Dengue Fever: ಡೆಂಗ್ಯೂ ಪರೀಕ್ಷೆಗೆ ಹೆಚ್ಚುವರಿ ಹಣ ವಸೂಲಿ ಮಾಡಿದ ಲ್ಯಾಬ್‌ಗಳಿಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿ!
ಬೆಂಗಳೂರು, ಜುಲೈ 12: ಡೆಂಗಿ ಜ್ವರ ಪತ್ತೆ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಲ್ಯಾಬ್ ಗಳ ಮೇಲೆ ಆರೋಗ್ಯ ಇಲಾಖೆ ಚಾಟಿ ಬೀಸಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 22 ಲ್ಯಾಬ್ ಗಳಿಗೆ ನೋಟಿಸ್ ನೀಡಿದ್ದಾರೆ.
ಡೆಂಗ್ಯೂ ಚಿಕಿತ್ಸೆಗಾಗಿ ಸರ್ಕಾರ ನಿಗಧಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ದರವನ್ನು ಪಡೆಯುತ್ತಿದ್ದಾರೆಂದು ಮಾಧ್ಯಮದಲ್ಲಿ ವರದಿ ಪ್ರಕಟವಾದ ಹಿನ್ನಲೆಯಲ್ಲಿ ಗುರುವಾರ ಕೆ.ಪಿ.ಎಂ.ಇ ನೋಡಲ್ ಅಧಿಕಾರಿಗಳ ತಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಹಾಗೂ ಆನೇಕಲ್ ತಾಲ್ಲೂಕು ರವರು ತಮ್ಮ ವ್ಯಾಪ್ತಿಯಲ್ಲಿನ 31 ಖಾಸಗಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದರು.

ವಿವಿಧ ಆಸ್ಪತ್ರೆ ಹಾಗೂ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಲಾಗಿ ಇದರಲ್ಲಿ 22 ಲ್ಯಾಬ್‌ನಲ್ಲಿ ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ಹಣ ಪಡೆದತಂಹ ಲ್ಯಾಬ್ ಗಳಿಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ ಹಾಗೂ ಕೆಪಿಎಂಇ ಅಧಿನಿಯಮದಂತೆ ನೋಟಿಸ್ ನೀಡಲಾಗಿದೆ ಹಾಗೂ ಸದರಿ ಕೇಂದ್ರಗಳಿಗೆ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳಲಾಗುತ್ತದೆ.
ಸರ್ಕಾರ ನಿಗಧಿ ಪಡಿಸಿದ ಚಿಕಿತ್ಸಾ ದರ ಈ ಕೆಳಕಂಡಂತಿರುತ್ತದೆ. ಪರಿಷ್ಕೃತ ದರ ರೂ.ಗಳಲ್ಲಿ .300/- ಕ್ರಸಂ ಪರೀಕ್ಷಾ ವಿಧಾನ 1 Dengue ELISA NS1 2 Dengue ELISA IgM B.300/- 3 Screening Test Rapid 0.250/- card test for NS1, IgM & IgG ಇದಕ್ಕಿಂತ ಹೆಚ್ಚಾಗಿ ಪರೀಕ್ಷಾ ಕೇಂದ್ರಗಳು ವಸೂಲಿ ಮಾಡಿದಲ್ಲಿ ಈ ಕೆಳಕಂಡ ಕಾರ್ಯಾಲಯಕ್ಕೆ ದೂರು ಸಲ್ಲಿಸಬಹುದಾಗಿದೆ.
ಕಛೇರಿ ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಬೆಂಗಳೂರು ನಗರ ಜಿಲ್ಲೆ, ಹಳೆ ಕ್ಷಯರೋಗಿಗಳ ಆಸ್ಪತ್ರೆ ಆವರಣ, ಹಳೇ ಮದ್ರಾಸ್ ರಸ್ತೆ, ಇ-ಮೆಲ್ ಇಂದಿರಾನಗರ, ಬೆಂಗಳೂರು, 38. : [email protected] 30: 9449843037.
