Cauvery: "ಇತ್ತ ಕಾವೇರಿ ದ್ರೋಹ, ಅತ್ತ ಎತ್ತಿನಹೊಳೆಯಲ್ಲಿ ಭ್ರಷ್ಟಾಚಾರದ ಮಹಾಪೂರ!" ರೈತರಿಗೆ ಭಾರೀ ಸಂಕಷ್ಟ

Cauvery: ನದಿ ನೀರಿನ ನಿರ್ವಹಣೆಯ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ವಿಫಲವಾಗಿದೆ ಎಂದು ಕರ್ನಾಟಕ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ಹೊರ ಹಾಕಿದ್ದಾರೆ. ಇತ್ತ ಕಾವೇರಿ ದ್ರೋಹ, ಅತ್ತ ಎತ್ತಿನಹೊಳೆಯಲ್ಲಿ ಭ್ರಷ್ಟಾಚಾರದ ಮಹಾಪೂರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ನಿಮ್ಮ ಈ ಕಡುಭ್ರಷ್ಟ ಆಡಳಿತಕ್ಕೆ ನಾಚಿಕೆಯಾಗಬೇಕು. ಒಂದೆಡೆ ನಮ್ಮ ಮಂಡ್ಯ, ಮೈಸೂರು ಭಾಗದ ರೈತರ ಜಮೀನುಗಳಿಗೆ, ಕೆರೆ-ನಾಲೆಗಳಿಗೆ ನೀರು ಬಿಡಲು ಬದ್ಧತೆ ಇಲ್ಲದ ನೀವು, ರಾತ್ರೋರಾತ್ರಿ ಕದ್ದುಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದೀರಿ. ಮತ್ತೊಂದೆಡೆ ಬಯಲುಸೀಮೆ ಜನರ ಕುಡಿಯುವ ನೀರಿನ ಬವಣೆ ತೀರಿಸಬೇಕಿದ್ದ ಎತ್ತಿನಹೊಳೆ ಯೋಜನೆಯಲ್ಲಿ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕಮಿಷನ್ ದಂಧೆ, ಭ್ರಷ್ಟಾಚಾರದ ಫಲವಾಗಿ ಕಳಪೆ ಕಾಮಗಾರಿಯಿಂದ ಅಪಾರ ನೀರು ಅನ್ಯಾಯವಾಗಿ ಮಣ್ಣುಪಾಲಾಗುವಂತೆ ಮಾಡಿದ್ದೀರಿ.

Cauvery

ಬಯಲುಸೀಮೆಗೆ ನೀರು ಕೊಡುತ್ತೇವೆ ಎಂದು ಬಿಲ್ಡಪ್ ಕೊಟ್ಟ ನಿಮ್ಮ ನೀರಾವರಿ ಇಲಾಖೆಯ ಅಸಲಿ ಬಣ್ಣ ಈಗ ಬಯಲಾಗಿದೆ. ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯ 10 ಅಡಿ ಸುತ್ತಳತೆಯ ಬೃಹತ್ ಪೈಪ್‌ನ ವೆಲ್ಡಿಂಗ್ ತುಂಡಾಗಿ ಜಲಸ್ಫೋಟ ಸಂಭವಿಸಿದೆ. ಕಾರಂಜಿಯಂತೆ ಚಿಮ್ಮಿದ ನೀರು, ಅಪಾರ ನಷ್ಟ: ಭಾನುವಾರ ಸಂಜೆಯಾದರೂ ದುರಸ್ತಿ ಮಾಡಲಾಗದೆ ಕೋಟ್ಯಂತರ ಲೀಟರ್ ನೀರು ಗಗನಕ್ಕೆ ಚಿಮ್ಮಿ ವ್ಯರ್ಥವಾಗಿ ಪೋಲಾಗಿದೆ. ರೈತರ ಬದುಕು ನಾಶ ನೀರಾವರಿ ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಅವರೇ, ನಿಮ್ಮ ಕಳಪೆ ಕಾಮಗಾರಿಯಿಂದಾಗಿ ಸುತ್ತಮುತ್ತಲಿನ ಭತ್ತದ ಗದ್ದೆಗಳು, ಅಡಿಕೆ ಮತ್ತು ಕಾಫಿ ತೋಟಗಳಿಗೆ ನೀರು ಹಾಗೂ ಮಣ್ಣು ನುಗ್ಗಿ ರೈತರ ಇಡೀ ವರ್ಷದ ಬೆಳೆ ಸರ್ವನಾಶವಾಗಿದೆ. ಗದ್ದೆಗಳು ಹಳ್ಳಗಳಾಗಿ ಮಾರ್ಪಟ್ಟಿವೆ.

ಮುಖ್ಯಮಂತ್ರಿಗಳೇ, ಬೆಂಗಳೂರಿನಲ್ಲಿ ಕುಳಿತು ಕಂಟ್ರಾಕ್ಟರ್‌ಗಳ ಜೊತೆ, ರಿಯಲ್ ಎಸ್ಟೇಟ್ ದೊರೆಗಳ ಜೊತೆ, ಬಂಡವಾಳಶಾಹಿಗಳ ಜೊತೆ ಡೀಲ್ ಕುದುರಿಸಲು ಇರುವ ಸಮಯ, ನಮ್ಮ ರೈತರ ಕಣ್ಣೀರು ಒರೆಸಲು ಏಕಿಲ್ಲ, ತಮಿಳುನಾಡಿಗೆ ನೀರು ಬಿಡುವಾಗ ಇರುವ ನಿಮ್ಮ ಬುಲೆಟ್ ವೇಗ, ಎತ್ತಿನಹೊಳೆಯ ಕಳಪೆ ಪೈಪ್‌ಲೈನ್ ದುರಸ್ತಿ ಮಾಡಲು ಏಕೆ ಬರಲಿಲ್ಲ ಎಂದು ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು ಇದು ಕೇವಲ ತಾಂತ್ರಿಕ ದೋಷವಲ್ಲ, ನಿಮ್ಮ ಸರ್ಕಾರದ ಕಮಿಷನ್ ದಂಧೆಯ ನೇರ ಪರಿಣಾಮ. ಕೂಡಲೇ ಎತ್ತಿನಹೊಳೆ ಯೋಜನೆಯ ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಆದೇಶಿಸಿ, ನಷ್ಟ ಅನುಭವಿಸಿದ ರೈತರಿಗೆ ಗರಿಷ್ಠ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಿಮ್ಮ ಈ ಭ್ರಷ್ಟ ಸರ್ಕಾರದ ವಿರುದ್ಧ ಬಯಲುಸೀಮೆಯ ಜನರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ, ಎಚ್ಚರಿಕೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಅವರು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+