Heavy Rain: ಮಳೆ.. ಮಳೆ.. ಮುಂದಿನ 24 ಗಂಟೆ ಭಾರಿ ಮಳೆ!

ಮಳೆ.. ಮಳೆ.. ಮಳೆಯ ಅಬ್ಬರ ಎಲ್ಲೆಲ್ಲೂ ಜೋರಾಗಿದೆ. ನಿನ್ನೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ಹಾಗೇ ಮುಂಗಾರು ಮಾರುತಗಳ ಅಬ್ಬರ ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗಿದ್ದಾಗಲೇ ಮತ್ತೊಂದು ಗುಡ್ ನ್ಯೂಸ್ ಸಿಕಿದ್ದು, 24 ಗಂಟೆ ಅವಧಿಯಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಬರಲಿದೆ?

ಮುಂಗಾರು ಮಳೆ ಇಷ್ಟು ಬೇಗ ಕರ್ನಾಟಕಕ್ಕೆ ಬರಲಿದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೂ ಮುಂಗಾರು ಕರ್ನಾಟಕ ಪ್ರವೇಶ ಮಾಡಿ ಅಬ್ಬರಿಸುತ್ತಿದ್ದು, ಬೆಂಗಳೂರಿಗೆ 15 ದಿನ ಮೊದಲೇ ಮುಂಗಾರು ಮಳೆಯ ಆಗಮನ ಆಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಇನ್ನೂ ಹಲವಾರು ದಿನಗಳ ಕಾಲ ಇದೇ ರೀತಿ, ಭರ್ಜರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕದ ಈ ಪ್ರದೇಶಗಳಿಗೆ ಮುಂದಿನ 24 ಗಂಟೆ ಅವಧಿಯಲ್ಲಿ ಭಾರಿ & ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Heavy Rain Is Expected In Karnataka For Next 24 Hours In These Places Of Karnataka

ಯಾವ ಜಿಲ್ಲೆಗಳಲ್ಲಿ ಭರ್ಜರಿ ಮಳೆ?

ನಿನ್ನೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದಿಢೀರ್ ಶುರುವಾದ ಮುಂಗಾರು ಮಳೆ ಇಂದು ಕೂಡ ಮುಂದುವರಿಯಲಿದೆ. ಅದರಲ್ಲೂ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಸೇರಿ ಮಂಡ್ಯ, ಮೈಸೂರು, ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ. ಹಾಗಾದರೆ ರಾಜಧಾನಿ ಬೆಂಗಳೂರಿನ ಕಥೆ ಏನು? ಮುಂದೆ ಓದಿ.

ಬೆಂಗಳೂರಿನಲ್ಲೂ ಭಾರಿ ಮಳೆ

ಬೆಂಗಳೂರಿಗೂ & ಭರ್ಜರಿ ಮಳೆಗೂ ಭಾರಿ ನಂಟು ಇದೆ. ಹೀಗಾಗಿಯೇ ಪ್ರತಿಬಾರಿ ಮಳೆಯ ಆಗಮನ ಆದಾಗಲೂ ಬೆಂಗಳೂರಿನಲ್ಲಿ ವರುಣದೇವ ಅಬ್ಬರಿಸುತ್ತಾನೆ. 2024ರಲ್ಲೂ ಹೀಗೆ, ಭರ್ಜರಿ ಮಳೆಯ ಸಿಂಚನ ಬೆಂಗಳೂರಿಗೆ ಆಗಲಿದೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸೇರಿ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸಲಿದ್ದಾನೆ. ಮುಂದಿನ 24 ಗಂಟೆ ಅವಧಿಯಲ್ಲಿ ಭಾರಿ ಮಳೆ ಬರುವುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಮುಂದಿನ ಹಲವು ವಾರಗಳ ಕಾಲ...

ಒಟ್ನಲ್ಲಿ ಭರ್ಜರಿ ಮಳೆ ಬರುತ್ತಿರುವುದು ಕನ್ನಡಿಗರಿಗೆ ಈಗ ಒಂದು ಸಿಹಿಸುದ್ದಿ ನೀಡುತ್ತಿದೆ. ಮಳೆ ಇಲ್ಲದೆ ಸೊರಗಿದ್ದ, ಕರ್ನಾಟಕದ ಜನರಿಗೆ ಮಳೆರಾಯ ಕಳೆದ ಒಂದು ತಿಂಗಳಿಂದ ಭಾರಿ ದೊಡ್ಡ ಕೊಡುಗೆ ನೀಡಿದ್ದಾನೆ. ಅದರಲ್ಲೂ ಭರ್ಜರಿ ಮಳೆಗೆ, ಕರ್ನಾಟಕದ ಪ್ರತಿಯೊಂದು ಜಿಲ್ಲೆ ಕೂಡ ತಂಪಾಗಿದೆ. ಹೀಗಿದ್ದಾಗ ಮುಂಗಾರು ಮಳೆ ಮೋಡಗಳು ಕರ್ನಾಟಕ ಕಡೆ ಓಡೋಡಿ ಬರುತ್ತಿದ್ದು ಮುಂದಿನ ಹಲವು ವಾರಗಳ ಕಾಲ ಇದೇ ರೀತಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+