HD Kumaraswamy: ದಕ್ಷಿಣದ ಮೇಲೆ ಹಿಂದಿ ಹೇರಿಕೆ: ಇದಕ್ಕಿಂತ ಸಾಕ್ಷಿ ಬೇಕಾ ಎಂದ ನೆಟ್ಟಿಗರು!

HD Kumaraswamy: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹಿಂದಿ ಕಲಿಯುವುದಕ್ಕೆ ಶುರು ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಚರ್ಚೆಯಾಗುತ್ತಿದೆ. ಇದರ ನಡುವೆಯೇ ಈ ಹಿಂದೆ ಅವರು ಹಿಂದಿಯ ಬಗ್ಗೆ ಹೇಳಿದ್ದ ಟ್ವೀಟ್ ವೈರಲ್ ಆಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಾಗೂ ಇಲ್ಲಿನ ರಾಜಕಾರಣಿಗಳು ಉನ್ನತ ಸ್ಥಾನ ತಲುಪಿದರೂ ಹೇಗೆ ಅನಿವಾರ್ಯವಾಗಿ ಹಿಂದಿ ಕಲಿಯುವಂತೆ ಮಾಡಲಾಗುತ್ತಿದೆ ಎನ್ನುವ ಟ್ವೀಟ್ ವೈರಲ್ ಆಗುತ್ತಿದೆ. ಎಚ್‌.ಡಿ ಕುಮಾರಸ್ವಾಮಿ ಅವರು ಈ ಹಿಂದೆ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಆ ಟ್ವೀಟ್‌ಗಳು ವೈರಲ್‌ ಆಗಿದ್ದು, ಕೇಂದ್ರ ಸರ್ಕಾರ ಯಾವ ರೀತಿ ಹಿಂದಿ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದೆ ಇನ್ನುವುದನ್ನು ತೋರಿಸುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.

ಹಿಂದಿ ಹೇರಿಕೆಯ ಬಗ್ಗೆ ಪದೇ ಪದೇ ಚರ್ಚೆಯಾಗುತ್ತಲ್ಲೇ ಇರುತ್ತದೆ. ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಹಿಂದಿ ಕಲಿಕೆಯ ವಿಷಯ ಮುನ್ನೆಲೆಗೆ ಬಂದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪರ - ವಿರೋಧ ಚರ್ಚೆ ನಡೆಯುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.

HD Kumaraswamy Hindi imposition on the South Do we need more evidence than this

ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ರವಿ ಅವರು, ಈ ಹಿಂದೆ ಹಿಂದಿ ಹೇರಿಕೆಯ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಇಂದು ಅದೇ ಕೇಂದ್ರ ಸಚಿವರು ಹಿಂದಿ ಕಲಿಕೆಗೆ ಮುಂದಾಗಿದ್ದಾರೆ. ಹಿಂದಿ ರಾಜ್ಯಗಳಲ್ಲಿ ಸಂವಹನಕ್ಕೆ ಹಿಂದಿ ಕಲಿಯುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಕೇಂದ್ರದ ಹಿಂದಿ ಮಾತನಾಡುವ ಒಬ್ಬೇ ಬಬ್ಬರು ಸಚಿವರಾದರೂ ಕನ್ನಡದ ಒಂದು ಪದವನ್ನು ಕಲಿಯಲು ಪ್ರಯತ್ನಿಸಿಲ್ಲ ಎನ್ನುವುದನ್ನು ಎಚ್‌.ಡಿ ಕುಮಾರಸ್ವಾಮಿ ಅವರು ಮರೆತಂತೆ ತೋರುತ್ತದೆ ಎಂದಿದ್ದಾರೆ.

ಭಾರತ ಹಿಂದಿಗೆ ಆದ್ಯತೆ ನೀಡುತ್ತದೆ. ಆದರೆ ಹಿಂದಿಯೇತರ ಭಾಷೆಗಳು ಅಪಾಯದ ಅಂಚಿನಲ್ಲಿವೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. #HindiImposition ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಚ್‌.ಡಿ ಕುಮಾರಸ್ವಾಮಿ ಹಳೆಯ ಟ್ವೀಟ್‌ನಲ್ಲಿ ಏನಿದೆ ?

ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಈ ಹಿಂದೆ ಹಿಂದಿ ಹೇರಿಕೆಯನ್ನು ವಿರೋಧಿಸಿ ಸರಣಿ ಟ್ವೀಟ್‌ ಮಾಡಿದ್ದರು. ಹಿಂದಿ ರಾಜಕೀಯವು ಅನೇಕ ದಕ್ಷಿಣ ಭಾರತೀಯರು ಪ್ರಧಾನಿಯಾಗುವುದನ್ನು ತಡೆಯುತ್ತಿದೆ. ಎಚ್‌.ಡಿ ದೇವೇಗೌಡ ಅವರು, ಕರುಣಾನಿಧಿ ಮತ್ತು ಕಾಮರಾಜ್ ಅವರು ಇದರಲ್ಲಿ ಪ್ರಮುಖರು. ದೇವೇಗೌಡ ಅವರು ಈ ತಡೆಗೋಡೆಯನ್ನು ಬೀಳಿಸುವಲ್ಲಿ ಯಶಸ್ವಿಯಾದರೂ, ಭಾಷೆಯ ಕಾರಣಕ್ಕಾಗಿ ಅವರನ್ನು ಟೀಕಿಸಿದ ಮತ್ತು ಅಪಹಾಸ್ಯ ಮಾಡಿದ ಹಲವು ಘಟನೆಗಳು ನಡೆದಿವೆ ಎಂದಿದ್ದರು.

ನನಗೂ ಇದೇ ರೀತಿಯ ಅನುಭವಗಳಾಗಿವೆ. ನಾನು ಎರಡು ಬಾರಿ ಲೋಕಸಭಾ ಸದಸ್ಯನಾಗಿದ್ದೆ. ಆಡಳಿತ ವರ್ಗವು ದಕ್ಷಿಣ ಭಾರತವನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತದೆ. ಹಿಂದಿ ರಾಜಕಾರಣಿಗಳು ಹೇಗೆ ತಂತ್ರಗಳನ್ನು ಬಳಸುತ್ತಾರೆ ಎಂಬುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರಲ್ಲಿ ಹೆಚ್ಚಿನವರು ಹಿಂದಿಯೇತರ ರಾಜಕಾರಣಿಗಳನ್ನು ಗೌರವಿಸುವುದಿಲ್ಲ ಎಂದೂ ಅವರು ಹೇಳಿದ್ದರು. ಈ ಸರಣಿ ಟ್ವೀಟ್‌ಗಳು ಈಗ ವೈರಲ್‌ ಆಗಿವೆ.

ಹಿಂದಿ ಕಲಿಯುತ್ತಿರುವ ವಿ. ಸೋಮಣ್ಣ: ಇನ್ನು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸಹ ಹಿಂದಿ ಕಲಿಯುತ್ತಿರುವುದಾಗಿ ಈಚೆಗೆ ಹೇಳಿದ್ದರು. ನಿತ್ಯವೂ ಒಂದು ತಾಸು ಹಿಂದಿ ಕಲಿಯತ್ತಿರುವುದಾಗಿ ಅವರು ಹೇಳಿದ್ದರು. ಇದೀಗ ಎಚ್.ಡಿ ಕುಮಾರಸ್ವಾಮಿ ಅವರು ಹಿಂದಿ ಕಲಿಯುವುದಕ್ಕೆ ಶುರು ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+