Hemavati Water Level: ಹೇಮಾವತಿ ಜಲಾಶಯಕ್ಕೆ ಹರಿದು ಬರುತ್ತಿದೆ ಭಾರಿ ನೀರು!

ಮುಂಗಾರು ಮಳೆ ಅಬ್ಬರದಿಂದ ಎಲ್ಲೆಲ್ಲೂ ಸಂತಸ ಮೂಡಿದೆ. ಕರ್ನಾಟಕದಲ್ಲಿ ಇನ್ನೇನು ಬತ್ತಿ ಹೋಗುತ್ತಿದ್ದ ನದಿಗಳು ಇದೀಗ ಮತ್ತೊಮ್ಮೆ ಮೈದುಂಬಿ ಹರಿಯುತ್ತಿವೆ. ಏಪ್ರಿಲ್, ಮೇ ತಿಂಗಳಲ್ಲಿ ಪೂರ್ತಿ ನೆಲ ಮುಟ್ಟಿದ್ದ ನದಿಗಳಲ್ಲಿ ಈಗ ಭಾರಿ ಪ್ರಮಾಣದ ನೀರು ಹರಿದು ಬರ್ತಿದೆ. ಅದರಲ್ಲೂ ಕಾವೇರಿ ನದಿಯ ಉಪನದಿ ಹೇಮಾವತಿ ಕೂಡ ಇದೀಗ ಮೈದುಂಬಿ ಹರಿದಿದ್ದು, ಹೇಮಾವತಿ ಜಲಾಶಯಕ್ಕೆ ಎಷ್ಟು ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ ಗೊತ್ತಾ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

ಕರ್ನಾಟಕಕ್ಕೆ ಮುಂಗಾರು ಮಳೆ ಮುತ್ತಿಗೆ ಹಾಕಿ ಕರಾವಳಿ & ಮಲೆನಾಡು ಭಾಗ ಇದೀಗ ತೊಯ್ದು ಹೋಗಿದೆ. ಕಳೆದ ಹಲವು ದಿನಗಳಿಂದಲು ನಿರಂತರವಾಗಿ ಮಳೆ ಬೀಳುತ್ತಿರುವಾಗ ಜನರು ಕೂಡ ಕಂಗಾಲಾಗಿದ್ದಾರೆ. ಜನ ಜೀವನ ಮಳೆಗೆ ಅಸ್ತವ್ಯಸ್ತವಾಗಿ ಹೊಗಿದ್ದು, ಪರಿಸ್ಥಿತಿ ಹೀಗಿದ್ದಾಗಲೇ ಮತ್ತಷ್ಟು ಹೆಚ್ಚಿನ ಮಳೆ ಬೀಳುವ ಬಗ್ಗೆ ಎಚ್ಚರಿಕೆ ಸಂದೇಶ ರವಾನೆ ಆಗಿದೆ. ಇದರ ಜೊತೆಗೆ ಕರ್ನಾಟಕದ ಹೇಮಾವತಿ ಜಲಾಶಯಕ್ಕೆ ಕೂಡ ಭಾರಿ ನೀರು ಹರಿದು ಬರುತ್ತಿದೆ. ಹಾಗೆಯೇ ಕೆಆರ್‌ಎಸ್ & ಕಬಿನಿ ಡ್ಯಾಂಗಳು ಕೂಡ ತುಂಬಿ ಹರಿಯುತ್ತಿವೆ. ಹಾಗಾದ್ರೆ ಹೇಮಾವತಿ ಡ್ಯಾಂಗೆ ಈಗ ಬರುತ್ತಿರುವ ನೀರು ಎಷ್ಟು ಸಾವಿರ ಕ್ಯುಸೆಕ್? ಬನ್ನಿ ತಿಳಿಯೋಣ.

Hemavati With KRS And Kabini Dam Water Level On 7th July 2024

37 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ...

