಗಕಾಮದಲ್ಲಿ ತೊಡಗಿದ್ದಾರೆ. ಸಲಿಂಗಕಾಮದಿಂದ ಏಡ್ಸ್ ಹರಡುತ್ತಿದೆ. ಸೆಕ್ಸ್ ಮಾಡುವಾಗ ಯಾವುದೇ ಸುರಕ್ಷತಾ ಕ್ರಮವನ್ನು ಅನುಸರಿಸುತ್ತಿಲ್ಲ. ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಇರುವುದು ದೃಢಪಟ್ಟಿದೆ. ಎಚ್‌ಐವಿ ಸೋಂಕು ಕಾಣಿಸಿಕೊಂಡ ನೂರು ಜನರಲ್ಲಿ ಹತ್ತು ಜನರಲ್ಲಿ ಸಲಿಂಗಕಾಮವೇ ಕಾರಣ ಎಂದು ಹೇಳಲಾಗಿದೆ.

ಈ ಆಘಾತಕಾರಿ ವಿಷಯ ವೈದ್ಯರಿಗೂ ಶಾಕ್ ನೀಡಿದೆ. ಜ್ವರ ಆಗ್ಗಾಗ್ಗೆ ಕಾಣಿಸಿಕೊಳ್ಳುವುದು, ವಾಂತಿ, ಜ್ವರ, ಕೆಮ್ಮು ಹಾಗೂ ಭೇದಿ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ತೋರಿಸಬೇಕು. ಎಚ್‌ಐವಿ ಸೋಂಕು ಹರಡುವುದನ್ನು ಪ್ರಾರಂಭದಲ್ಲೇ ತಡೆಯಬೇಕು ಎಂದು ತುಮಕೂರು ಜಿಲ್ಲಾ ಆಸ್ಪತ್ರೆಯ ವೈದ್ಯರು ಹೇಳಿರುವುದು ವರದಿಯಾಗಿದೆ.












Click it and Unblock the Notifications