Rain Alert: ಮಳೆ.. ಮಳೆ.. ಬೆಂಗಳೂರಲ್ಲಿ ಮಳೆ ಗ್ಯಾರಂಟಿ!
ಎಲ್ಲಿ ನೋಡಿದರು ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ಟ್ಯಾಂಕರ್ ನೀರು ಬೇಕು ಅಂದ್ರೆ 3000 ರೂಪಾಯಿಗೂ ಹೆಚ್ಚು ಹಣ ಕೊಡಬೇಕಿದೆ ಎಂಬ ಆರೋಪವೂ ಕೇಳಿಬಂದಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಜನರು ಕೂಡ ಆಕ್ರೋಶ ಹೊರಹಾಕುತ್ತಿದ್ದು, ಮಳೆರಾಯ ಬೇಗ ಬಾರಪ್ಪ ಅಂತಾ ಬೇಡಿಕೊಳ್ಳುತ್ತಿದ್ದರು. ಹೀಗಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಮಳೆರಾಯನ ಎಂಟ್ರಿ ಆಗುತ್ತಿದೆ.
ನೀರು.. ನೀರು.. ನೀರು.. ಹೀಗೆ ಜನ ಇದೀಗ ರೋಡಲ್ಲಿ ಚಿನ್ನ ಸಿಕ್ಕಿದರೂ ತಲೆಕೆಡಿಸಿಕೊಂಡು ನಿಲ್ಲೋದಿಲ್ಲ ಅಂತಾ ಕಾಣುತ್ತೆ. ಅದೇ ನೀರು ಸಿಕ್ಕರೆ ಎಂತಹ ಗಲಾಟೆ ಆದ್ರೂ ಬಿಲ್ಲ ಅಂತಾನೂ ಕಾಣುತ್ತೆ. ಯಾಕಂದ್ರೆ ನೀರಿಗಾಗಿ ಫೈಟಿಂಗ್ ಆ ರೇಂಜ್‌ಗೆ ಇದೆ. ಮಳೆ ಬರಲಿಲ್ಲ, ಸರಿಯಾಗಿ ಕೆರೆ, ಕುಂಟೆ, ನದಿ & ಡ್ಯಾಂ ತುಂಬಿಲ್ಲ ಎಂಬ ಕಾರಣಕ್ಕೆ ಕನ್ನಡಿಗರು ಸಂಕಷ್ಟ ಎದುರಿಸುವಂತಾಗಿದೆ. ಆದರೆ ಇದೇ ಸಮಯದಲ್ಲಿ ಮಳೆ ವಿಚಾರವಾಗಿ ಸಿಹಿಸುದ್ದಿ ಕನ್ನಡದ ಜನರಿಗೆ ಸಿಕ್ಕಿದೆ! ಅದ್ರಲ್ಲೂ ನೀರಿನ ಸಮಸ್ಯೆ ಕಾರಣಕ್ಕೆ ವಿಲವಿಲ ಒದ್ದಾಡಿರುವ ನಮ್ಮ ಬೆಂಗಳೂರಿಗೆ ಭರ್ಜರಿ ಸುದ್ದಿಯೇ ಸಿಕ್ಕಂತಾಗಿದೆ.

ತಕ್ಷಣ ಭರ್ಜರಿ ಮಳೆ ಬರಬೇಕು!
ಕರ್ನಾಟಕದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಎದುರಾದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಈ ಬರ ಇನ್ನೂ ಹಲವು ತಿಂಗಳು ಮುಂದುವರಿಯುತ್ತೆ ಎಂಬ ಭಯ ಆವರಿಸಿತ್ತು. ಈ ಕಾರಣಕ್ಕೆ, ತಕ್ಷಣವೇ ಮಳೆ ಬರಬೇಕು ಅಂತಾ ಹೇಳಿದ್ದರು ತಜ್ಞರು. ಅದೇ ರೀತಿ ಈಗ ಮಳೆಯ ಆಗಮನ ಆಗ್ತಿದೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳೋದು ಗ್ಯಾರಂಟಿ ಆಗಿದೆ. ಹೀಗೆ ಬೆಂಗಳೂರಲ್ಲಿ ಮಳೆ ಬರಲಿದೆ ಅಂತಾ, ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ನೀಡಿದೆ. ಏಪ್ರಿಲ್ 9ರಿಂದ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ಮಳೆ ಯಾವಾಗ?
