KRS Dam: ಭರ್ಜರಿ ಮಳೆಯಿಂದ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿರುವ ಕೆಆರ್‌ಎಸ್ ನೀರಿನ ಮಟ್ಟ: ರೈತರ ಮೊಗದಲ್ಲಿ ಸಂತಸ!
ಮಂಡ್ಯ, ಜುಲೈ 17: ಬೇಸಿಗೆಯಿಂದ ಎಲ್ಲಾ ಜಲಾಶಯಗಳ ನೀರು ಬತ್ತಿ ಹೋಗಿದ್ದು, ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ಸಹ ಏರಿಕೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ನಿರಂತವಾಗಿ ಸುರಿಯುತ್ತಿದೆ. ಪರಿಣಾಮ ಕಾವೇರಿ ಒಡಲು ತುಂಬಿಸಿಕೊಳ್ಳುತ್ತಿದ್ದಾಳೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂಗೆ 36,674 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಸದ್ಯ 110.60 ಅಡಿಗೆ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ತಲುಪಿದೆ. 24 ಗಂಟೆಯಲ್ಲಿ 3 ಅಡಿ ನೀರು ಹೆಚ್ಚಳವಾಗಿದೆ. ನಿನ್ನೆ 107.60 ಅಡಿ ಇದ್ದ ಕೆಆರ್‌ಎಸ್ ನೀರಿನ ಮಟ್ಟ, ಇಂದು 110.60 ಅಡಿಗೆ ತಲುಪಿದೆ.

ನೀರಿನ ಸಂಗ್ರಹದಲ್ಲಿ ಕೆ ಆರ್ ಎಸ್ ಲ್ಲಿ ಭಾರಿ ಏರಿಕೆ ಕಂಡಿದ್ದು, 24 ಗಂಟೆಯಲ್ಲಿ 3 ಟಿಎಂಸಿ ನೀರು ಕೆ ಆರ್ ಎಸ್ ಗೆ ಹರಿದು ಬಂದಿದೆ. ನಿನ್ನೆ ಕೆಆರ್‌ಎಸ್‌ನಲ್ಲಿ 29.378 ಟಿಎಂಸಿ ನೀರು ಸಂಗ್ರವಾಗಿತ್ತು.ಇಂದು 32.330 ಟಿಎಂಸಿ ನೀರು ಸಂಗ್ರಹವಾಗಿದ್ದು, ಸದ್ಯ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವ ಹಂತದಲ್ಲಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
| ಇಂದಿನ ಕೆಆರ್‌ಎಸ್ ನೀರಿನ ಮಟ್ಟ | |
| ಗರಿಷ್ಠ ಮಟ್ಟ | 124.80 ಅಡಿ |
| ಇಂದಿನ ಮಟ್ಟ | 110.60 ಅಡಿ |
| ಗರಿಷ್ಠ ಸಾಮರ್ಥ್ಯ | 49.452 ಟಿಎಂಸಿ |
| ಇಂದಿನ ಸಾಮರ್ಥ್ಯ | 32.330 ಟಿಎಂಸಿಳ |
| ಒಳ ಹರಿವು | 36,674 ಕ್ಯೂಸೆಕ್ |
| ಹೊರ ಹರಿವು | 2,361 ಕ್ಯೂಸೆಕ್ |
ಕಬಿನಿ ಜಲಾಶಯದ ನೀರಿನ ಮಟ್ಟ ಎಷ್ಟು?
ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದಿಂದ 36 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಈಗಾಗಲೇ ಕಬಿನಿ ಜಲಾಶಯದಿಂದ ಕಳೆದ 7 ದಿನಗಳಿಂದ ದಿನನಿತ್ಯ 20 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ನಂತರ ಅದು 25 ಸಾವಿರ ಕ್ಯೂಸೆಕ್, 30 ಸಾವಿರ ಕ್ಯೂಸೆಕ್ ಬಿಡಲಾಗುತ್ತಿತ್ತು. ಇದೀಗ 36 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇನ್ನೂ ಒಂದು ವಾರಗಳ ಕಾಲ ಮಳೆ ಹೆಚ್ಚಳವಾಗಲಿದ್ದು, ಮತ್ತಷ್ಟು ಒಳಹರಿವು ಹೆಚ್ಚುವ ಸಂಭವ ಇರುವುದರಿಂದ ಜಲಾಶಯದ ಹೊರ ಹರಿವು ಹೆಚ್ಚಾಗುವ ನಿರೀಕ್ಷೆ ಇದೆ.
ಇಂದಿನ ಭದ್ರಾ ಜಲಾಶಯದ ನೀರಿನ ಮಟ್ಟ
ಒಳ ಹರಿವು : 34544 ಕ್ಯೂಸೆಕ್
ಹೊರ ಹರಿವು : 169 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 148 .6 ಅಡಿ
ಒಟ್ಟು ಸಂಗ್ರಹ ಸಾಮರ್ಥ್ಯ: 71.5 ಟಿಎಂಸಿ
ಇಂದಿನ ಸಂಗ್ರಹ: 33.112 ಟಿಎಂಸಿ
ಇಂದಿನ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ
ಒಳ ಹರಿವು : 53366 ಕ್ಯೂಸೆಕ್
ಹೊರ ಹರಿವು : 0000 ಕ್ಯೂಸೆಕ್
ಗರಿಷ್ಟ ಮಟ್ಟ : 1819 ಅಡಿ
ಇಂದಿನ ಮಟ್ಟ : 1784.70 ಅಡಿ
ಒಟ್ಟು ಸಂಗ್ರಹ ಸಾಮರ್ಥ್ಯ : 151.64 ಟಿಎಂಸಿ
ಇಂದಿನ ಸಂಗ್ರಹ: 62.86 ಟಿಎಂಸಿ
ಇಂದಿನ ಹೇಮಾವತಿ ಜಲಾಶಯದ ನೀರಿನ ಮಟ್ಟ
ಇಂದಿನ ಮಟ್ಟ - 2909.15 ಅಡಿ
ಗರಿಷ್ಠ ಮಟ್ಟ - 2922 ಅಡಿ
ಒಟ್ಟು ಸಂಗ್ರಹ ಸಾಮರ್ಥ್ಯ - 37.103 ಟಿಎಂಸಿ
ಇಂದಿನ ಸಂಗ್ರಹ - 26.047 ಟಿಎಂಸಿ
ಒಳಹರಿವು - 25862 ಕ್ಯೂಸೆಕ್
ಹೊರಹರಿವು - 250 ಕ್ಯೂಸೆಕ್












Click it and Unblock the Notifications