ಹಾಸನ ಜಿಲ್ಲೆಯಲ್ಲಿ ಹೇಮಾವತಿ ನದಿಗೆ ಕಟ್ಟಿರುವ ಬೃಹತ್ ಡ್ಯಾಂ ಇದೀಗ ತುಂಬಿಕೊಳ್ಳುತ್ತಿದೆ. ಅಂದಹಾಗೆ 37 ಟಿಎಂಸಿ ಸಾಮರ್ಥ್ಯ ಇರುವ ಹೇಮಾವತಿ ಡ್ಯಾಂಗೆ ಈಗ ಬರೋಬ್ಬರಿ 7,796 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಹೇಮಾವತಿ ಜಲಾಶಯದಲ್ಲಿ ಈಗ ಬರೋಬ್ಬರಿ 17.599 ಟಿಎಂಸಿ ನೀರು ಸಂಗ್ರಹ ಆಗಿದೆ. ಅಲ್ಲದೆ 2922 ಅಡಿ ಎತ್ತರ ಇರುವ ಈ ಡ್ಯಾಂಗೆ ಇದೀಗ 2896 ಅಡಿ ನೀರು ಬಂದಿದ್ದು, ಇದೇ ರೀತಿ ಮಳೆ ಮುಂದುವರಿದರೆ ಜುಲೈ ಅಂತ್ಯಕ್ಕೆ ಹೇಮಾವತಿ ಜಲಾಶಯ ತುಂಬಿ ತುಳುಕುವ ಸಾಧ್ಯತೆ ದಟ್ಟವಾಗಿದೆ. ಹೊರಹರಿವು ಕೇವಲ 250 ಕ್ಯೂಸೆಕ್ ದಾಖಲಾಗಿದೆ.

ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

ಇದೀಗ ಮಂಡ್ಯದ ಕೆಆರ್‌ಎಸ್ ಡ್ಯಾಂನಲ್ಲಿ ಬರೋಬ್ಬರಿ 102 ಅಡಿ ನೀರು ಸಂಗ್ರಹ ಆಗಿದೆ. ಒಟ್ಟು 49.45 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇರುವ ಈ ಡ್ಯಾಂನಲ್ಲಿ ಸದ್ಯಕ್ಕೆ, 23.52 ಟಿಎಂಸಿ ಅಡಿ ನೀರು ಇದೆ. ಆದರೆ ಕಳೆದ ವರ್ಷ ಇದೇ ಸಮಯಕ್ಕೆ ಕೇವಲ 10.26 ಟಿಎಂಸಿ ಅಡಿ ನೀರು ಇತ್ತು. ಸದ್ಯಕ್ಕೆ, 6,185 ಕ್ಯುಸೆಕ್ ನೀರು ಕೆಆರ್‌ಎಸ್ ಡ್ಯಾಂಗೆ ಹರಿದು ಬರ್ತಿದೆ. ಹಾಗೇ ಮುಂದಿನ ವಾರ ಕೂಡ ಭರ್ಜರಿ ಮಳೆಯ ನಿರೀಕ್ಷೆ ಇದ್ದು, ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ದಟ್ಟವಾಗಿದೆ.

ಕಬಿನಿ ಡ್ಯಾಂನಲ್ಲಿ ಎಷ್ಟಿದೆ ನೀರು?

ಕಾವೇರಿ ನದಿಗೆ ಕಟ್ಟಿರುವ ಪ್ರಮುಖ ಡ್ಯಾಂಗಳ ಪೈಕಿ ಕಬಿನಿ ಕೂಡ ಒಂದಾಗಿದೆ. ಈ ಜಲಾಶಯ ಚಿಕ್ಕದಾಗಿದ್ದರೂ ಕಾವೇರಿ ಕೊಳ್ಳದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. 19.52 ಟಿಎಂಸಿ ಅಡಿ ನೀರನ್ನು ಕಬಿನಿ ಜಲಾಶಯದಲ್ಲಿ ಸಂಗ್ರಹ ಮಾಡಬಹುದು. ಇದೀಗ ಕಬಿನಿ ಡ್ಯಾಂನಲ್ಲಿ 17.83 ಟಿಎಂಸಿ ಅಡಿ ನೀರು ಸಂಗ್ರಹ ಇದೆ. 5,509 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಇನ್ನೇನು ಕಬಿನಿ ಡ್ಯಾಂ ಭಾಗಶಃ ಭರ್ತಿ ಆಗಿದೆ. ಹಾಗೇ ಕಬಿನಿ ಡ್ಯಾಂಗೆ ಮುಂದಿನ ದಿನಗಳಲ್ಲಿ ಹೀಗೆಯೇ ಮತ್ತಷ್ಟು ನೀರು ಭರ್ಜರಿಯಾಗಿ ಹರಿದು ಬರುವ ನಿರೀಕ್ಷೆ ಕೂಡ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+