ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಕಡ್ಡಾಯ: ಕೇಂದ್ರ ಸಾರಿಗೆ ಕರಡು ಅಧಿಸೂಚನೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿ ದುಷ್ಕೃತ್ಯವೆಸಗುವವರ ಸಂಖ್ಯೆ ಅತಿಯಾಗಿದೆ. ಅಂತವರಿಗೆ ಲಗಾಮು ಹಾಕುವ ಸಲುವಾಗಿ ಕೇಂದ್ರ ಸಾರಿಗೆ ಸಚಿವಾಲಯ ಕರಡು ಅಧಿಸೂಚನೆಯೊಂದನ್ನು ಹೊರಡಿಸಿದೆ. ಅದರ ಪ್ರಕಾರ 2019 ಜನವರಿ 1 ರಿಂದ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ಉತ್ಪಾದಕರೇ ಎಚ್‌ಎಸ್ ಆರ್ ಪಿ ಅಳವಡಿಸುವುದು ಕಡ್ಡಾಯವಾಗಿದೆ.

ವಾಹನಗಳಿಗೆ ಜಿಪಿಎಸ್ ಕಡ್ಡಾಯ: ಸಾರಿಗೆ ಇಲಾಖೆ ನಿರಾಸಕ್ತಿ

ಈ ಕುರಿತು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಕರಡು ಅಧಿಸೂಚನೆ ಪ್ರಕಟಿಸಿದೆ. 2019 ಜ.1 ಮತ್ತು ನಂತರದಲ್ಲಿ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ಸೆಕ್ಯುರಿಟಿ ಲೈಸೆನ್ಸ್ ಪ್ಲೇಟ್ ಗಳನ್ನು ವಾಹನ ಉತ್ಪಾದಕರೇ ನೀಡಬೇಕು. ವಾಹನ ಉತ್ಪಾದಕರ ಡೀಲರ್ ಗಳು ಮಾರಾಟದ ಸಂದರ್ಭದಲ್ಲಿ ಪ್ಲೇಟ್ ಗಳಲ್ಲಿ ನೋಂದಣಿ ಸಂಖ್ಯೆ ನಮೂದಿಸಿ ವಾಹನಗಳಿಗೆ ಅಳವಡಿಸಬೇಕು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಹಳೇ ವಾಹನಗಳಿಗೂ ಎಚ್ಎಸ್ಆರ್ ಪಿ ಹಾಕಬೇಕಿದ್ದಲ್ಲಿ ವಾಹನ ಉತ್ಪಾದಕರಿಂದಲೇ ಡೀಲರ್ ಗಳು ಪ್ಲೇಟ್ ಪಡೆದು ಅಳವಡಿಸಬೇಕು ಎಂದು ಕರಡುವಿನಲ್ಲಿ ಉಲ್ಲೇಖಿಸಲಾಗಿದೆ. ಕರಡು ಅಧಿಸೂಚನೆ ಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.

High security number plates compulsory from January 1

ಹಳೆ ಪ್ಲೇಟ್ ಬದಲಾವಣೆ ಕಡ್ಡಾಯ: ಕರ್ನಾಟಕದಲ್ಲಿ 2008ರಲ್ಲಿ ಎಚ್ಎಸ್ಆರ್ ಪಿ ಅನುಷ್ಠಾನಗೊಳಿಸಲು ಸಾರಿಗೆ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಮೊದಲ ಟೆಂಡರ್ ನಲ್ಲಿ ಭಾಗವಹಿಸಿದ್ದ ಕಂಪನಿ ಅಧಿಕ ಬೆಲೆ ಸೂಚಿಸಿದ್ದ ಕಾರಣ ಟೆಂಡರ್ ರದ್ದಾಗಿತ್ತು.

2 ನೇ ಬಾರಿ ಟೆಂಡರ್ ಕರೆದಿದ್ದಾಗ ಟೆಂಡರ್ ಪಡೆದ ಕಂಪನಿ ಕಪ್ಪುಪಟ್ಟಿಗೆ ಸೇರಿದ್ದ ಕಾರಣ ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಪ್ರಸ್ತುತ ಯೋಜನೆ ಅನುಷ್ಠಾನಕ್ಕೆ ಇಲಾಖೆ ಅಂತಿಮ ಸಿದ್ಧತೆ ನಡೆಸಿರುವ ಸಂದರ್ಭದಲ್ಲೇ ಕೇಂದ್ರ ಹೊಸ ಕರಡು ನೀತಿ ಪ್ರಕಟಿಸಿದೆ. ಹಳೇ ವಾಹನಗಳ ರಿಜಿಸ್ಟ್ರೇಷನ್ ಪ್ಲೇಟ್ ಬದಲಾವಣೆ ಅಧಿಕಾರ ಆಯಾ ರಾಜ್ಯ ಸಾರಿಗೆ ಇಲಾಖೆಗೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ministry Of Road Transport and Highways has issued an order to all the state including Karnataka saying that High Security Registration Plate (HSRP) Installation for all the vehicles should be compulsory by 2019 January 1.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