ಚಿಕ್ಕಮಗಳೂರಿನಲ್ಲಿ Helping Wallಗೆ ಚಾಲನೆ

Recommended Video

      Helping Wall Starts At Chikkamagaluru | Oneindia Kannada

      ಚಿಕ್ಕಮಗಳೂರು, ಸೆಪ್ಟೆಂಬರ್ 11 : ಚಿಕ್ಕಮಗಳೂರಿನಲ್ಲಿ 'Helping Wall' ಎಂಬ ನೂತನ ಯೋಜನೆಯನ್ನು ಆರಂಭಿಸಲಾಗಿದೆ. ಬಡವರು ಮತ್ತು ಅವಶ್ಯಕತೆ ಇರುವವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

      ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಮತ್ತು Credence Helping Hands ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಇದನ್ನು ಜಾರಿಗೆ ತರಲಾಗಿದೆ. ಚಿಕ್ಕಮಗಳೂರು ನಗರ ಹಳೆ ಪೊಲೀಸ್ ಠಾಣೆ ಕಟ್ಟಡದ ಮುಂಭಾಗದಲ್ಲಿ 'Helping Wall' ನಿರ್ಮಿಸಲಾಗಿದೆ.

      Chikkamagaluru

      ಜನರು ತಮಗೆ ಅಗತ್ಯವಿಲ್ಲದ ಬಟ್ಟೆ, ಪುಸ್ತಕ, ಪೆನ್, ಪೆನ್ಸಿಲ್, ಹೊದಿಕೆ ಮುಂತಾದ ವಸ್ತುಗಳನ್ನು ಇಲ್ಲಿ ತಂದು ಇಡಬಹುದು. ಈ ವಸ್ತುಗಳ ಅಗತ್ಯ ಇರುವವರು ಇಲ್ಲಿಂದ ಅವುಗಳನ್ನು ತೆಗೆದುಕೊಂಡು ಹೋಗಬಹುದು.

      ಬಡವರು ಮತ್ತು ಕೆಳ ವರ್ಗದವರಿಗೆ ನೆರವಾಗಲು ಈ ಯೋಜನೆಯನ್ನು ಆರಂಭಿಸಲಾಗಿದೆ. ಅಗತ್ಯ ಮೂಲ ವಸ್ತುಗಳನ್ನು ಮನೆಯಲ್ಲಿ ಉಪಯೋಗಿಸದೇ ಸುಮ್ಮನೆ ಇಡುವುದಕ್ಕಿಂತ ಇಲ್ಲಿ ತಂದು ಇಟ್ಟರೆ. ಅಗತ್ಯ ವಿರುವ ಜನರು ಅದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

      ಸೆ.3ರಂದು 'Helping Wall' ಉದ್ಘಾಟನೆಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರು ಮಕ್ಕಳನ್ನು ಕರೆತಂದು ಇದರ ಬಗ್ಗೆ ತಿಳಿಸುವುದರಿಂದ ಅವರಲ್ಲಿ ದಾನ ಮಾಡುವಂತಹ ಮನೋಭಾವನೆಯನ್ನು ಬೆಳೆಸಲು ಸಾಧ್ಯವಾಗುತ್ತದೆ.

      ಜನರು ತಮ್ಮಲ್ಲಿರುವ ಅನಗತ್ಯ ವಸ್ತುಗಳನ್ನು 'Helping Wall' ನಲ್ಲಿ ತಂದಿಡುವ ಮೂಲಕ ಜನರ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಚಿಕ್ಕಮಗಳೂರು ಪೊಲೀಸರು ಮನವಿ ಮಾಡಿದ್ದಾರೆ.

      ಮೈಸೂರು ನಗರದಲ್ಲಿ ಈಗಾಗಲೇ Helping Wall ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿಕ್ಕಮಗಳೂರಿನಲ್ಲಿಯೂ ಈಗ ಇದಕ್ಕೆ ಚಾಲನೆ ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+