Karnataka Rain: 24 ಗಂಟೆ ಕಾಲ ಭಾರಿ ಭರ್ಜರಿ ಮುಂಗಾರು ಮಳೆ, ಮುಂದಿನ ವಾರ ಪೂರ್ತಿ ಅಬ್ಬರಿಸಲಿದ್ದಾನೆ ವರುಣ!

ಮುಂಗಾರು ಮಳೆ ಅಬ್ಬರ ಬಲು ಜೋರಾಗಿದ್ದು ಎಲ್ಲೆಲ್ಲೂ ಮಳೆ ಆರ್ಭಟ ಮಿತಿ ಮೀರಿ ಹೋಗುತ್ತಿದೆ ಎನ್ನಬಹುದು. ಯಾಕಂದ್ರೆ ಕಳೆದ 2 ವಾರಗಳಿಂದ ನಿರಂತರ ಮಳೆಗೆ ಸುಸ್ತಾಗಿದ್ದ ಜನರಿಗೆ ಇದೀಗ ಮತ್ತೊಂದು ಸಂಚಲನ ಸೃಷ್ಟಿ ಮಾಡುವ ಸುದ್ದಿ ಸಿಕ್ಕಿದೆ. ಅದು ಏನಂದ್ರೆ ಮುಂದಿನ ಮತ್ತೊಂದು ವಾರ ಪೂರ್ತಿ ಮುಂಗಾರು ಮಳೆ ಭರ್ಜರಿಯಾಗಿ ಅಬ್ಬರಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ!

ಕರ್ನಾಟಕದ ಪಾಲಿಗೆ 2024ರ ಮುಂಗಾರು ಮಳೆ ಅದೃಷ್ಟ ತರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಯಾಕಂದ್ರೆ ಅಂದುಕೊಂಡ ರೀತಿಯಲ್ಲೇ ಇದೀಗ ಮುಂಗಾರು ಮಳೆ ಕರ್ನಾಟಕದಲ್ಲಿ ಬೀಳುತ್ತಿದ್ದು, ಮುಂಗಾರು ಮಳೆ ಈಗ ಫುಲ್ ಅಲರ್ಟ್ ಆಗಿದ್ದು, ಎಲ್ಲೆಲ್ಲೂ ಭಾರಿ ಮಳೆಯನ್ನು ಸುರಿಸುತ್ತಿದೆ. ಕರ್ನಾಟಕದ ಮಲೆನಾಡು, ಕರಾವಳಿ ಜಿಲ್ಲೆಗಳೂ ಸೇರಿ ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಭಾಗದಲ್ಲೂ ಭರ್ಜರಿಯಾಗಿ ಮಳೆ ಬೀಳುತ್ತಿದೆ. ಅದ್ರಲ್ಲೂ ಮುಂದಿನ 24 ಗಂಟೆಗಳಲ್ಲಿ ಮಳೆ ಅಬ್ಬರ ಮಿತಿ ಮೀರಲಿದ್ದು, ಭರ್ಜರಿ ಮಳೆ ಸುರಿಯುವ ಜಿಲ್ಲೆಗಳ ಪಟ್ಟಿ ಮುಂದೆ ಇದೆ ಓದಿ.

Heavy Rain Alert Given To These Districts Of Karnataka State For July 3rd Week

ಬೆಂಗಳೂರಲ್ಲಿ ಎಷ್ಟು ದಿನ ಮಳೆ ಬೀಳುತ್ತೆ?

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆ ಮಳೆ ಅಬ್ಬರಿಸುತ್ತಿದೆ. ಅದ್ರಲ್ಲೂ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮುಂಗಾರು ಮಳೆಯು ಬೀಳುತ್ತಿರುವ ಕಾರಣ ಜನಜೀವನ ಪೂರ್ಣ ಅಸ್ತವ್ಯಸ್ಥ ಸ್ಥಿತಿಗೆ ತಲುಪಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋದ ಸಮಯದಲ್ಲೇ, ಮುಂದಿನ 24 ಗಂಟೆಗಳಲ್ಲಿ ಮತ್ತೆ ಕರಾವಳಿ ಪ್ರದೇಶದಲ್ಲಿ ಘೋರ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಇದು ಮಾತ್ರವಲ್ಲ ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಸೇರಿದಂತೆ ಶಿವಮೊಗ್ಗ ಜಿಲ್ಲೆಗಳಿಗೆ ಆರಜೆಂಜ್ ಅಲರ್ಟ್ ನೀಡಲಾಗಿದೆ. ಹಾಗಾದ್ರೆ ಬೆಂಗಳೂರಿನ ಕಥೆ ಏನು? ಮಾಹಿತಿ ತಿಳಿಯಲು ಮುಂದೆ ಓದಿ.

ಬೆಂಗಳೂರು ನಗರದಲ್ಲಿ 1 ವಾರ ಮಳೆ!

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು & ಶಿವಮೊಗ್ಗ ಜಿಲ್ಲೆಗಳಿಗೆ ಮಾತ್ರವಲ್ಲದೆ ಮುಂದಿನ 24 ಗಂಟೆ ಕಾಲ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ದಾವಣಗೆರೆ ಸೇರಿದಂತೆ ಮೈಸೂರು, ಮಂಡ್ಯ, ಚಿತ್ರದುರ್ಗ, ತುಮಕೂರು, ಕಲಬುರಗಿ, ಬೀದರ್‌, ಕೋಲಾರ ಜಿಲ್ಲೆಯಲ್ಲೂ ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗಿದೆ. ಬೆಂಗಳೂರಲ್ಲಿ ಮುಂದಿನ 1 ವಾರ ಪೂರ್ತಿ ಇದೇ ರೀತಿ ಮಳೆ ಅಬ್ಬರ ಇರಲಿದ್ದು, ಎಚ್ಚರಿಕೆಯಿಂದ ಇರಲು ಜನರಿಗೆ ಈಗ ಸೂಚನೆ ನೀಡಲಾಗಿದೆ. ಅಲ್ಲದೆ ಬೆಂಗಳೂರಲ್ಲಿ ಭರ್ಜರಿ ಮಳೆ ಸುರಿಯುವಾಗ ಮರಗಳ ಕೆಳಗೆ, ವಿದ್ಯುತ್ ಕಂಬಗಳ ಪಕ್ಕ ನಿಲ್ಲದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+