ಡೆಂಗ್ಯೂ ಎಲಿಸಾ ಎನ್ ಎಸ್1 ಪರೀಕ್ಷೆಗೆ ರೂ.300 ನಿಗದಿ ಪಡಿಸಲಾಗಿದೆ. ಡೆಂಗ್ಯೂ ಎಲಿಸಾ ಐಜಿಎಂ ಪರೀಕ್ಷೆಗೆ ರೂ.300, ಸ್ಟೀನಿಂಗ್ ಟೆಸ್ಟ್, ರಾಪಿಡ್ ಕಾರ್ಡ್ ಟೆಸ್ಟ್ ಫಾರ್ ಎನ್‌ಎಸ್1, ಐಜಿಎಂ ಮತ್ತು ಐಜಿಜಿ ಪರೀಕ್ಷೆಗೆ ರೂ.250 ಅನ್ನು ರಾಜ್ಯ ಸರ್ಕಾರ ನಿಗದಿ ಪಡಿಸಿದೆ. ಇದಕ್ಕಿಂತ ಹೆಚ್ಚು ಹಣವನ್ನು ಲ್ಯಾಬ್ ಗಳು ವಸೂಲಿ ಮಾಡಿದ್ರೆ 9449843037ಗೆ ಕರೆ ಮಾಡಿ ದೂರು ನೀಡಬಹುದಾಗಿದೆ.
ಆರೋಗ್ಯ ಇಲಾಖೆಯಿಂದ ನೋಟಿಸ್ ನೀಡಿದ 22 ಲ್ಯಾಬ್ ಗಳ ಪಟ್ಟಿ ಇಲ್ಲಿದೆ
1. ಪ್ರೈಮ್ ಡಯಾನ್ನೋಸ್ಟಿಕ್ಸ್, ಯಲಹಂಕ
2. ಆಸ್ಟರ್ ಕ್ಲಿನಿಕ್, ಯಲಹಂಕ
3. ಶ್ರೀ ರಾಘವ್ ಕ್ಲಿನಿಕ್, ದೊಡ್ಡಬೊಮ್ಮಸಂದ್ರ
4. ಸಿನ್ಮಾಡಯಾಗ್ನಿಸ್ಟಿಕ್ಸ್, ಯಲಹಂಕ
5. ಆರ್.ಲಾಲ್ ಪಥ್ ಲ್ಯಾಬ್, ಅಲೆನ್ ಕ್ಯಾರಿಯರ್ ಇನ್ಸಿಟ್ಯೂಟ್ ಬಳಿ, ವೈಟ್ ಫೀಲ್ಡ್.
6. ಹೊರಮಾವು ಮುಖ್ಯರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ
7. ಎಸ್ ಜೆಪಿ ಆಸ್ಪತ್ರೆ, ಕಲ್ಕೆರೆ ಮುಖ್ಯರಸ್ತೆ, ಹೊರಮಾವು.
8. ಮೆಡಲ್ ಕುಮ್ಯಾಕ್ಸ್ ಡಯಾಗೋಸ್ಟಿಕ್ಸ್, ಹೊರಮಾವು ಮುಖ್ಯ ರಸ್ತೆ
9. ಟಿಕೆಎಸ್ ಡಯಾನ್ನೋಸ್ಟಿಕ್ ಸೆಂಟರ್, ಹೊಸೂರು ರಸ್ತೆ
10. ವಿನೋದ ಡಯಾಗೋಸ್ಟಿಕ್ಸ್
11. ಮಹೇಶ ಹೆಲ್ತ್ ಕೇರ್, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ
12. ಕ್ರಿಯಾ ಆಸ್ಪತ್ರೆ, ಜೆ.ಪಿ.ನಗರ.
13. ಸ್ಪಿಂಗ್ ಲೈಫ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್, ಎಲೆಕ್ಟ್ರಾನಿಕ್ ಸಿಟಿ
14. ಇ-ಸಿಟಿ ಆಸ್ಪತ್ರೆಗಳು, ಎಲೆಕ್ಟ್ರಾನಿಕ್ ಸಿಟಿ
15. ಬಯೋ ಲೈನ್ ಲ್ಯಾಬೊರೇಟರ್ಸ್, ಜಯನಗರ
16. ಆಂಕ್ವೆಸ್ಟ್, ಜಯನಗರ
17. ಪ್ರಣವ್ ಡಯಾಗೋಸ್ಟಿಕ್ಸ್ ಕಮ್ಮನಹಳ್ಳಿ
18. ಬಾಲಾಜಿ ಲ್ಯಾಬ್ ಡಯಾಗೋಸ್ಟಿಕ್, ಬಾಗಲೂರು
19. ಎಸ್ ಎಲ್ ವಿ ಡಯಾಗೋಸ್ಟಿಕ್, ಬಾಗಲೂರು
20. ಅಲ್ಟಿಯಸ್ ಆಸ್ಪತ್ರೆ, ನಾಗವಾರ ಮುಖ್ಯ ರಸ್ತೆ
21. ಕಾರ್ಟುಲಸ್ ಡಯಾಗೋಸ್ಟಿಕ್ಸ್, ನಾಗವಾರ ಮುಖ್ಯ ರಸ್ತೆ
22. ಈಶಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಮ್ಮನಹಳ್ಳಿ.












Click it and Unblock the Notifications