Heavy Rain: ಮುಂದಿನ 10 ದಿನ ಮಳೆ.. ಮಳೆ.. ಭರ್ಜರಿ ಮಳೆ!

ಮಳೆ.. ಮಳೆ.. ನಿನ್ನೆ ಇಡೀ ಕರ್ನಾಟಕ ಮಳೆಯಲ್ಲಿ ಮಿಂದು ಹೋಗಿತ್ತು. ಅದರಲ್ಲೂ, 2024 ರಲ್ಲಿ ಬಿದ್ದ ಅತ್ಯಂತ ಜೋರು ಮಳೆ ಇದೇ ಆಗಿದೆ ಎನ್ನಬಹುದು. ಹೀಗೆ ಭಾರಿ ಭರ್ಜರಿ ಮುಂಗಾರು ಮಳೆ ಜನರಿಗೆ ಒಂದಷ್ಟು ನೆಮ್ಮದಿ ತಂದಿದೆ. ಯಾಕಂದ್ರೆ ಕೆರೆ, ನದಿ, ಹಳ್ಳಗಳ ನೀರಿನ ಹರಿವು ಹೆಚ್ಚಾಗಿದೆ. ಹೀಗಿದ್ದಾಗ ಮುಂದಿನ 10 ದಿನಗಳ ಕಾಲ ಕರ್ನಾಟಕದಲ್ಲಿ ಭಾರಿ ಭರ್ಜರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬರಲಿದೆ? ಮುಂದೆ ಓದಿ.

ಮಳೆ ಇಲ್ಲದೆ ಮನುಷ್ಯರ ಬದುಕು ಊಹೆಗೂ ನಿಲುಕದು. ಯಾಕಂದ್ರೆ ಮನುಷ್ಯರ ಬಹು ಮುಖ್ಯ ಅಂಶ ಅಂದ್ರೆ ನೀರು. ಹೀಗಾಗಿ ನೀರು ಇಲ್ಲದೆ ಮನುಷ್ಯರು ಏನೂ ಮಾಡಲು ಆಗೋದಿಲ್ಲ. ಆದ್ರೆ ಮನುಷ್ಯ ತಾನೇ ಮಾಡಿಕೊಂಡಿದ್ದ ತಪ್ಪುಗಳಿಂದ ಸಾಕಷ್ಟು ಸಮಸ್ಯೆ ಎದುರಿಸುವ ವಾತಾವರಣ ನಿರ್ಮಾಣ ಆಗಿದೆ. ಸರಿಯಾದ ಸಮಯಕ್ಕೆ ಮಳೆಯೇ ಬೀಳುತ್ತಿಲ್ಲ. ಬಿಸಿಲು & ಬಿಸಿ ಗಾಳಿ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮನುಷ್ಯರು ಪರದಾಡುತ್ತಿದ್ದು ನೀರಿಗೆ ಯುದ್ಧವೇ ನಡೆಯುತ್ತೇನೋ.? ಎಂಬ ಭಯವು ಕೂಡ ಆವರಿಸಿತ್ತು. ಇದೇ ಸಮಯದಲ್ಲಿ ಸರಿಯಾಗಿ ಭರ್ಜರಿ ಮಳೆ ಬರುತ್ತಿದ್ದು, ಕಾವೇರಿ ನದಿ ಸೇರಿದಂತೆ ಹಲವು ಡ್ಯಾಂಗಳು ತುಂಬುತ್ತಿವೆ. ಹಾಗೇ ಮುಂದಿನ 10 ದಿನ ಕಾಲ ಮಳೆ ಸುರಿಯುವ ಜಿಲ್ಲೆಗಳ ಪಟ್ಟಿ ಮುಂದೆ ಇದೆ.

Heavy Rain Is Expected In Karnataka For Next 10 Days From June 3 Of 2024

ಭರ್ಜರಿ ಮಳೆ ಬೀಳಲಿರುವ ಜಿಲ್ಲೆಗಳು

ಈಗಿನ ಮಾಹಿತಿ ಪ್ರಕಾರ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು & ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆ ಸೇರಿ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಿಗೆ ಭರ್ಜರಿ ಮಳೆ ಆಗಲಿದೆ.

ಅದ್ರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಭಾರಿ ಮಳೆ ಸಿಂಚನ ಆಗಲಿದ್ದು, ಈ ಮೂಲಕ ಕನ್ನಡ ನಾಡಿನ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ ಮತ್ತೊಂದು ಕಡೆ ಬೇಸಿಗೆ ಬಿಸಿಲಿಗೆ ಒಣಗಿ ಹೋಗಿದ್ದ ಕರ್ನಾಟಕದ ನದಿಗಳಿಗು ಜೀವಕಳೆ ಬರುತ್ತಿದೆ. ಇದೇ ರೀತಿ ಇನ್ನೂ ಒಂದು ವಾರ ಮಳೆ ಬಂದರು ಸಾಕು ಕರ್ನಾಟಕದ ಹಳ್ಳಿ ಹಳ್ಳಿಗಳ ನೀರಿನ ದಾಹ ನೀಗಲಿದೆ. ಹಾಗೇ ರಾಜ್ಯದ ಬಹುತೇಕ ಕೆರೆ & ಕಟ್ಟೆಗಳು ಹಾಗೂ ಡ್ಯಾಂಗಳು ತುಂಬುವ ನಿರೀಕ್ಷೆ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+