ಕೊರೊನಾವೈರಸ್ ಸೋಂಕಿತರ ಸಾವಿನಲ್ಲೂ ಕರ್ನಾಟಕದ ಹೊಸ ದಾಖಲೆ!

ಬೆಂಗಳೂರು, ಮೇ 07: ಕೊರೊನಾವೈರಸ್ ಎರಡನೇ ಅಲೆಯು ಮೊದಲಿಗಿಂತ ಅಪಾಯಕಾರಿ ಮತ್ತು ಮಾರಕವಾಗಿದೆ. ಕರ್ನಾಟಕದಲ್ಲಿ ಮಹಾಮಾರಿಯು ಮರಣಮೃದಂಗ ಬಾರಿಸುತ್ತದೆ ಎನ್ನುವುದಕ್ಕೆ ಶುಕ್ರವಾರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ನೀಡಿರುವ ಅಂಕಿ-ಅಂಶಗಳೇ ಸಾಕ್ಷಿಯಾಗಿದೆ.

Recommended Video

      #Covid19Updates, Bengaluru: 21376 ಸೋಂಕಿತರು ಪತ್ತೆ, 346 ಮಂದಿ ಸೋಂಕಿತರು ಸಾವು | Oneindia Kannada

      ರಾಜ್ಯದಲ್ಲಿ ಒಂದೇ ದಿನ ಅತಿಹೆಚ್ಚು ಸೋಂಕಿತರು ಕೊವಿಡ್-19 ನಿಂದ ಪ್ರಾಣ ಬಿಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 592 ಮಂದಿ ಕೊರೊನಾವೈರಸ್ ಸೋಂಕಿನಿಂದ ಉಸಿರು ಚೆಲ್ಲಿದ್ದು, ರಾಜ್ಯದಲ್ಲಿ ಈವರೆಗೂ 17,804 ಜನರು ಮೃತಪಟ್ಟಿದ್ದಾರೆ.

      ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 48781 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 18,38,885ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದರಲ್ಲೇ 21376 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 9,08,462ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಕೊವಿಡ್-19 ಸಾವಿನ ಪ್ರಕರಣಗಳು ವರದಿಯಾಗಿದ್ದು, ಯಾವ ಜಿಲ್ಲೆಯಲ್ಲಿ ಎಷ್ಟು ಜನರು ಮಹಾಮಾರಿಗೆ ಬಲಿಯಾಗಿದ್ದಾರೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ಓದಿ.

      Highest Coronavirus Deaths reported in Karnataka today


      ಕೊವಿಡ್-19ಗೆ ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ:

      ರಾಜ್ಯದಲ್ಲಿ ಒಟ್ಟು 592 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಈ ಪೈಕಿ ಬಾಗಲಕೋಟೆ 7, ಬಳ್ಳಾರಿ 24, ಬೆಳಗಾವಿ 0, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು 346, ಬೀದರ್ 5, ಚಾಮರಾಜನಗರ 7, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 4, ಚಿತ್ರದುರ್ಗ 0, ದಕ್ಷಿಣ ಕನ್ನಡ 7, ದಾವಣಗೆರೆ 2, ಧಾರವಾಡ 7, ಗದಗ 3, ಹಾಸನ 20, ಹಾವೇರಿ 9, ಕಲಬುರಗಿ 19, ಕೊಡಗು 10, ಕೋಲಾರ 2, ಕೊಪ್ಪಳ 0, ಮಂಡ್ಯ 11, ಮೈಸೂರು 22, ರಾಯಚೂರು 4, ರಾಮನಗರ 10, ಶಿವಮೊಗ್ಗ 14, ತುಮಕೂರು 15, ಉಡುಪಿ 6, ಉತ್ತರ ಕನ್ನಡ 12, ವಿಜಯಪುರ 6, ಯಾದಗಿರಿ 1 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+