ಕರ್ನಾಟಕ ಹೈಕೋರ್ಟ್‌ನಲ್ಲಿ 85 ಹುದ್ದೆಗಾಗಿ ಅರ್ಜಿ ಸಲ್ಲಿಸಿ
ಬೆಂಗಳೂರು, ನ. 17 : ಕರ್ನಾಟಕ ಹೈಕೋರ್ಟ್‌ನಲ್ಲಿ 85 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ.
ಎಸ್‌ಎಸ್ಎಲ್‌ಸಿ, ಸೀನಿಯರ್ ಗ್ರೇಡ್ ಎಕ್ಸಾಮಿನೇಷನ್ ಇನ್ ಇಂಗ್ಲಿಷ್ ಶಾರ್ಟ್‌ಹ್ಯಾಂಡ್/ಸೀನಿಯರ್ ಗ್ರೇಡ್ ಎಕ್ಸಾಮಿನೇಷನ್ ಇನ್ ಟೈಪ್‌ರೈಟಿಂಗ್ ಇನ್ ಇಂಗ್ಲಿಷ್ ಆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. [ಎಚ್ಎಎಲ್ ನಲ್ಲಿ 49 ಹುದ್ದೆಗಳಿವೆ ಅರ್ಜಿ ಹಾಕಿ]

ವೇತನ, ವಯೋಮಿತಿ : 20,000ದಿಂದ 36,000ದ ತನಕ ವೇತನವಿದೆ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 18-40, ಓಬಿಸಿ ಅವರಿಗೆ 30 ಮತ್ತು ಸಾಮಾನ್ಯ ವರ್ಗದವರಿಗೆ 35 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ವರ್ಗ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಅಥವ ಬ್ಯಾಂಕ್ ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗಿದೆ. ಎಸ್‌ಸಿ, ಎಸ್‌ಟಿ, ಅಂಗವಿಕಲ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ : ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನ.25ರ ರಾತ್ರಿ 11.59ರವೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. http://karnatakajudiciary.kar.nic.in/acsrec.asp ವೆಬ್ ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. [ವಿವರಗಳು ಇಲ್ಲಿದೆ ನೋಡಿ]
ಇಂಗ್ಲಿಶ್ ನಲ್ಲಿ ಓದಿ












Click it and Unblock the Notifications