Rain Alert: ಮಳೆ.. ಮಳೆ.. ಮತ್ತೆ ಮಳೆಯ ಎಚ್ಚರಿಕೆ! ಬೆಚ್ಚಿ ಬಿದ್ದ ಜನರು...
ಮಳೆಗಾಲ ಮುಗಿದು ಹೋಗುತ್ತಿದ್ದರೂ ಜನರಿಗೆ ಮಾತ್ರ ನೆಮ್ಮದಿಯೇ ಇಲ್ಲವಾಗಿದೆ. ಯಾಕಂದ್ರೆ ಭೂಮಿ ಮೇಲೆ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿರುವ ಕಾರಣ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಈ ಹಿನ್ನೆಲೆ ಸಕಾಲಿಕ ಮಳೆ ಅಂದ್ರೆ ಕಾಲ ಕಾಲಕ್ಕೆ ಸರಿಯಾಗಿ ಮಳೆಯು ಬೀಳುತ್ತಿಲ್ಲ, ಬದಲಾಗಿ ಅಕಾಲಿ ಮಳೆ ಅಂದ್ರೆ ಯಾವುದೋ ಕಾಲದಲ್ಲಿ ಮಳೆ ಸುರಿಯುವಂತೆ ಆಗಿದೆ. ಇದು ಜನರನ್ನು ಕೂಡ ಕಂಗಾಲಾಗುವ ರೀತಿ ಮಾಡಿದೆ. ಇದೇ ಸಮಯದಲ್ಲಿ ಮತ್ತೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹಾಗಾದ್ರೆ ಯಾವ ಯಾವ ಭಾಗದಲ್ಲಿ ಭರ್ಜರಿ ಮಳೆ ಬೀಳಲಿದೆ?
ಮಳೆ ಯಾಕೆ ಇಷ್ಟು ಜೋರಾಗಿ ಬೀಳುತ್ತಿದೆ? ಮಳೆಗಾಲ ಮುಕ್ತಾಯ ಆಗಿದೆಯಲ್ವಾ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಮುಂಗಾರು ಮಳೆ ಮುಕ್ತಾಯ ಅಗಿದೆ ನಿಜ ಆದರೆ ಹಿಂಗಾರು ಮಳೆಯ ಪ್ರಭಾವ ಇನ್ನೂ ಉಳಿದಿದೆ. ಹೀಗಾಗಿ ಕರ್ನಾಟಕ ರಾಜ್ಯದ ಹಲವು ಕಡೆ ಹಿಂಗಾರು ಮಳೆ ಅಬ್ಬರ ಜೋರಾಗುತ್ತಿದೆ.

ಕಳೆದ 2 ವಾರ ಭಾರಿ ಮಳೆಯ ಪರಿಣಾಮ ಕನ್ನಡಿಗರು ಈ ಕಾರಣಕ್ಕೆ ಬೆಚ್ಚಿಬಿದ್ದರು. ಅಲ್ಲದೆ ರೈತರು ಬೆಳೆದಿದ್ದ ಬೆಳೆ ಕೂಡ ಕೈಗೆ ಸಿಗದ ಪರಿಸ್ಥಿತಿ ಈಗ ನಿರ್ಮಾಣ ಆಗಿತ್ತು. ಹೀಗಿದ್ದಾಗಲೇ ಮತ್ತೆ ಭರ್ಜರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ ಹವಾಮಾನ ಇಲಾಖೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಭರ್ಜರಿ ಮಳೆ ಸುರಿಯಲಿದೆ?
ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿಯಾಗಿ ಹಿಂಗಾರು ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಕರ್ನಾಟಕ ರಾಜ್ಯದ 6 ಜಿಲ್ಲೆಗಳಲ್ಲಿ ಮಳೆರಾಯ ಭರ್ಜರಿ ಅಬ್ಬರ ತೋರಿಸುವ ಬಗ್ಗೆ ವಾರ್ನಿಂಗ್ ಕೊಡಲಾಗಿದೆ. ಈ ಸುದ್ದಿ, ಕನ್ನಡ ನಾಡಿನ ಜನರನ್ನು ಮತ್ತೆ ಬೆಚ್ಚಿ ಬೀಳಿಸಿದೆ. ಕೇವಲ 6 ಜಿಲ್ಲೆಗಳಲ್ಲಿ ಮಾತ್ರವಲ್ಲ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ತೋರಲಿದೆ. ಹಾಗಾದ್ರೆ ಭಾರಿ ಮಳೆ ಬೀಳಲಿರುವ ಜಿಲ್ಲೆಗಳು ಯಾವುವು? ಮುಂದೆ ಓದಿ.
ಅಂದಹಾಗೆ ನವೆಂಬರ್ 9ರಿಂದ ಒಟ್ಟು 3 ದಿನಗಳ ಕಾಲ ಭಾರಿ ಮಳೆ ಬೀಳಲಿದೆ ಎಂದು ಈಗ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆ ಮೈಸೂರು, ಕೋಲಾರ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎನ್ನಲಾಗಿದ್ದು ಹಳದಿ ಎಚ್ಚರಿಕೆಯನ್ನ ಅಂದ್ರೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮತ್ತೊಂದು ಕಡೆ ಬೆಂಗಳೂರು ಜನ ಕೂಡ ಮಳೆಯ ಕಾಟಕ್ಕೆ ನರಳುವುದು ಗ್ಯಾರಂಟಿ ಎನ್ನಲಾಗಿದೆ.
ಬೆಂಗಳೂರಿನ ಜನರಿಗೂ ಕಾಡಲಿದೆ ಮಳೆ!
ದಕ್ಷಿಣ ಕನ್ನಡ ಜಿಲ್ಲೆ ಸೇರಿ ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗೆ ಕೂಡ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಹಾಗೇ ಮತ್ತೊಂದು ಕಡೆ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಕೂಡ ಮಳೆರಾಯನ ಸಿಂಚನ ಆಗಲಿದ್ದು, ಜನರಿಗೆ ಚಿಂತೆ ಕೂಡ ಶುರುವಾಗಿದೆ. ಹೀಗಾಗಿ ಏನೇ ಬಾಕಿ ಕೆಲಸ ಇದ್ದರೂ ಇನ್ನೆರಡು ದಿನದಲ್ಲಿ ಮುಗಿಸಿಬಿಡಿ. ಇಲ್ಲ ಅಂದ್ರೆ ಮಳೆಯ ಕಾಟ ಎದುರಾಗುವುದು ಗ್ಯಾರಂಟಿ!












Click it and Unblock the Notifications