• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದಿನ 2 ದಿನ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ

|
Google Oneindia Kannada News

ಬೆಂಗಳೂರು, ನವೆಂಬರ್ 15: ಮುಂದಿನ ಎರಡು ದಿನ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇಂದು(ನವೆಂಬರ್ 15)ರಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಮಿಳುನಾಡಿನ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಗೆ ಕಾರಣವಾಗಿದ್ದ ವಾಯುಭಾರ ಕುಸಿತ ದುರ್ಬಲಗೊಂಡಿದೆ. ಆದರೆ ಮೇಲ್ಮೈ ಸುಳಿಗಾಳಿ ಮತ್ತು ಆಂಧ್ರಪ್ರದೇಶ, ಒಡಿಶಾ ಮೂಲಕ ಪಶ್ಚಿಮ ಬಂಗಾಳದ ತನಕ ಹಾದುಹೋಗಿರುವ ಟ್ರಫ್‌ ಹಾಗು ಆಗ್ನೇಯ ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿಯ ಪ್ರಭಾವ ರಾಜ್ಯದ ಮೇಲೆ ನವೆಂಬರ್‌ 17ರವರೆಗೆ ಉಂಟಾಗಲಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಭಾನುವಾರ ಮತ್ತೆ ತನ್ನ ಅಬ್ಬರ ಪ್ರದರ್ಶಿಸಿತು. ಬುಧವಾರದಿಂದ ಶುಕ್ರವಾರ ರಾತ್ರಿ ತನಕ ನಿರಂತರವಾಗಿ ಸೋನೆ ಮಳೆ ಸುರಿದಿತ್ತು. ಶನಿವಾರ ಹಗಲು ಆಗಾಗ ತುಂತುರು ಮಳೆ ಅಥವಾ ಒಂದೆರಡು ಹನಿ ಮಳೆಗೆ ಸೀಮಿತವಾಗಿತ್ತು. ಮಳೆ ಮಾಯವಾಗಿದ್ದು, ಮೋಡದ ದಟ್ಟಣೆ ಕಡಿಮೆ ಆಗಿ ಸೂರ್ಯನೂ ಆಗಾಗ ದರ್ಶನ ಕೊಡುತ್ತಿದ್ದ. ಹೀಗಾಗಿ ಚಳಿಯ ತೀಕ್ಷ್ಣತೆ ಗಮನಾರ್ಹವಾಗಿ ಕಡಿಮೆ ಆಗಿತ್ತು. ಭಾನುವಾರದಿಂದ ಚಳಿಯ ಪ್ರಮಾಣ ಕೊಂಚ ಏರಿಕೆಯಾಗಿದೆ.

ಹವಾಮಾನ ವರದಿ; ಬೆಂಗಳೂರಲ್ಲಿ ನಾಲ್ಕು ದಿನ ಮಳೆಹವಾಮಾನ ವರದಿ; ಬೆಂಗಳೂರಲ್ಲಿ ನಾಲ್ಕು ದಿನ ಮಳೆ

ಇಂದಿನಿಂದ ನ. 17ರ ಅವಧಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ 3 ದಿನ ಪಂಜಾಬ್, ಹರಿಯಾಣ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಚಳಿಗಾಳಿ ಸಹಿತ ಮಳೆಯಾಗಲಿದೆ.

ತಮಿಳುನಾಡಿನ ಕೆಲವು ಭಾಗಗಳಲ್ಲಿ ಈಗಾಗಲೇ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಇಂದು ತಮಿಳುನಾಡು, ಪುದುಚೇರಿ, ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ ದಕ್ಷಿಣ ಒಳನಾಡಿನ ಕರ್ನಾಟಕ ಮತ್ತು ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಹವಾಮಾನ ಇಲಾಖೆ ಇಂದು ಕರ್ನಾಟಕದ ಕರಾವಳಿ ಕರ್ನಾಟಕ, ಮಲೆನಾಡು, ಉತ್ತರ ಒಳನಾಡಿನ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು ಕರ್ನಾಟಕ ಪ್ರದೇಶಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಚದುರಿದಂತೆ ಚದುರಿದಂತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಇಂದಿನಿಂದ ನವೆಂಬರ್ 17ರವರೆಗೆ ಭಾರೀ ಮಳೆ ಸುರಿಯಲಿದೆ. ವಿಶೇಷವಾಗಿ ದಕ್ಷಿಣ ಕರ್ನಾಟಕದ ಪೂರ್ವ ಭಾಗದ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು ಮತ್ತು ಕೋಲಾರಗಳಲ್ಲಿ ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನಗಳ ಕಾಲ ಚಳಿಯ ವಾತಾವರಣ ಇರಲಿದೆ.