ಏಪ್ರಿಲ್ 6 ರಂದು ಅಂದರೆ ಇಂದು ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ ಇದೆ ಎಂದು, ಹವಾಮಾನ ಇಲಾಖೆ ಇದೀಗ ಮಾಹಿತಿ ನೀಡಿದೆ. ಇದರ ಜೊತೆಯಲ್ಲಿ ಏಪ್ರಿಲ್ 8ಕ್ಕೆ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ಮಂಡ್ಯ, ಶಿವಮೊಗ್ಗ & ಮೈಸೂರು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಮತ್ತೊಂದ್ಕಡೆ, ರಾಜಧಾನಿ ಬೆಂಗಳೂರಲ್ಲಿ ಏಪ್ರಿಲ್ 9ರ ನಂತರ ಅಥವಾ ಏಪ್ರಿಲ್ 9ರಿಂದಲೇ ಮಳೆಯ ಅಬ್ಬರ ಶುರುವಾಗಲಿದೆ ಎನ್ನಲಾಗಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಮಳೆ ಬಂದು ನೆಲ ತಂಪಾಗಲಿ. ನೀರಿನ ಸಮಸ್ಯೆಗೆ ಇದೀಗ ಒಂದು ಮುಕ್ತಿ ಸಿಗಲಿ ಅನ್ನೋದೆ ಪ್ರತಿಯೊಬ್ಬರ ಬೇಡಿಕೆ. ಆದರೆ ಈ ಬೇಡಿಕೆ ಈಡೇರುತ್ತದಾ ಅಂತಾ ಕಾದು ನೋಡಬೇಕಿದೆ. ಯಾಕಂದ್ರೆ ಪ್ರಕೃತಿ ಮಾತೆ ಮನುಷ್ಯರು ಮಾಡುತ್ತಿರುವ ಈ ದೌರ್ಜನ್ಯದಿಂದ ಕೋಪಗೊಂಡ ರೀತಿ ಕಾಣುತ್ತಿದ್ದು, ಇಡೀ ಪ್ರಪಂಚ ಹಲವು ರೀತಿ ಪ್ರಾಕೃತಿಕ ವಿಕೋಪ ಎದುರಿಸುತ್ತಿದೆ.
ಮಳೆ ಬರುತ್ತಾ? ಮಳೆ ಬರಲ್ವಾ?
ಹೌದು, ಮಳೆ ಬರದೇ ಇದ್ದರೆ ಕನ್ನಡಿಗರ ಪರಿಸ್ಥಿತಿ ವ್ಯತಿರಿಕ್ತ ಆಗಲಿದೆ. ಯಾಕಂದ್ರೆ ಇದೀಗ ಕರ್ನಾಟಕದ ಬಹುತೇಕ ನದಿ & ಕೆರೆ ಸೇರಿದಂತೆ ಜಲ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಮಳೆ ಬರಲೇಬೇಕು ದೇವರೆ ಅಂತಾ ಕಾಯುತ್ತಿದ್ದಾರೆ ಕನ್ನಡಿಗರು. ಹೀಗಿದ್ದಾಗ ಭರ್ಜರಿಯಾದ ಸುದ್ದಿಯನ್ನ ಹವಾಮಾನ ಇಲಾಖೆ ಕೊಟ್ಟಿದೆ. ಈಗಾಗಲೇ ಕೊಡಗು, ಚಿಕ್ಕಮಗಳೂರು ಸೇರಿ ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಒಂದೊಂದು ಭಾರಿ ಮಳೆ ಬಿದ್ದಿದೆ. ಈಗ, ಇಡೀ ಕರ್ನಾಟಕದಲ್ಲಿ ಮಳೆ ಅಬ್ಬರಿಸಲಿದೆ ಎನ್ನಲಾಗುತ್ತಿದೆ. ಈ ನಡುವೆ ಕಳೆದ ತಿಂಗಳು ಕೂಡ ಇದೇ ರೀತಿ ಮಳೆ ಬೀಳುವ ಮುನ್ಸುಚನೆ ಹವಾಮಾನ ತಜ್ಞರಿಂದ ಸಿಕ್ಕಿತ್ತು. ಆದರೂ ಮಳೆ ಬೀಳಲೇ ಇಲ್ಲ! ಈ ಬಾರಿ ಕೂಡ ಹಂಗೆ ಆಗುತ್ತಾ? ಕಾದು ನೋಡಬೇಕು.
ಕನ್ನಡಿಗರ ಆಸೆಯನ್ನ ವರುಣ ದೇವ...
ಕರ್ನಾಟಕದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಎದುರಾದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೂ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಈ ಬರ ಇನ್ನೂ ಹಲವು ತಿಂಗಳು ಮುಂದುವರಿಯುತ್ತೆ ಎಂಬ ಭಯ ಆವರಿಸಿತ್ತು. ಈ ಕಾರಣಕ್ಕೆ ತಕ್ಷಣಕ್ಕೆ ಮಳೆ ಬರಬೇಕು ಅಂತಾ ಹೇಳಿದ್ದರು ತಜ್ಞರು. ಅದೇ ರೀತಿ ಈಗ ಮಳೆಯ ಆಗಮನ ಆಗಿದೆ. ಅದರಲ್ಲೂ ಕಾವೇರಿ ನದಿಯ ತವರು ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಂದು, ಭೂಮಿ ಕೆಸರಾಗಿದೆ. ಕಾವೇರಿ ತಾಯಿಯ ಒಡಲಿಗೂ ಭರ್ಜರಿ ನೀರು ಸೇರ್ಪಡೆಯಾಗಿದೆ. ಈ ರೀತಿ ಕರ್ನಾಟಕದ ವಿವಿಧ ಪ್ರದೇಶದಲ್ಲೂ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮಳೆ ಬಂದ್ರೆ ಸಾಕಪ್ಪಾ ಅಂತಿದ್ದಾರೆ ಜನ. ಕನ್ನಡಿಗರ ಆಸೆಯನ್ನ ವರುಣ ದೇವ ಈಡೇರಿಸುತ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ.
