Karnataka Rain: ಮುಂದಿನ 48 ಗಂಟೆಗಳಲ್ಲಿ ಮಳೆಯ ಆರ್ಭಟ ಮತ್ತೆ ಶುರು!

ಮಳೆ.. ಮಳೆ.. ಈ ಬಾರಿ ಚಳಿಗಾಲ ಶುರುವಾದರೂ ಮಳೆ ಆರ್ಭಟಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ. ಮಳೆ ಆರ್ಭಟಿಸುತ್ತಿರುವ ರೀತಿ ಕಂಡು ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ ಹೀಗೆಲ್ಲಾ ಅಕಾಲಿಕ ಮಳೆ ಕಾರಣಕ್ಕೆ ನೂರಾರು ರೀತಿಯ ಸಮಸ್ಯೆಗಳು ಕೂಡ ಎದುರಾಗಿವೆ. ಇನ್ನೇನು ಬೇಸಿಗೆ ಕಾಲ ಆರಂಭ ಆಗಬೇಕು ಅನ್ನುವಾಗಲೂ ಮಳೆರಾಯ ತನ್ನ ಆರ್ಭಟ ಮುಂದುವರಿಸಿ ಹೊಸ ತಲೆನೋವು ತರಿಸಿದ್ದಾನೆ. ಹಾಗಾದ್ರೆ ಮತ್ತೆ ಮಳೆ ಯಾವಾಗ ಶುರುವಾಗುತ್ತೆ? ಬನ್ನಿ ತಿಳಿಯೋಣ.

ಮಳೆ ಯಾಕೆ ಹಿಂಗೆ ಸುರಿಯುತ್ತಿದೆ? ಅಕಾಲಿಕ ಮಳೆ ಸುರಿಯಲು ಕಾರಣ ಏನು? ಅನ್ನೋ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ. ಅದರಲ್ಲೂ ಹೀಗೆ ಅಕಾಲಿಕ ಮಳೆ ಸುರಿಯುತ್ತಿರುವ ಕಾರಣಕ್ಕೆ ಚಳಿ ಜಾಸ್ತಿ ಆಗಿದೆ, ಜೊತೆಗೆ ನೆಗಡಿ, ಕೆಮ್ಮು, ಜ್ವರದ ರೀತಿ ನಾನಾ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇಷ್ಟೆಲ್ಲದರ ನಡುವೆ ಇನ್ನುಮುಂದೆ ಮಳೆ ಸುರಿಯಲ್ಲ ಬಿಡು, ಕನಿಷ್ಠ 5 ತಿಂಗಳು ಮಳೆ ಕಾಟ ಇಲ್ಲದೆ ಆರಾಮವಾಗಿ ಇರಬಹುದು ಅಂತಾ ಅಂದುಕೊಳ್ಳುವ ವೇಳೆ ಕನ್ನಡಿಗರಿಗೆ ಮತ್ತೆ ಮಳೆ ಕಂಟಕ ಎದುರಾಗಿದೆ!

Heavy Rain These Cities In Karnataka Will Receive Heavy Rain After 30 December 2024

ಮುಂದಿನ 48 ಗಂಟೆಗಳಲ್ಲಿ ಮಳೆ!

ಹೌದು, ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ ಡಿಸೆಂಬರ್ 30ರ ನಂತರ ಮತ್ತೆ ಮಳೆ ಆರ್ಭಟ ಹೆಚ್ಚಾಗಲಿದೆ. ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣ ಆಗಿದ್ದು, ಮತ್ತಷ್ಟು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಈಗಾಗಲೇ ಶ್ರೀಲಂಕಾ ಸೇರಿದಂತೆ ತಮಿಳುನಾಡು ಭಾಗ & ಕೇರಳದ ಹಲವು ಕಡೆ ಮಳೆ ಆರ್ಭಟಿಸುತ್ತಿದೆ. ಇದರ ಜೊತೆಗೆ ಇದೀಗ ಕರ್ನಾಟಕ ರಾಜ್ಯಕ್ಕೂ ಭಾರಿ ಭರ್ಜರಿ ಮಳೆಯ ಎಚ್ಚರಿಕೆ ನೀಡಲಾಗಿದೆ.

ಮಳೆ ಬೀಳುವ ಜಿಲ್ಲೆಗಳು ಯಾವುವು?

ಮಳೆ ಬಗ್ಗೆ ನೀಡಲಾಗಿರುವ ಎಚ್ಚರಿಕೆ ಪ್ರಕಾರ, ಕರ್ನಾಕಟಕ ರಾಜಧಾನಿ ಬೆಂಗಳೂರಿಗೆ ಕೂಡ ಮತ್ತೆ ಮಳೆಯ ಕಂಟಕ ಎದುರಾಗಿದೆ. ಇದರ ಜೊತೆ ಕರಾವಳಿ ಪ್ರದೇಶಗಳಾದ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗೂ ಈಗ ಮಳೆ ಕಂಟಕ ಎದುರಾಗಿದೆ. ಹಾಗೇ ಈ ವೇಳೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ & ಚಿಕ್ಕಮಗಳೂರು ಜಿಲ್ಲೆಗೂ ಮಳೆ ಸಿಂಚನವಾಗಲಿದೆ.

ಮತ್ತೊಂದು ಕಡೆ ಮೈಸೂರು, ಕೊಡಗು, ಹಾಸನ, ರಾಮನಗರ, ತುಮಕೂರು, ವಿಜಯನಗರ ಹಾಗೂ ಚಿಕ್ಕಬಳ್ಳಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಸೇರಿದಂತೆ ಗದಗ, ಹಾವೇರಿ ಜಿಲ್ಲೆಗಳಲ್ಲಿ ಕೂಡ ಮಳೆಯ ಸಾಧ್ಯತೆ ಬಗ್ಗೆ ಎಚ್ಚರಿಸಲಾಗಿದೆ. ಹೀಗಾಗಿ ಮತ್ತಷ್ಟು ಮಳೆಯು ಸುರಿಯುವುದು ಗ್ಯಾರಂಟಿ ಆಗುತ್ತಿದೆ.

ಮಳೆಯ ಕಾಟಕ್ಕೆ ಬ್ರೇಕ್ ಬೀಳುತ್ತಾ?

ಒಟ್ನಲ್ಲಿ ಮಳೆ ಕಾಟಕ್ಕೆ ಬ್ರೇಕ್ ಬೀಳುತ್ತಿಲ್ಲ, ಒಂದು ಕಡೆ ರೈತರು ಬೆಳೆ ಕಳೆದುಕೊಂಡು ಈ ಸಮಯದಲ್ಲಿ ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ನಗರ ಪ್ರದೇಶದ ಜನರು ಅಕಾಲಿಕವಾಗಿ ಸುರಿಯುತ್ತಿರುವ ಮಳೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಒದ್ದಾಡ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ಮಳೆಯ ಕಾಟಕ್ಕೆ ಬ್ರೇಕ್ ಬೀಳುವ ನಿರೀಕ್ಷೆಯಲ್ಲಿ ಜನರು ಇದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+