ಕರ್ನಾಟಕ ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿದೆ ಭಾರೀ ಮಳೆ

ಬೆಂಗಳೂರು, ಜುಲೈ 19: ಸಾಮಾನ್ಯವಾಗಿ ಕರ್ನಾಟಕ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಮಳೆ ಸುರಿದರೂ ಈ ಬಾರಿಯ ಮುಂಗಾರಿನಲ್ಲಿ ಮಾತ್ರ ಅಷ್ಟಾಗಿ ಮಳೆ ಸುರಿದಿರಲಿಲ್ಲ. ಆದರೆ ಕಳೆದೆರಡು ದಿನಗಳಿಂದ ಮಂಗಳೂರು, ಕಾರವಾರ, ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆ ಬೀಳುತ್ತಿದೆ.

ಕಳೆದ 24 ಗಂಟೆಗಳಿಂದ ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಅತೀ ಹೆಚ್ಚು 19.9 ಸೆಂಟಿ ಮೀಟರ್ ಮಳೆಯಾಗಿದೆ. ಸೋಮವಾರ ಮತ್ತು ಮಂಗಳವಾರ ಮಂಗಳೂರಿನಲ್ಲಿ 4.7 ಸೆಂಟಿ ಮೀಟರ್ ಮಳೆ ಬಿದ್ದಿದ್ದರೆ ಕಾರವಾರದಲ್ಲಿ 3.6 ಸೆಂಟಿ ಮೀಟರ್ ಮಳೆ ಸುರಿದಿದೆ. ಮಡಿಕೇರಿಯಲ್ಲಿ 2.7 ಸೆಂಟಿ ಮೀಟರ್ ಹಾಗೂ ಹೊನ್ನಾವರದಲ್ಲಿ 7 ಮಿಲಿಮೀಟರ್ ಮಳೆಯಾಗಿದೆ.

ಸಮೀಪದ ಕೇರಳ ಕರಾವಳಿಯಲ್ಲೂ ಭರ್ಜರಿ ಮಳೆಯಾಗುತ್ತಿದೆ. ಕಣ್ಣೂರಿನಲ್ಲಿ 3.6 ಸೆಂ.ಮೀ, ಕರಿಪುರ್ 3.6 ಸೆಂ.ಮೀ, ಕೊಚ್ಚಿ 3.2 ಸೆಂ.ಮೀ, ಕೋಝಿಕ್ಕೋಡ್ 2.3 ಸೆಂ.ಮೀ ಮಳೆಯಾಗಿದೆ.

ಇನ್ನು ಮುಂದಿನ ಕೆಲವು ದಿನಗಳಲ್ಲಿ ಕರಾವಳಿ ಕರ್ನಾಟಕ ಮತ್ತು ಕೇರಳ ಕರಾವಳಿಯಲ್ಲಿ ಹೆಚ್ಚಿನ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡುವ ಸ್ಕೈಮೆಟ್ ವೆದರ್ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+