 ಮಳೆಯಾಗಿರುವ ಪ್ರದೇಶಗಳು

ಮಳೆಯಾಗಿರುವ ಪ್ರದೇಶಗಳು

ಪಾಂಡವಪುರ, ಧರ್ಮಸ್ಥಳ, ಹೊಳೆನರಸೀಪುರ, ಮೈಸೂರು, ಪುತ್ತೂರು, ಹಾಸನ, ಚಿಂಚೋಳಿ, ಭಾಗಮಂಡಲ, ಪೆರಿಯಪಟ್ನ, ರಾಂಪುರ, ತೀರ್ಥಹಳ್ಳಿ, ಮದ್ದೂರು, ಮಲವಳ್ಳಿ, ಸೊರಬ, ಮಡಿಕೇರಿ, ನಾಪೊಕ್ಲು, ಕೊಟ್ಟಿಗೆಹಾರ, ಚನ್ನಗಿರಿ, ಗಂಗಾವತಿ, ಕೆಆರ್ ನಗರ, ಪೊನ್ನಂಪೇಟೆ, ಬಾಳೆಹೊನ್ನೂರು, ನೆಲಮಂಗಲ, ಬನವಾಸಿ, ರಾಣೆಬೆನ್ನೂರು, ಬುಕ್ಕಪಟ್ನ, ವಿಟ್ಲ, ಬೆಂಗಳೂರು ನಗರ, ಹೆಸರಘಟ್ಟ, ಹುಂಚದಕಟ್ಟೆ, ಪರಶುರಾಂಪುರ, ಕೊಳ್ಳೇಗಾಲ, ಹಾರಂಗಿ, ಸೋಮವಾರಪೇಟೆ, ಹರಪನಹಳ್ಳಿಯಲ್ಲಿ ಮಳೆಯಾಗಿದೆ.

 ಬೆಂಗಳೂರು ವಾತಾವರಣ ಹೇಗಿದೆ?

ಬೆಂಗಳೂರು ವಾತಾವರಣ ಹೇಗಿದೆ?

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ನವೆಂಬರ್ 15 ರಿಂದ 2 ದಿನಗಳ ಕಾಲ ನಗರದಲ್ಲಿ ಸಾಧಾರಣ ಮಳೆಯಾಗಲಿದೆ. 25 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಎಚ್‌ಎಎಲ್‌ನಲ್ಲಿ 25.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 24.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 24.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

 ಕನಿಷ್ಠ ಉಷ್ಣಾಂಶ ದಾಖಲು

ಕನಿಷ್ಠ ಉಷ್ಣಾಂಶ ದಾಖಲು

ದಾವಣಗೆರೆಯಲ್ಲಿ 18.3 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಒಂದೆಡೆ ಚಳಿಗಾಲ ಕಾಡುತ್ತಿದೆ, ಬಂಗಾಳಕೊಲ್ಲಿಯಲ್ಲಿ ಕಂಡು ಬಂದಿರುವ ವಾಯು ಭಾರ ಕುಸಿತದ ಎಫೆಕ್ಟ್ ಜಿಲ್ಲೆ ಮೇಲೂ ಬಿದ್ದಿದೆ. ಎರಡು ದಿನದಿಂದ ಮೋಡ ಮುಸುಕಿದ ವಾತಾವರಣ ಜತೆ ಶೀತಗಾಳಿ ಚಳಿಯನ್ನು ಹೆಚ್ಚಿಸಿದೆ.

ಈಗ ಮಳೆಯ ವಾತಾವರಣವಿದೆಯಾದರೂ ಸುರಿಯುತ್ತಿಲ್ಲ, ಬದಲಿಗೆ ಶೀತಗಾಳಿ ಬೀಸುತ್ತಿದೆ. ತಾಪಮಾನದಲ್ಲಿ ಬಾರಿ ಇಳಿಕೆಯಾಗಿದ್ದು ಗರಿಷ್ಟ 26 ಡಿಗ್ರಿಯಿದ್ದರೆ, ಕನಿಷ್ಟ 21 ಡಿಗ್ರಿಗೆ ಇಳಿದಿದ್ದು ಚಳಿ ಪ್ರಮಾಣ ಹೆಚ್ಚಾಗಿದೆ. ಗಾಳಿಯ ವೇಗ ಗಂಟೆಗೆ 11 ಕಿಮೀ ನಷ್ಟಿದೆ. ಇದರ ಜತೆ ಚಂಡ ಮಾರುತದಿಂದಾಗಿ ಬೀಸುತ್ತಿರುವ ಶೀತಗಾಳಿಯಿಂದ ರಾತ್ರಿ ವೇಳೆ ಹೊರಗೆ ಕಾಲಿಟ್ಟರೆ ಥರಗುಟ್ಟುವಂತಹ ಚಳಿಯ ಅನುಭವ ಆಗುತ್ತಿದೆ. ವಾತಾವರಣದ ದಿಢೀರ್‌ ಬದಲಾವಣೆಯಾಗಿ ಚಳಿಯೂ ಹೆಚ್ಚಿರುವುದರಿಂದ ಹಿರಿಯರು, ಮಕ್ಕಳು ಎಚ್ಚರ ವಹಿಸಬೇಕಿದೆ.

  ರೇಡಿಯೋದಿಂದ ರಾಜಕೀಯದ ವರೆಗೂ ಲಾವಣ್ಯ ನಡೆದು ಬಂದ ಹಾದಿ | Oneindia Kannada
   ಮುಂದಿನ 24 ಗಂಟೆ ರಾಜ್ಯ ಹವಾಮಾನ ವರದಿ

  ಮುಂದಿನ 24 ಗಂಟೆ ರಾಜ್ಯ ಹವಾಮಾನ ವರದಿ

  ಮುಂದಿನ 24 ಗಂಟೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

  ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇಂದು(ನವೆಂಬರ್ 15)ರಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
  English summary
  Meteorological department predicted that, Heavy Rainfall Will Occur In Coastal And south Interior Karnataka.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  Desktop Bottom Promotion