Rain Alert: ಮಳೆ.. ಮಳೆ.. ಮತ್ತೆ ಅಬ್ಬರಿಸಲಿದೆ ಭರ್ಜರಿ ಹಿಂಗಾರು ಮಳೆ!
ಮಳೆ ಆರ್ಭಟ ಕಡಿಮೆ ಆಗುತ್ತಲೇ ಇಲ್ಲ, ಅದರಲ್ಲೂ 2023ರ ಪೂರ್ತಿ ಭೀಕರ ಬರ ನೋಡಿ ನರಳಿ ಹೋಗಿದ್ದ ಕನ್ನಡಿಗರಿಗೆ 2024 ರಲ್ಲಿ ಕೂಡ ಇದೇ ರೀತಿ ಬರ ಪರಿಸ್ಥಿತಿ ಬರುತ್ತಾ? ಎಂಬ ಅನುಮಾನ ಮೂಡಿತ್ತು. ಆದರೆ 2024 ರಲ್ಲಿ ಭರ್ಜರಿ ಮುಂಗಾರು ಮಳೆ ಶುರುವಾಗಿತ್ತು. ಈ ರೀತಿ ಮೇ ತಿಂಗಳಲ್ಲೇ ಶುರುವಾಗಿದ್ದ ಮಳೆ ನಂತರ ಜೂನ್ & ಜುಲೈ ಪೂರ್ತಿ ಅಬ್ಬರಿಸಿತ್ತು. ಆ ನಂತರ ಆಗಸ್ಟ್ & ಸೆಪ್ಟಂಬರ್ ತಿಂಗಳಲ್ಲಿ ಸ್ವಲ್ಪ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದ ಮಳೆರಾಯ ಇದೀಗ ಅಕ್ಟೋಬರ್ ತಿಂಗಳಲ್ಲಿ ಬಡ್ಡಿ ಸಮೇತ ವಾಪಸ್ ಕೊಡುತ್ತಿದ್ದಾನೆ! ಹಾಗಾದರೆ ಮತ್ತೆ ಮಳೆ ಸುರಿಯಲಿರುವ ಜಿಲ್ಲೆಗಳು ಯಾವುವು?
ಮಳೆ ಇಲ್ಲದೆ ಕನ್ನಡಿಗರು ಇನ್ನೇನು ಕಂಗಾಲಾಗಿ ಕೂರುವ ಸಮಯದಲ್ಲೇ ಮಳೆರಾಯ ತನ್ನ ಕೋಪ ಕಡಿಮೆ ಮಾಡಿಕೊಂಡು, ಕರ್ನಾಟಕದ ಮೇಲೆ ಕರುಣೆ ತೋರಿಸಿದ್ದ. ಇದೇ ಕಾರಣ ಕಳೆದ ಕೆಲವು ತಿಂಗಳು ನಿರಂತರವಾಗಿ ಮಳೆ ಸುರಿದಿತ್ತು. ಆದರೆ ಮುಂಗಾರು ಮಳೆ ಮುಗಿದು ಹೋಯ್ತು ಅಂತಾ ಗೊತ್ತಾದ ನಂತರ, ಮತ್ತೆ ಮಳೆ ಸುರಿಯುವುದಿಲ್ಲ ಈ ವರ್ಷ ಎನ್ನುವ ನಿರ್ಧಾರಕ್ಕೆ ಕನ್ನಡಿಗರು ಬಂದಿದ್ದರು. ಯಾಕಂದ್ರೆ ಸಾಮಾನ್ಯವಾಗಿ ಕರ್ನಾಟಕದಲ್ಲಿ ಹಿಂಗಾರು ಮಳೆ ಅಬ್ಬರಿಸುವುದು ಕಡಿಮೆ. ಆದರೆ 2024 ರಲ್ಲಿ ಆ ಮಾತು ಸುಳ್ಳಾಗುತ್ತಿದ್ದು, ಹಿಂಗಾರು ಮಳೆ ಕರ್ನಾಟಕದಲ್ಲಿ ಭರ್ಜರಿಯಾಗಿ ಸುರಿಯುತ್ತಿದೆ. ಹಾಗಾದ್ರೆ ಮಳೆ ಸುರಿಯುವ ಜಿಲ್ಲೆಗಳು ಯಾವುವು? ಮುಂದೆ ಓದಿ.

ನದಿ & ಡ್ಯಾಂಗಳು ತುಂಬಿ ತುಳುಕುತ್ತಿವೆ!
2023 ರಲ್ಲಿ ಸರಿಯಾಗಿ ಮಳೆ ಬಾರದ ಕಾರಣ 2024ರ ಜನವರಿ ತಿಂಗಳಲ್ಲೇ ಕನ್ನಡಿಗರು ಭಾರಿ ನೀರಿನ ಸಮಸ್ಯೆ ಎದುರಿಸಿದ್ದರು. ಕುಡಿಯುವ ನೀರಿಗೆ ಕೂಡ ದೊಡ್ಡ ಸಂಕಷ್ಟ ಎದುರಾಗಿ, ಏನು ಮಾಡುವುದು ಎಂಬ ಚಿಂತೆ ಶುರುವಾಗಿತ್ತು. ಹೀಗಿದ್ದಾಗಲೇ 2024ರ ಮೇ ತಿಂಗಳಲ್ಲೇ ಮಳೆ ಶುರುವಾಗಿ ಒಂದಷ್ಟು ನೆಮ್ಮದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಬಹುತೇಕ ಎಲ್ಲಾ ಡ್ಯಾಂಗಳು ಎರಡೆರಡು ಬಾರಿ ತುಂಬಿ ತುಳುಕಿವೆ. ಹಾಗೇ ಕೃಷಿಗೆ ಬೇಕಾದ ನೀರು ಸೇರಿದಂತೆ ಕುಡಿಯಲು ಕೂಡ ಭರ್ಜರಿ ನೀರು ಈಗ ಕರ್ನಾಟಕದಲ್ಲಿ ಸಂಗ್ರಹ ಆಗಿದೆ.
ಬೆಂಗಳೂರಿನಲ್ಲಿ ಭರ್ಜರಿ ಮಳೆ?
ಹೀಗಿದ್ದಾಗಲೇ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲೂ ಹಿಂಗಾರು ಮಳೆ ಅಬ್ಬರಿಸುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಮತ್ತೊಂದು ಕಡೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ & ಕೊಡಗು ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ ಸಿಗುತ್ತಿದೆ. ಈ ಮೂಲಕ ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆರಾಯ ಅಬ್ಬರಿಸುವುದು ಗ್ಯಾರಂಟಿ ಆಗುತ್ತಿದೆ.












Click it and Unblock the Notifications