ಕರ್ನಾಟಕದ ಪರಿಸ್ಥಿತಿ ಈಗ ಹೇಗಿದೆ?
ಮಳೆ ಬರಬೇಕಿದೆ, ಮಳೆ ಬರದೇ ಇದ್ದರೆ ಪರಿಸ್ಥಿತಿ ಕಷ್ಟವಾಗಲಿದೆ. ಅದರಲ್ಲೂ ಕರ್ನಾಟಕದ ಜನರಿಗೆ ಮಳೆ ಬರದೇ ಇದ್ದರೆ ಪರಿಸ್ಥಿತಿ ಕುತ್ತಿಗೆಗೆ ಬಂದು ಕೂರಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ದೊಡ್ಡ ದೊಡ್ಡ ನಗರಗಳಲ್ಲಿ ಕುಡಿವ ನೀರಿಗೆ ಸಮಸ್ಯೆ ಈಗ ಕಾಡತೊಡಗಿದೆ. ಮಳೆ ಬರದೇ ಇದ್ದರೆ ಕನ್ನಡಿಗರ ಪರಿಸ್ಥಿತಿ ವ್ಯತಿರಿಕ್ತ ಆಗಲಿದೆ. ಯಾಕಂದ್ರೆ ಇದೀಗ ಕರ್ನಾಟಕದ ಬಹುತೇಕ ನದಿ & ಕೆರೆ ಸೇರಿದಂತೆ ಜಲ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಮಳೆ ಬರಲೇಬೇಕು ದೇವರೆ ಅಂತಾ ಕಾಯುತ್ತಿದ್ದಾರೆ ಕನ್ನಡಿಗರು. ಹೀಗಿದ್ದಾಗಲೇ, ಭರ್ಜರಿ ಸುದ್ದಿಯನ್ನ ಹವಾಮಾನ ಇಲಾಖೆ ಕೊಟ್ಟಿದೆ. ಕೊಡಗು, ಚಿಕ್ಕಮಗಳೂರು ಸೇರಿ ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬಿದ್ದಿದೆ. ಈಗ ಇಡೀ ಕರ್ನಾಟಕದಲ್ಲಿ ಮಳೆ ಅಬ್ಬರಿಸುತ್ತೆ ಎನ್ನಲಾಗುತ್ತಿದೆ.
ನೀರು ಬೇಕೆಂದು ತಮಿಳುನಾಡು ಕಿರಿಕ್!
ಒಂದ್ಕಡೆ ಕಳೆದ ವರ್ಷ, ಅಂದ್ರೆ 2023ರಲ್ಲಿ ಕರ್ನಾಟಕದಲ್ಲಿ ಸರಿಯಾಗಿ ಮಳೆಯೇ ಬಂದಿಲ್ಲ ಎಂಬ ಕೊರಗು ಕಾಡುತ್ತಿತ್ತು. ಈ ನಡುವೆಯು ತಮಿಳುನಾಡು ಬೇರೆ ನೀರಿಗಾಗಿ ಭಾರಿ ಕಿರಿ, ಕಿರಿ ಮಾಡಿತ್ತು. ಹೀಗಾಗಿ ಕರ್ನಾಟಕ ಕೂಡ ಸಾಕಷ್ಟು ಪ್ರಮಾಣದ ನೀರನ್ನು ತಮಿಳುನಾಡು ರಾಜ್ಯಕ್ಕೆ ಹರಿಸಿತ್ತು. ಇಷ್ಟೆಲ್ಲದರ ಪರಿಣಾಮ ಇದೀಗ ಬೆಂಗಳೂರಿಗೂ ಮುಂದಿನ ದಿನಗಳಲ್ಲಿ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ. ಆದ್ರೆ ಕರ್ನಾಟಕದ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ 3 ತಿಂಗಳಿಗೆ ಆಗುವಷ್ಟು ನೀರು ಇದೆ ಎಂದು ಸರ್ಕಾರದಿಂದ ಮಾಹಿತಿ ಸಿಗುತ್ತಿದೆ. ಹೀಗಾಗಿ ಬೆಂಗಳೂರಿಗರು ಸೇರಿದಂತೆ ಹಳೇ ಮೈಸೂರು ಭಾಗದ ಜನರು ಇದರಿಂದ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ
ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ ಬೆಂಗಳೂರು ನಗರ, ಬೆಂಗಳೂರು ಗ್ರಾಂ. ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು & ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಖುಷಿ ಕೊಟ್ಟಿದೆ. ಹಾಗೇ ಇಂದು ಕೂಡ ಭರ್ಜರಿ ಮಳೆ ಬಿದ್ದಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳುತ್ತೆ ಎಂಬ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಬೀಳಲಿದೆ ಎನ್ನಲಾಗಿದೆ. ಹೀಗಾಗಿ ಜನರು ಕೂಡ ಫುಲ್ ಖುಷ್ ಆಗಿದ್ದಾರೆ.












Click it and Unblock the Notifications